newsfirstkannada.com

ನೇಹಾ ಹಿರೇಮಠ ಹತ್ಯೆ ಪ್ರಕರಣದ ಮೇಲೆ ನಮಗೆ ಅನುಮಾನ ಇದೆ -ಅಶೋಕ್ ಹೀಗ್ಯಾಕೆ ಅಂದರು?

Share :

Published April 30, 2024 at 12:51pm

  ಫಯಾಜ್ ಎಂಬಾತನಿಂದ ನೇಹಾ ಹಿರೇಮಠ ಕೊಲೆ

  ಹತ್ಯೆ ಖಂಡಿಸಿ ನೇಹಾ ಕುಟುಂಬಕ್ಕೆ ಅಶೋಕ್ ಸಾಂತ್ವನ

  ಒಬ್ಬ ಗೃಹ ಸಚಿವರಾಗಿ ಕಾಮನ್ ಸೆನ್ಸ್ ಇರಬೇಕು ಎಂದ ಅಶೋಕ್

ಹುಬ್ಬಳ್ಳಿ: ಇತ್ತೀಚೆಗೆ ಹತ್ಯೆಯಾದ ನೇಹಾ ಹಿರೇಮಠ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಆರ್​.ಅಶೋಕ್ ಮಾತನಾಡಿ.. ಈ ತರಹದ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸ ಬಾರದು ಅಂದ್ರೆ ಸರ್ಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ನೇಹಾ ಹತ್ಯೆ ವಿಚಾರದಲ್ಲಿ ‌ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜು ಕ್ಯಾಂಪಸ್​ನಲ್ಲಿ ಇಂತಹ ಘಟನೆ‌ ನಡೆದರೂ ಸರ್ಕಾರ ಮುತುವರ್ಜಿ‌ ವಹಿಸಿಲ್ಲ. ಕಾಲೇಜು‌ ಕ್ಯಾಂಪಸ್​ಗಳಲ್ಲಿ‌ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ. ಒಬ್ಬ ಗೃಹ ಸಚಿವರಾಗಿ ಕಾಮನ್ ಸೆನ್ಸ್ ಇರಬೇಕು. ಆರೋಪಿ ಬಂಧನದ ನಂತರ ಯಾಕೆ ಕಾನೂನು ಪ್ರಕ್ರಿಯೆಗಳನ್ನ ಮಾಡಿಲ್ಲ. ಆರೋಪಿಗೆ ಈ‌ ಪ್ರಕರಣದಿಂದ ಪರಾರಿಯಾಗಲು ಪೊಲೀಸ್ ಇಲಾಖೆಯೇ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಕರಣಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಆರೋಪಿ ಕುರಿತು ಯಾವುದೇ ಮಾಹಿತಿ ‌ಕಲೆ ಹಾಕಲು‌ ಇಲಾಖೆ ಮುಂದಾಗಿಲ್ಲ. ಈವರೆಗೂ ಸರ್ಕಾರಿ ವಕೀಲರನ್ನು ನೇಮಿಸಿಲ್ಲ. ಇದು ಲವ್ ಜಿಹಾದ್ ಅಂತಾ ಗೊತ್ತಾದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿಯೇ ಈವರೆಗೂ ನೇಹಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

ಮೂರ್ನಾಲ್ಕು ತಿಂಗಳ ನಂತರ ಈ‌ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಹತ್ಯೆ ಪ್ರಕರಣದಲ್ಲಿ ಕೇವಲ‌ ಒಬ್ಬನನ್ನ ಮಾತ್ರ ಬಂಧನ ಮಾಡಿದ್ದಾರೆ. ಅವನಿಗೆ ಕುಮ್ಮಕ್ಕು ನೀಡಿದವರು, ಅವನ‌ ಒಡನಾಡಿಗಳನ್ನು ಯಾಕೆ ಬಂಧನ ಮಾಡಿಲ್ಲ? ಅವನ ಹಿಂದೆ ಯಾವ ಸಂಘಟನೆಗಳ ಕುಮ್ಮಕ್ಕು‌ ಇದೆ? ಮತಾಂತರಕ್ಕೆ ಅವನು‌ ಬೇಡಿಕೆ ಇಟ್ಟಿದ್ನಾ? ಅವರ ಕುಡುಂಬಸ್ಥರು ನೇಹಾಳನ್ನ ಮತಾಂತರಕ್ಕೆ ಬೇಡಿಕೆ ಇಟ್ಟಿದ್ನಾ? ಈ‌ ಎಲ್ಲದರ ಬಗ್ಗೆ ಪೊಲೀಸ್ ಇಲಾಖೆ ಯಾಕೆ ತನಿಖೆ ಮಾಡಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

ನೇಹಾ ಹತ್ಯೆ ಪ್ರಕರಣದಲ್ಲಿ ನಮಗೆ ಅನುಮಾನ ಇದೆ. ಸಿಐಡಿ ತನಿಖೆಯಿಂದ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇಲ್ಲ. ಈ‌ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇವೆ. ಈ ರೀತಿಯ ಘಟನೆ ಮರುಕಳಿಸಂತೆ ಕಾಲೇಜು ಆಡಳಿತ ಮಂಡಳಿ ಎಚ್ಚರ ವಹಿಸಬೇಕಿದೆ ಎಂದು ಆಗ್ರಹಿಸಿದರು.

ಇದನ್ನೂ ಓದಿ:KL ರಾಹುಲ್ ಜೊತೆ ರೋಹಿತ್ ಮೀಟಿಂಗ್; ಕನ್ನಡಿಗನಿಗೆ ವಿಶ್ವಕಪ್ ತಂಡದಲ್ಲಿ ಸಿಗಲ್ವಾ ಚಾನ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹಿರೇಮಠ ಹತ್ಯೆ ಪ್ರಕರಣದ ಮೇಲೆ ನಮಗೆ ಅನುಮಾನ ಇದೆ -ಅಶೋಕ್ ಹೀಗ್ಯಾಕೆ ಅಂದರು?

https://newsfirstlive.com/wp-content/uploads/2024/04/R-ASHOK.jpg

Load More