/newsfirstlive-kannada/media/post_attachments/wp-content/uploads/2024/05/R-Ashok.jpg)
ರಾಜ್ಯದಲ್ಲಿ ಒಬ್ಬರಾದ ಮೇಲೊಬ್ಬ ನಾಯಕರು ಭೂವಿವಾದದಲ್ಲಿ ಲಾಕ್ ಆಗುತ್ತಿದ್ದಾರೆ. ಸದ್ಯ ಮುಡಾ ಹಗರಣ ತನಿಖೆಯಲ್ಲಿರುವಾಗಲೇ ಮತ್ತೊಬ್ಬ ನಾಯಕನಿಗೆ ಮಣ್ಣಿನ ಕೆಸರು ಮೆತ್ತಿಕೊಳ್ಳುವ ಲಕ್ಷಣಗಳು ದಟ್ಟವಾಗಿವೆ. ವಿಧಾನಸಭೆಯ ನಾಯಕ ಸಿಎಂ ವಿರುದ್ಧ ಮುಡಾ ಮುಳ್ಳಾದ್ರೆ ಈಗ ವಿಪಕ್ಷ ನಾಯಕನ ವಿರುದ್ಧವೂ ಮತ್ತೊಂದು ಕಂಟಿ ಚುಚ್ಚುತ್ತಿದೆ.
ರಾಜ್ಯಕ್ಕೆ ಮಣ್ಣಿನ ಕಂಟಕವೋ ಅಥವಾ ರಾಜ್ಯದ ರಾಜಕೀಯ ನಾಯಕರಿಗೆ ಮಣ್ಣಿನ ಕಂಟಕವೋ? ಬಿಎಸ್​ ಯಡಿಯೂರಪ್ಪ, ಜನಾರ್ದನ್ ರೆಡ್ಡಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೀಗೆ ಸಾಲು ಸಾಲು ಘಟಾನುಘಟಿಗಳು ಈ ಮಣ್ಣಿನ ಕೆಸರನ್ನ ಮೆತ್ತಿಕೊಂಡವರೇ. ಸದ್ಯ ಮುಡಾ ಮಣ್ಣಿನ ಕೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿರುವಾಗಲೇ ಕೆಸರು ಮತ್ತೊಬ್ಬ ಸಾಮ್ರಾಟ್​ಗೆ ರಾಚುತ್ತಿದೆ.
ವಿಪಕ್ಷ ನಾಯಕ ಅಶೋಕ್​ ವಿರುದ್ಧ ಜಮೀನು ಹಗರಣ ಬ್ಲಾಸ್ಟ್​!
ಮುಡಾ ಹಗರಣ ದಿನಕ್ಕೊಂದು ಕಾವು ಪಡೆದುಕೊಳ್ತಿರುವ ಹೊತ್ತಲ್ಲಿ ವಿಪಕ್ಷ ನಾಯಕ ಅಶೋಕ್​ ವಿರುದ್ಧ ಜಮೀನು ಹಗರಣವೊಂದು ಬ್ಲಾಸ್ಟ್​ ಆಗಿದೆ. ಕಾಂಗ್ರೆಸ್ ಹಿರಿಯ ಸಚಿವರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಹೆಚ್​ಕೆ ಪಾಟೀಲ್ ಜಂಟಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳ ಸಮೇತ ದಾಳಿ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/CONGRESS-ALLIGATION-ON-ASHOK.jpg)
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಸೈಟ್ ವಾಪಸ್ ಮಾಡಿದ ವಿಷಯವನ್ನು ಬಿಜೆಪಿ ನಾಯಕರು ಬೇರೆ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿರುವುದು ತಪ್ಪು ಎನ್ನಲಾಗುತ್ತಿದೆ. ಆದರೆ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಹಗರಣ ನಡೆದಿದ್ದು ಅದನ್ನು ದಾಖಲೆ ಸಮೇತ ಹೇಳುತ್ತೇವೆ ಅಂತ ಸಚಿವ ಪರಮೇಶ್ವರ್ ಪುರಾಣ ಕೆದಕಿದ್ದಾರೆ. ಲೊಟ್ಟೆಗೊಲ್ಲಹಳ್ಳಿಯ ಸರ್ವೇ ನಂಬರ್ 10/11 ಎಫ್ 1 ಹಾಗೂ ಎಫ್ 2ರಲ್ಲಿರುವ ಜಮೀನು ಹಗರಣ ನಡೆದಿದೆ. ಬಿಡಿಎ ಭೂಮಿ ಸ್ವಾಧೀನಪಡಿಸಿಕೊಂಡು ಪುನಃ ಭೂಮಿ ವಾಪಸ್ ನೀಡಿದ ಬಗ್ಗೆ ಮಾತನಾಡಬೇಕು ಅಂತ ಆರ್.ಅಶೋಕ್ ಸೇರಿ ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಇದು ಸಿದ್ದರಾಮಯ್ಯ ಪ್ರಕರಣಕ್ಕೂ ಹೋಲಿಕೆಯಾಗಿದೆ. ಅಶೋಕ್ ಹೆಜ್ಜೆ ಹೆಜ್ಜೆಗೂ ಅಕ್ರಮ ಮಾಡಿದ್ದಾರೆ. ಹೀಗಾಗಿ ನೀವು ಕೂಡ ರಾಜೀನಾಮೆ ಕೊಡಿ ಅಂತ ಆಗ್ರಹಿಸಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್​, ಇದೆಲ್ಲದರ ಕುರಿತು ಇಂದು ಬೆಳಿಗ್ಗೆ 9:45ಕ್ಕೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಒಟ್ಟಾರೆ ಮುಡಾ ಹಗರಣ ಸಂಬಂಧ ದಿನಕ್ಕೊಂದು ಬೆಳವಣಿಗೆಯಾಗುತ್ತಿರುವಾಗಲೇ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧವೂ ಭೂವಿವಾದ ಸುತ್ತಿಕೊಂಡಿದೆ. ಈ ಬಗ್ಗೆ ಇಂದು ಅದ್ಯಾವ ಸ್ಪಷ್ಟನೆ ಕೊಡ್ತಾರೋ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us