/newsfirstlive-kannada/media/post_attachments/wp-content/uploads/2025/06/R_ASHWIN_2.jpg)
ರವಿಚಂದ್ರನ್ ಅಶ್ವಿನ್ ದಿ ಲೆಜೆಂಡರಿ ಸ್ಪಿನ್ನರ್. ತಮಿಳುನಾಡಿನ ಈ ಆಫ್ ಸ್ಪಿನ್ನರ್ ಕೂಲ್ ಆ್ಯಂಡ್ ಕಾಮ್ ವ್ಯಕ್ತಿತ್ವದಿಂದಲೇ ಪರಿಚಯ. ಆದ್ರೀಗ ಇದೇ ಅಶ್ವಿನ್, ಕಿರಿಕ್ ಅಶ್ವಿನ್ ಆಗಿ ಬಿಟ್ಟಿದ್ದಾರೆ. ಈ ಹಿಂದೆ ದಾಖಲೆಗಳ ಮೂಲಕ ಸದ್ದು ಮಾಡ್ತಿದ್ದ ಅಶ್ವಿನ್, ಈಗ ಕಿರಿಕ್ ಮಾಡ್ಕೊಂಡೇ ಹೆಚ್ಚು ಸೌಂಡ್ ಮಾಡ್ತಿದ್ದಾರೆ.
ಅಶ್ವಿನ್.. ಟೀಮ್ ಇಂಡಿಯಾದ ಲೆಜೆಂಡರಿ ಆಫ್ ಸ್ಪಿನ್ನರ್. ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿರುವ ಅಶ್ವಿನ್, ಟೀಮ್ ಇಂಡಿಯಾ ಪರ ಮಾಡಿದ ದಾಖಲೆಗಳಿಗೆ ಲೆಕ್ಕವಿಲ್ಲ. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಅಂತಾನೇ ಕರೆಸಿಕೊಳ್ತಿದ್ದ ಅಶ್ವಿನ್, ಅದೆಷ್ಟೋ ಪಂದ್ಯಗಳಲ್ಲಿ ಆಪ್ತರಕ್ಷಕನಾಗಿ ನಿಂತಿದ್ದಿದೆ. ತಂಡವನ್ನು ಗೆಲ್ಲಿಸಿದ್ದಿದೆ. ಆದ್ರೀಗ ಇದೇ ಅಶ್ವಿನ್, ಕಿರಿಕ್ ಹಾಗೂ ವಿವಾದಗಳಿಂದಲೇ ಚರ್ಚೆಯಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಮಾಡಿಕೊಂಡ ಅವಾಂತರಗಳು.
ವಿವಾದ 01- ಅಶ್ವಿನ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ
ಟೀಮ್ ಇಂಡಿಯಾದ ಮಾಜಿ ಆಟಗಾರ, ದಿಂಡಿಗಲ್ ಡ್ರ್ಯಾಗನ್ಸ್ ಕ್ಯಾಪ್ಟನ್ ಆರ್.ಅಶ್ವಿನ್, ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದಿದೆ. ಈ ಕುರಿತು ಮಧುರೈ ಪ್ಯಾಂಥರ್ಸ್ ಅಧಿಕೃತ ದೂರು ದಾಖಲಿಸಿದೆ. ಚೆಂಡು ಭಾರಗೊಳಿಸಲು ದಿಂಡಿಗಲ್ ಡ್ರ್ಯಾಗನ್ಸ್, ರಾಸಾಯನಿಕ ಸಂಸ್ಕರಿಸಿದ ಟವೆಲ್ ಬಳಸಿದೆ ಎಂದು ಗಂಭೀರ ಆರೋಪ ಮಾಡಿದೆ. ಇದೇ ಕಾರಣಕ್ಕೆ ಚೆಂಡು ಹೊಡೆದಾಗ ಲೋಹದ ಮಾದರಿಯ ಶಬ್ದ ಬರುತ್ತಿತ್ತು ಎಂದು ಆರೋಪಿಸಿದೆ.
ವಿವಾದ 02- ಔಟ್ ನೀಡಿದಕ್ಕೆ ಅಂಪೈರ್ ಮೇಲೆ ಸಿಟ್ಟು..
ತಿರುಪ್ಪೂರ್ ತಮಿಜಾನ್ಸ್ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ 18 ರನ್ಗಳಿಸಿ ಬ್ಯಾಟ್ ಬೀಸ್ತಿದ್ದ ದಿಂಡಿಗಲ್ ಡ್ರ್ಯಾಗನ್ಸ್ ನಾಯಕ ಅಶ್ವಿನ್, ಸಾಯಿ ಕಿಶೋರ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಎಲ್ಬಿಡ್ಲೂ ಆಗಿದ್ದರು. ಮಹಿಳಾ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದಕ್ಕೆ ಕುಪಿತಗೊಂಡಿದ್ದ ಅಶ್ವಿನ್, ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಅಶ್ವಿನ್ ರೋಷಾವೇಷ ಇಷ್ಟಕ್ಕೆ ನಿಲ್ಲಲಿಲ್ಲ. ಪೆವಿಲಿಯನ್ಗೆ ಹೆಜ್ಜೆ ಹಾಕುತ್ತಾ ಸಾಗಿದ ಕ್ಯಾಪ್ಟನ್ ಅಶ್ವಿನ್, ಗ್ಲೌಸ್ ಎಸೆದು ಆಕ್ರೋಶ ಹೊರಹಾಕಿದ್ದರು.
ಅಷ್ಟೇ ಅಲ್ಲ, ಈ ಘಟನೆಗೂ ಮುನ್ನ ಅಂಪೈರ್ ವೈಡ್ ನೀಡಿದ್ದಕ್ಕೆ ಅಶ್ವಿನ್, ಫುಲ್ ಗರಂ ಆಗಿದ್ದರು. ಆದ್ರೆ, ಅಶ್ವಿನ್, ಡಿಆರ್ಎಸ್ ತೆಗೆದುಕೊಂಡರು ಉಪಯೋಗಕ್ಕೆ ಬಾರಲಿಲ್ಲ. ಇದೇ ಘಟನೆಯೇ ಇಷ್ಟೆಲ್ಲಾ ರದ್ದಾಂತಕ್ಕೆ ನಾಂದಿಯಾಡಿತು.
ವಿವಾದ 03- ಸಾಯಿ ಕಿಶೋರ್ ಮೇಲೆ ಹಲ್ಲೆಗೆ ಮುಂದಾಗಿದ್ದ ಅಶ್ವಿನ್..!
2016 ಇದೇ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ಎದುರು ಅಶ್ವಿನ್, ಸಾಯಿ ಕಿಶೋರ್ ಮೇಲೆ ಕೈ ಮಿಲಾಯಿಸಲು ಮುಂದಾಗಿದರು. ಇದಕ್ಕೆ ಕಾರಣವಾಗಿದ್ದು ಸಾಯಿ ಕಿಶೋರ್ ಸೆಲೆಬ್ರೇಷನ್. ಸಾಯಿ ಕಿಶೋರ್ಗೆ ಅಶ್ವಿನ್ ವಿಕೆಟ್ ಒಪ್ಪಿಸಿದ್ರು. ಈ ವೇಳೆ ವಿಕೆಟ್ ಪಡೆದ ಸಂಭ್ರಮದಲ್ಲಿ ಸಾಯಿ, ಅಶ್ವಿನ್ ಮುಂದೆ ಅಗ್ರೆಸ್ಸಿವ್ ಸೆಲೆಬ್ರೇಷನ್ ಮಾಡಿದ್ರು. ಈ ವೇಳೆ ತಾಳ್ಮೆ ಕಳೆದುಕೊಂಡಿದ್ದ ಅಶ್ವಿನ್, ಬ್ಯಾಟ್ ಎತ್ತಿ ಹೊಡೆಯಲು ಯತ್ನಿಸಿದರು. ಕೆಲ ಕಾಲ ಕ್ರೀಡಾಂಗಣ ಅಕ್ಷರಶಃ ರಣಾಂಗಣವಾಗಿತ್ತು.
ವಿವಾದ 04- ಡಿಆರ್ಎಸ್ಗೆ ಸವಾಲ್ ಎಸೆದಿದ್ದ ಅಶ್ವಿನ್..!
2023ರ ತಮಿಳುನಾಡು ಪ್ರೀಮಿಯರ್ ಲೀಗ್.. ಈ ಲೀಗ್ನಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದು ಅಶ್ವಿನ್, ಬ್ಯಾಕ್ ಟು ಬ್ಯಾಕ್ ಎರಡು ಡಿಆರ್ಎಸ್ ತೆಗೆದುಕೊಂಡಿದ್ದಾಗಿತ್ತು. ಯಾಕಂದ್ರೆ, ತಿರುಚ್ಚಿ ಗ್ರ್ಯಾಂಡ್ ಚೋಳಾಸ್ ಎದುರಿನ ಪಂದ್ಯದಲ್ಲಿ ರಾಜ್ಕುಮಾರ್, ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ರು. ಇದಕ್ಕೆ ಆನ್ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ರು.
ಆದ್ರೆ, ಬ್ಯಾಟರ್ ಆನ್ಫೀಲ್ಡ್ ಅಂಪೈರ್ ತೀರ್ಪು ಪ್ರಶ್ನಿಸಿ ಡಿಆರ್ಎಸ್ ಮೋರೆ ಹೋದರು. ಅಲ್ಟ್ರಾ ಎಡ್ಜ್ನಲ್ಲಿ ಬಾಲ್ ಹಾಗೂ ಬ್ಯಾಟ್ ನಡುವೆ ಅಂತರ ಕಾಣ್ತಿತ್ತು. ಸ್ನಿಕೋ ಮೀಟರ್ನಲ್ಲಿ ಬಾಲ್ ತಾಗಿದಂತೆ ಕಾಣ್ತಿದ್ದರು. ಥರ್ಡ್ ಅಂಪೈರ್ ನಾಟೌಟ್ ತೀರ್ಪು ನೀಡಿದ್ರು. ಇದಕ್ಕೆ ಬೇಸರಗೊಂಡಿದ್ದ ಅಶ್ವಿನ್, ಥರ್ಡ್ ಅಂಪೈರ್ ತೀರ್ಪನ್ನೇ ಪ್ರಶ್ನಿಸಿ ಮತ್ತೆ ಡಿಆರ್ಎಸ್ ತೆಗೆದುಕೊಂಡಿದ್ದರು.
ಇದನ್ನೂ ಓದಿ:ಬೈಕ್ ಸವಾರನ ಮೇಲೆ ಮರಬಿದ್ದು ಮೆದುಳು ನಿಷ್ಕ್ರಿಯ.. ಆಸ್ಪತ್ರೆಯ ಬಿಲ್ ಪಾವತಿ ಮಾಡಿದ BBMP
ವಿವಾದ 5- ಸಹ ಆಟಗಾರನೇ ಮೇಲೆಯೇ ಕೋಪ..!
2024ರ ಎಲಿಮಿನೇಟರ್ ಮ್ಯಾಚ್.. ಈ ಪಂದ್ಯದಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ 23 ಎಸೆತಗಳಲ್ಲಿ 22 ರನ್ ಗಳಿಸಬೇಕಿತ್ತು. ಈ ವೇಳೆ ಶರತ್ ಕುಮಾರ್, ಡೀಪ್ ಫಾರ್ವರ್ಡ್ ಮೇಲೆ ಹೊಡೆಯಲು ಯತ್ನಿಸಿದರು. ಆದ್ರೆ, ಫೀಲ್ಡರ್ನ ಮಹಾ ಯಡವಟ್ಟಿನಿಂದ ಕ್ಯಾಚ್ ಮಿಸ್ಸಾಯ್ತು. ಈ ವೇಳೆ ಬ್ಯಾಟರ್ಗೆ ಕೈ ಸನ್ಹೆ ಮೂಲಕ ನಿಂದಿಸಿದರು.
ಆರ್.ಅಶ್ವಿನ್ರ ಈ ಕಿರಿಕ್ ಇಲ್ಲೇ ಅಲ್ಲ. ಐಪಿಎಲ್ನಲ್ಲೂ ಜೋಸ್ ಬಟ್ಲರ್ನ ಮಂಕಡಿಂಗ್ ಮಾಡಿ ವಿವಾದ ಮೇಮೈಲೆ ಎಳೆದುಕೊಂಡಿದ್ರು. ಕೆಲ ವಿಚಾರಗಳಲ್ಲಿ ಅಶ್ವಿನ್, ಕ್ರಿಕೆಟ್ ರೂಲ್ ಬುಕ್ನಂತೆಯೇ ನಡೆದುಕೊಂಡರು. ತನ್ನ ಮುಂಗೋಪದಿಂದ ಕಿರಿಕ್ ಅಶ್ವಿನ್, ಬ್ಯಾಡ್ ಬಾಯ್ ಎಂಬ ನಿಕ್ ನೇಮ್ಸ್ ಬರುವಂತೆ ಮಾಡಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ