ಕೊಹ್ಲಿ ಬದಲಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬೇಕಿದ್ದ R ಅಶ್ವಿನ್; ಅಂದು ಸೈಡ್​ಲೈನ್​ ಮಾಡಿದ್ಯಾರು?

author-image
Ganesh Nachikethu
Updated On
ರೋಹಿತ್- ಕೋಚ್ ಗಂಭೀರ್​ ಮಧ್ಯೆ ಎಲ್ಲವೂ ಸರಿ ಇಲ್ವಾ.. BCCI ಸಭೆಯಲ್ಲಿ ಏನೇನ್ ಚರ್ಚೆ ಆಗುತ್ತೆ?
Advertisment
  • ಭಾರತೀಯ ಕ್ರಿಕೆಟ್​ನಲ್ಲಿ ಆರ್​​. ಅಶ್ವಿನ್ ಗೋಲ್ಡನ್ ಎರಾ ಅಂತ್ಯ
  • 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದ್ರು
  • ರವಿಚಂದ್ರನ್ ಅಶ್ವಿನ್​ಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ತಪ್ಪಿಸಿದ್ಯಾರು?

ಭಾರತೀಯ ಕ್ರಿಕೆಟ್​ನಲ್ಲಿ ರವಿಚಂದ್ರನ್ ಅಶ್ವಿನ್ ಗೋಲ್ಡನ್ ಎರಾ ಅಂತ್ಯವಾಗಿದೆ. ತನ್ನ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್​​ ಕರಿಯರ್​ನಲ್ಲಿ ಅಶ್ವಿನ್, ಆಟಗಾರನಾಗಿ ಅದೆಷ್ಟೋ ಸಾಧನೆ, ದಾಖಲೆಗಳನ್ನ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿನ ತಂಡದ ಸದಸ್ಯನಾಗಿ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದ ಆಟಗಾರನಾಗಿ ಹಾಗೆ ವೈಯಕ್ತಿಕವಾಗಿ ಅಶ್ವಿನ್, ಅದೆಷ್ಟೋ ಅವಾರ್ಡ್​ಗಳನ್ನ​ ಪಡೆದುಕೊಂಡಿದ್ದಾರೆ. ಆದ್ರೆ ಅಶ್ವಿನ್​ಗೆ ಆ ಒಂದು ಕೊರಗೂ ಮಾತ್ರ, ಇಂದಿಗೂ ಮತ್ತು ಎಂದೆಂದಿಗೂ ಕಾಡುತ್ತಲೇ ಇರುತ್ತದೆ..! ಅದುವೇ ಕ್ಯಾಪ್ಟನ್ಸಿ..!

ಅಶ್ವಿನ್​ ಭಾರತ ಕ್ರಿಕೆಟ್ ತಂಡದ ನಾಯಕನೂ ಆಗಲಿಲ್ಲ, ಉಪನಾಯಕನೂ ಆಗಲಿಲ್ಲ. 2011ರಿಂದ 2017ರವರೆಗೂ ಅಶ್ವಿನ್ ರೆಗ್ಯೂಲರ್ ಆಗಿ ಟೀಮ್ ಇಂಡಿಯಾದಲ್ಲಿ ಇದ್ರೂ, ಕ್ಯಾಪ್ಟನ್ಸಿ ಭಾಗ್ಯ ಮಾತ್ರ ಸಿಗಲೇ ಇಲ್ಲ. ಧೋನಿ ನಂತರ ವಿರಾಟ್ ಕೊಹ್ಲಿ ತಂಡದ ನಾಯಕನಾದ್ರು. ಆದ್ರೆ ಅಶ್ವಿನ್​​ಗೆ ತಂಡವನ್ನ ಮುನ್ನಡೆಸೋ ಸಾಮರ್ಥ್ಯ ಇದ್ರೂ, ಆ ಅವಕಾಶ ಮಾತ್ರ ಸಿಗಲೇ ಇಲ್ಲ.

2017ರಲ್ಲಿ ಭಾರತ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಉಪನಾಯಕನಾಗಲು ಅಶ್ವಿನ್​ಗೆ ಅವಕಾಶ ಇತ್ತು. ಆದ್ರೆ ಅಲ್ಲೂ ಅಶ್ವಿನ್ ಅವ​ರನ್ನ ಸೈಡ್​​ಲೈನ್ ಮಾಡಲಾಯ್ತು. ಅಂದಿನ ಆಯ್ಕೆ ಸಮಿತಿ, ಕೊಹ್ಲಿ ಡೆಪ್ಯೂಟಿಯಾಗಿ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆಯನ್ನ ನೇಮಿಸಿತು. ನಿಜ ಹೇಳಬೇಕಂದ್ರೆ, ಅಶ್ವಿನ್​ಗೆ ನಾಯಕನಾಗೋ ಎಲ್ಲಾ ಅರ್ಹತೆ ಇತ್ತು. ಆದ್ರೆ ಅಶ್ವಿನ್​ರನ್ನ ಬ್ಯಾಕ್​ ಮಾಡೋಕೆ ಬಿಸಿಸಿಐನಲ್ಲಿ, ಯಾರೂ ಇರ್ಲಿಲ್ಲ.

ಈಗಲೂ ಕಾಡುತ್ತಲೇ ಇದೆ ಆ ಕೊರಗು

ನಾಯಕನಾಗಲಿಲ್ಲ ಅಂತ ಅಶ್ವಿನ್​ಗೆ ತುಂಬಾ ಬೇಜಾರಾಗಿದೆ ನಿಜ. ಆದ್ರೆ ಅಶ್ವಿನ್, ನಾಯಕನಾಗೋ ಆಸೆಯನ್ನ ಯಾವತ್ತೋ ಕೈಬಿಟ್ಟಿದ್ರು. ಹೌದು..! ಅಶ್ವಿನ್ ಯಾವ ಆಟಗಾರನಿಗಿಂತ ಕಡಿಮೆ ಹೇಳಿ! ಅಶ್ವಿನ್ ಒಬ್ಬ ಟೀಮ್ ಮ್ಯಾನ್. ತಂಡದ ಗೆಲುವಿಗಾಗಿ ಅಶ್ವಿನ್ ಏನ್ ಬೇಕಾದ್ರೂ ಮಾಡ್ತಾರೆ. ಎಲ್ಲಾ ಅರ್ಹತೆ, ಕ್ವಾಲಿಟೀಸ್ ಇರೋ ಅಶ್ವಿನ್​ ಅವರನ್ನ ಬಿಗ್​ಬಾಸ್​ಗಳು ನಂಬಲೇ ಇಲ್ಲ. ಬದಲಿಗೆ ಅಶ್ವಿನ್ ಮೇಲೆ ಗೂಬೆ ಕೂರಿಸಿ, ಕ್ಯಾಪ್ಟನ್ಸಿ ಮಿಸ್ ಮಾಡಿಸಿದ್ರು.

ಅಶ್ವಿನ್​ಗೆ ನಾಯಕತ್ವ ತಪ್ಪಿಸಲು, ಅವ್ರ ಮೇಲೆ ಇಲ್ಲ ಸಲ್ಲದ ಚರ್ಚೆಗಳು ನಡೆದವು. ಅಶ್ವಿನ್ ಒಬ್ಬ OVER THINKER! ಅಶ್ವಿನ್​ಗೆ ಕ್ಯಾಪ್ಟನ್ಸಿ ಕೊಡಬಾರದು ಅಂತ ಬಿಸಿಸಿಐನಲ್ಲೇ ವಿರೋಧ ವ್ಯಕ್ತವಾಗಿತ್ತು. ಈ ಮಾತುಗಳು ಅಶ್ವಿನ್ ಕಿವಿಗೆ ಯಾವಾಗ ಬಿತ್ತೋ, ನಾಯಕತ್ವದ ಆಸೆಯನ್ನೇ ಕೈಬಿಟ್ಟು ಕೈತೊಳೆದುಕೊಂಡರು. ತಂಡದ ಒಬ್ಬ SINCERE ಆಟಗಾರನನ್ನ OVER THINKER ಅಂದ್ರೆ ಹೇಗೆ? ಇದೇ ಅಶ್ವಿನ್​ಗೆ ಸಿಕ್ಕ ಮರ್ಯಾದೆ.

ಇದನ್ನೂ ಓದಿ:ಅಶ್ವಿನ್ ನಿವೃತ್ತಿ ಬಗ್ಗೆ ರೋಹಿತ್​ಗೆ ಮೊದಲೇ ಗೊತ್ತಿತ್ತಾ? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment