/newsfirstlive-kannada/media/post_attachments/wp-content/uploads/2024/10/RCB-News.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿ ಎಲ್ಲಾ ತಂಡಗಳು ಬಲಿಷ್ಠ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸ್ಟ್ರಾಂಗ್ ಆಗಿರೋ ಟೀಮ್ ಅನ್ನೇ ರೆಡಿ ಮಾಡಿಕೊಂಡಿದೆ. ಆದರೆ ಕ್ಯಾಪ್ಟನ್ ಯಾರು ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ. ಆದರೆ ಆರ್.ಅಶ್ವಿನ್ ಮಾತ್ರ ವಿರಾಟ್ ಕೊಹ್ಲಿಯೇ ಆರ್ಸಿಬಿ ಕ್ಯಾಪ್ಟನ್ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಆರ್ಸಿಬಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚು ಇದೆ ಎಂದು ಟೀಮ್ ಇಂಡಿಯಾದ ಸ್ಪಿನ್ನರ್ ಆರ್.ಅಶ್ವಿನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಮಾತನಾಡಿದ ಅವರು, 2025ರ ಐಪಿಎಲ್ನ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ಫ್ರಾಂಚೈಸಿ ನಾಯಕನಾಗುವಂತ ಆಟಗಾರನನ್ನ ಖರೀದಿ ಮಾಡಿಲ್ಲ. ಹೀಗಾಗಿ ಕೊಹ್ಲಿ ಕ್ಯಾಪ್ಟನ್ ಆಗುವುದು ದಟ್ಟವಾಗಿದೆ. ಫ್ರಾಂಚೈಸಿ ಅಚ್ಚರಿ ಪ್ಲೇಯರ್ನನ್ನ ನಾಯಕನಾಗಿ ಘೋಷಷಿಸಬೇಕು ಎಂದರೆ ಕೊಹ್ಲಿಗಿಂತ ಶ್ರೇಷ್ಠ ಆಟಗಾರ ಆ ತಂಡದಲ್ಲಿ ಸದ್ಯಕ್ಕೆ ಯಾರು ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೋಟಿ ಕೋಟಿ ಹಣ ಗಳಿಸಿದ್ರೂ 400 ರೂಪಾಯಿ ಕೊಟ್ಟ ವ್ಯಕ್ತಿನ ಮರೆತಿಲ್ಲ ಪಾಂಡ್ಯ ಬ್ರದರ್ಸ್; ಸಖತ್ ಸ್ಟೋರಿ!
ಆರ್ಸಿಬಿ ಕ್ಯಾಪ್ಟನ್ ಯಾರು ಆಗಬಹುದೆಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿರುವಾಗಲೇ ಆರ್.ಅಶ್ವಿನ್ ಅವರ ಮಾತು ಚರ್ಚೆ ಉಂಟು ಮಾಡಿವೆ. ಈ ಹಿಂದೆಯೇ ಅಂದರೆ 2013 ರಿಂದ 2021ರ ವರೆಗೆ ವಿರಾಟ್ ಕೊಹ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿದ್ದರು. ಈ ವೇಳೆ ತಂಡ ಉತ್ತಮವಾಗಿಯೇ ಪ್ರದರ್ಶನ ನೀಡಿತ್ತು. ಈಗ ಮತ್ತೆ ವಿರಾಟ್ ಕೊಹ್ಲಿ ಅವರೇ ನಾಯಕರಾಗಬಹುದೆಂದು ಹೇಳಲಾಗುತ್ತಿದೆ. ಆದರೆ ಫ್ರಾಂಚೈಸಿಯ ಅಂತಿಮ ಘೋಷಣೆಗಾಗಿ ಎಲ್ಲರೂ ಕಾಯುವಂತೆ ಆಗಿದೆ.
ಇನ್ನು 2025ರ ಐಪಿಎಲ್ನ ಮೆಗಾ ಆಕ್ಷನ್ನಲ್ಲಿ ಆರ್ ಅಶ್ವಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿ ಮಾಡಿದೆ. 9.75 ಕೋಟಿ ರೂಪಾಯಿ ನೀಡಿ ಸಿಎಸ್ಕೆ ಖರೀದಿಸಿದೆ. ಈ ಮೂಲಕ ಆರ್ ಅಶ್ವಿನ್ ಅವರು ಮತ್ತೆ ತವರಿನ ಟೀಮ್ನಲ್ಲಿ ಕಮಾಲ್ ಮಾಡಲಿದ್ದಾರೆ. ಇನ್ನುಳಿದಂತೆ ಕೆಲ ಐಪಿಎಲ್ ಟೀಮ್ಗಳ ನಾಯಕ ಯಾರು ಎಂದು ನಿರ್ಧಾರ ಆಗಬೇಕಿದೆ.
ಇದನ್ನೂ ಓದಿ:RCB ಸ್ಟಾರ್ ಸಾಲ್ಟ್, ಜೇಕಬ್ ಬ್ಯಾಟಿಂಗ್ ಬೆಚ್ಚಿಬಿದ್ದ ಭಾರತ; ಟೀಮ್ ಇಂಡಿಯಾಗೆ ಇಂಗ್ಲೆಂಡ್ ಟಾರ್ಗೆಟ್ ಎಷ್ಟು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ