/newsfirstlive-kannada/media/post_attachments/wp-content/uploads/2024/12/R-Ashwin-2.jpg)
ರವಿಚಂದ್ರನ್ ಅಶ್ವಿನ್.. ಟೀಮ್ ಇಂಡಿಯಾದ ಆಫ್ ಸ್ಪಿನ್ನರ್.. ಮ್ಯಾಚ್ ವಿನ್ನರ್.. ರೆಕಾರ್ಡ್ಸ್ ಬ್ರೇಕರ್.. ಚಾಣಾಕ್ಷ ಸ್ಪಿನ್ನರ್. ಇನ್ಮುಂದೆ ಈ ಲೆಜೆಂಡರಿ ಪ್ಲೇಯರ್ ಅಂಗಳಕ್ಕಿಳಿಯಲ್ಲ. ಟೀಮ್ ಇಂಡಿಯಾ ಪರ ವೈಟ್ ಜೆರ್ಸಿಯಲ್ಲೂ ಕಾಣಲ್ಲ. ಬೆಂಚ್ ಕಾದಿದ್ದ ಆರ್.ಅಶ್ವಿನ್, ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ರೋಹಿತ್ ಜೊತೆ ಪ್ರೆಸ್ಕಾನ್ಫರೆನ್ಸ್ಗೆ ಎಂಟ್ರಿ ನೀಡಿದರು. ಎಲ್ಲರಿಗೂ ಹಾಯ್ ಹೇಳಿದ ಆರ್.ಅಶ್ವಿನ್, ಇದು ನನ್ನ ಕೊನೆಯ ದಿನ ಎಂದು ನಿವೃತ್ತಿ ಘೋಷಿಸಿಯೇ ಬಿಟ್ಟರು.
ಅಂತಾರಾಷ್ಟ್ರೀಯ ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ವರ್ಷ. ಕ್ರಿಕೆಟಿಗನಾಗಿ ನನ್ನಲ್ಲಿ ಸ್ವಲ್ಪ ಕ್ರಿಕೆಟ್ ಉಳಿದಿದೆ ಎಂದು ಭಾವಿಸುತ್ತೇನೆ. ಅದನ್ನು ಕ್ಲಬ್ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲು ಬಯಸುತ್ತೇನೆ. ಇದು ನನಗೆ ಕೊನೆ ದಿನ. ನಾನು ಬಹಳಷ್ಟು ಖುಷಿಯ ಕ್ಷಣಗಳನ್ನು ಹೊಂದಿದ್ದೇನೆ. ರೋಹಿತ್ ಶರ್ಮ, ತಂಡದ ಅನೇಕ ಸಹ ಆಟಗಾರರೊಂದಿಗೆ ಸಾಕಷ್ಟು ಸವಿ ನೆನಪುಗಳನ್ನು ಸವಿದಿದ್ದೇನೆ. ಕೆಲವು ವರ್ಷಗಳಿಂದ ಅನೇಕ ಆಟಗಾರರು ನಿವೃತ್ತಿ ಹೊಂದಿದ್ದಾರೆ, ಅವರೊಂದಿಗೂ ಅನೇಕ ನೆನಪುಗಳಿವೆ. ನಾನು ಈ ಮಟ್ಟದಲ್ಲಿ ಆಡಿರುವುದಕ್ಕೆ ಖಂಡಿತವಾಗಿ ಅನೇಕರಿಗೆ ಧನ್ಯವಾದಗಳನ್ನ ಹೇಳಬೇಕಾಗಿದೆ. ಮುಖ್ಯವಾಗಿ ಬಿಸಿಸಿಐ, ನನ್ನನೊಂದಿಗೆ ಆಡಿದ ತಂಡದ ಆಟಗಾರರಿಗೆ ಧನ್ಯವಾದ ಹೇಳದಿದ್ದರೆ ನಾನು ಕರ್ತವ್ಯ ಮರೆತಂತಾಗುತ್ತದೆ. ನನ್ನ ಪ್ರಯಾಣದಲ್ಲಿ ಎಲ್ಲಾ ಕೋಚ್ಗಳು ಸಹಭಾಗಿಗಳಾಗಿದ್ದಾರೆ. ಮೋಸ್ಟ್ ಇಂಪಾರ್ಟ್ಟೆಂಟ್ಲಿ ರೋಹಿತ್, ವಿರಾಟ್, ಅಜಿಂಕ್ಯಾ, ಪೂಜಾರ ನಾನು ಹೆಚ್ಚು ವಿಕೆಟ್ ಪಡೆಯಲು ನೆರವಾಗಿದ್ದಾರೆ ಎನ್ನುತ್ತ ಅಶ್ವಿನ್ ಭಾವುಕರಾದರು.
ಪರ್ತ್ನಲ್ಲೇ ಗುಡ್ ಬೈ ಹೇಳಲು ರೆಡಿಯಾಗಿದ್ದ ಅಶ್ವಿನ್
ಬಾರ್ಡರ್ ಗವಾಸ್ಕರ್ ಟೆಸ್ಟ್ ಮುಕ್ತಾಯದ ಬಳಿಕ ಹಿರಿಯರು, ಟೆಸ್ಟ್ ಕ್ರಿಕೆಟ್ನಿಂದ ಸೈಡ್ ಆಗ್ತಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಈ ಲಿಸ್ಟ್ನಲ್ಲಿ ಅಶ್ವಿನ್ ಹೆಸರು ಇತ್ತು. ಇಷ್ಟು ಬೇಗ ಅಶ್ವಿನ್, ಗುಡ್ ಬೈ ಹೇಳ್ತಾರೆ ಅನ್ನೋ ಸಣ್ಣ ಕ್ಲೂ ಇರಲೇ ಇಲ್ಲ. ಅಶ್ವಿನ್, ರಿಟೈರ್ಮೆಂಟ್ ಪರ್ತ್ನಲ್ಲೇ ಡಿಸೈಡ್ ಆಗಿತ್ತು. ರೋಹಿತ್, ಟೀಮ್ ಇಂಡಿಯಾಗೆ ಸೇರಿಕೊಂಡ ಬೆನ್ನಲ್ಲೇ ಅಶ್ವಿನ್, ನಿವೃತ್ತಿ ವಿಚಾರ ಕಿವಿಗೆ ಬಿದ್ದಿತ್ತು. ಅಡಿಲೇಡ್ ಟೆಸ್ಟ್ ತನಕ ಇರುವಂತೆ ಮನವಿ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಅಶ್ವಿನ್, ಗಬ್ಬಾ ಟೆಸ್ಟ್ ತನಕ ಟೀಮ್ ಇಂಡಿಯಾದಲ್ಲಿ ಉಳಿದಿದ್ದರು.
ನಾವು ತಂಡದ ಸಹ ಆಟಗಾರರಾಗಿ ಅಶ್ವಿನ್ ನಿರ್ಧಾರ ಗೌರವಿಸಬೇಕು. ಏನು ಮಾಡಬೇಕೆಂದು ಖಚಿತವಾಗಿತ್ತು. ಅಶ್ವಿನ್ ನಿರ್ಧಾರಕ್ಕೆ ತಂಡ ಬೆಂಬಲ ನೀಡಿದೆ. ಈ ನಿರ್ಧಾರದ ಬಗ್ಗೆ ಅಶ್ವಿನ್ ತುಂಬಾ ಖಚಿತವಾಗಿದ್ದರು. ನಾನು ಪರ್ತ್ಗೆ ಬಂದಾಕ್ಷಣ ಈ ಬಗ್ಗೆ ಕೇಳಿದೆ. ನಾನು ಮೊದಲ ಟೆಸ್ಟ್ನ ಮೂರ್ನಾಲ್ಕು ದಿನ ಇರಲಿಲ್ಲ. ಟೀಮ್ ಏನು ಯೋಚಿಸುತ್ತಿದೆ, ನಾವು ಯಾವ ರೀತಿಯ ಕಾಂಬಿನೇಷನ್ ಬಗ್ಗೆ ಯೋಚಿಸುತ್ತಿದ್ದೇವೆ ಅನ್ನೋದು ಅಶ್ವಿನ್ ಅರ್ಥ ಮಾಡಿಕೊಂಡಿದ್ದಾರೆ. ಅಶ್ವಿನ್ ಜೊತೆ ಸಾಕಷ್ಟು ಮೊಮೆರೆಬಲ್ ಮೂಮೆಂಟ್ಸ್ ಇದೆ. ನಿಜಕ್ಕೂ ಅಶ್ವಿನ್ ಒಬ್ಬ ರಿಯಲ್ ಮ್ಯಾಚ್ ವಿನ್ನರ್ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಬಣ್ಣಿಸಿದ್ದಾರೆ.
ಅಕ್ಷರಶಃ ಅಶ್ವಿನ್, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದರು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ಪಾಲಿನ ಅಪದ್ಭಾಂದವ ಆಗಿದ್ದರು. 2010ರಲ್ಲಿ ಧೋನಿ ನಾಯಕತ್ವದಲ್ಲಿ ಏಕದಿನ ತಂಡಕ್ಕೆ ಎಂಟ್ರಿ ನೀಡಿದ ಅಶ್ವಿನ್, ಅಂದಿನಿಂದ ಇಂದಿನ ತನಕ ಹಿಂತಿರುಗಿ ನೋಡಿದಿಲ್ಲ. ಏಕದಿನ ಟು ಟಿ20, ಟಿ20 ಟು ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅಶ್ವಿನ್, ಟೆಸ್ಟ್ ಕ್ರಿಕೆಟರ್ ಆಗಿ ಬೆಳೆದರು. ಟೀಮ್ ಇಂಡಿಯಾದ ಗೇಮ್ ಚೇಂಜರ್ ಅಂಡ್ ಮ್ಯಾಚ್ ವಿನ್ನರ್ ಆಗಿ ಲೆಕ್ಕವಿಲ್ಲದ ಕೊಡುಗೆ ನೀಡಿದ್ರು. ಲೆಜೆಂಡರಿ ಸ್ಪಿನ್ ಮಾಸ್ಟರ್ ಎನಿಸಿಕೊಂಡರು.
ಟೀಮ್ ಇಂಡಿಯಾ ಪರ ಅಶ್ವಿನ್
ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್ನಿಂದ 287 ಪಂದ್ಯಗಳಿಂದ 765 ವಿಕೆಟ್ ಬೇಟೆಯಾಡಿರುವ ಅಶ್ವಿನ್, 4394 ರನ್ ಗಳಿಸಿದ್ದಾರೆ. 6 ಶತಕ, 15 ಅರ್ಧಶತಕಗಳು ದಾಖಿಸಿದ್ದಾರೆ. ಹಲವು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿರುವ ಅಶ್ವಿನ್, ಟೀಮ್ ಇಂಡಿಯಾದ ರಕ್ಷಕನಾಗಿದ್ದಾರೆ. ಟ್ರೂ ಫೈಟರ್ ಆಗಿದ್ದಾರೆ. ಇದರ ಹೊರತಾಗಿಯೂ ಅಶ್ವಿನ್, ಟೀಮ್ ಇಂಡಿಯಾಗೆ ದಿಢೀರ್ ಗುಡ್ ಬೈ ಹೇಳಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಯ ಜೊತೆಗೆ ಹಲವು ಅನುಮಾನಗಳಿಗೂ ದಾರಿ ಮಾಡಿಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ