/newsfirstlive-kannada/media/post_attachments/wp-content/uploads/2024/12/ASHWIN-1.jpg)
ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅಶ್ವಿನ್ ದಿಢೀರ್ ನಿವೃತ್ತಿ ಹೇಳಿರೋದು ಅಚ್ಚರಿಗೆ ಕಾರಣವಾಗಿದೆ.
ಸದ್ಯ ಬಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ನ ಕೊನೆಯ ದಿನದ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ನಡುವೆ ಅಶ್ವಿನ್ ಶಾಕಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಶ್ವಿನ್ ಅವರ ನಿವೃತ್ತಿ ಸುದ್ದಿ ತಿಳಿದು ಕೊಹ್ಲಿ ಕೂಡ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ.
ಪೆವಿಲಿಯನ್ನಲ್ಲಿ ಅಶ್ವಿನ್ ಹಾಗೂ ಕೊಹ್ಲಿ ಕೂತು ಚರ್ಚೆ ಮಾಡ್ತಿರೋದು ಕಂಡು ಬಂದಿದೆ. ಅಶ್ವಿನ್ ಭಾವುಕರಾಗಿದ್ದಾರೆ. ಕೊಹ್ಲಿ, ಅಶ್ವಿನ್ ಅವರನ್ನು ತಬ್ಬಿಕೊಂಡು ಮುಂದಿನ ಜೀವನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಅಶ್ವಿನ್ ಅವರ ದಿಢೀರ್ ನಿವೃತ್ತಿ ಭಾರತೀಯ ಕ್ರಿಕೆಟ್ಗೆ ದೊಡ್ಡ ಆಘಾತ ತಂದಿದೆ.
ಇದನ್ನೂ ಓದಿ:ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ; ದಿಢೀರ್ ಈ ನಿರ್ಧಾರಕ್ಕೆ ಬಂದಿದ್ದು ಏಕೆ?
🫂💙🇮🇳
Emotional moments from the Indian dressing room 🥹#AUSvINDOnStar#BorderGavaskarTrophy#Ashwin#ViratKohlipic.twitter.com/92a4NqNsyP— Star Sports (@StarSportsIndia) December 18, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ