/newsfirstlive-kannada/media/post_attachments/wp-content/uploads/2024/11/ASHWIN_IPL_1.jpg)
ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಭರ್ಜರಿಯಾಗಿ ನಡೆಯುತ್ತಿದ್ದು 10 ಫ್ರಾಂಚೈಸಿಗಳು ಬಿಡ್ ಮಾಡುತ್ತಿವೆ. ಆಟಗಾರರನ್ನ ಖರೀದಿ ಮಾಡಲು ನಾ ಮುಂದು, ನೀ ಮುಂದು ಎಂದು ಹರಾಜನ್ನು ಕೂಗುತ್ತಿವೆ. ಎಲ್ಲ ಕೋಟಿ ಕೋಟಿ ರೂಪಾಯಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಈ ನಡುವೆಯೇ ರವಿಚಂದ್ರನ್ ಅಶ್ವಿನ್ ಅವರು ಮತ್ತೆ ತವರಿನ ಟೀಮ್​ಗೆ ಎಂಟ್ರಿ ಆಗಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರು ಭಾರತದ ಮೆಗಾ ಸ್ಪಿನ್ನರ್ ಆಗಿದ್ದು ಬ್ಯಾಟಿಂಗ್ ಕೂಡ ಅದ್ಭುತವಾಗಿ ಮಾಡಬಲ್ಲರು. ಈ ಮೊದಲು ಅಶ್ವಿನ್ ಅವರು ಚೆನ್ನೈ ಟೀಮ್​ನಲ್ಲಿದ್ದರು. ಆದರೆ 2022ರಲ್ಲಿ ಇವರನ್ನು ಕೈ ಬಿಡಲಾಗಿತ್ತು. ಹೀಗಾಗಿ ರಾಜಸ್ಥಾನ ತಂಡದಲ್ಲಿ ಆಡುತ್ತಿದ್ದರು. ಈ ಬಾರಿ ರಾಜಸ್ಥಾನ್ ತಂಡ ಹೊರಗಿಟ್ಟ ಕಾರಣ ಅವರು ಮತ್ತೆ ಹರಾಜಿಗೆ ಬಂದಿದ್ದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್​ ಉತ್ತಮ ಮಟ್ಟದಲ್ಲಿ ಹರಾಜು ಮಾಡಿದ್ದು ಒಟ್ಟು 9.75 ಕೋಟಿ ರೂಪಾಯಿಗಳನ್ನು ನೀಡಿ ಆರ್.ಅಶ್ವಿನ್ ಅವರನ್ನ ಖರೀದಿ ಮಾಡಿದೆ.
ಇನ್ನು ಆರ್ ಅಶ್ವಿನ್ ಅವರು ಮತ್ತೆ ತವರು ಮನೆ ಸೇರಿದಂತೆ ಆಗಿದೆ. ಏಕೆಂದರೆ ಆರ್ ಅಶ್ವಿನ್ ಅವರು ತಮಿಳು ನಾಡಿನವರೇ ಆಗಿದ್ದು ಸಾಕಷ್ಟು ಹೆಸರು ಪಡೆದುಕೊಂಡಿದ್ದಾರೆ. ಇನ್ನು ಇವರು ತಂಡದಲ್ಲಿ ಇರುವುದರಿಂದ ಅಭಿಮಾನಿಗಳಿಗೆ ಇನ್ನಷ್ಟು ಬೂಸ್ಟ್ ಕೊಟ್ಟಂತೆ ಆಗುತ್ತದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ಈ ಬಾರಿ ಅಶ್ವಿನ್ ಅವರನ್ನು ಖರೀದಿ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ