Advertisment

ಅಬ್ಬಬ್ಬಾ.. ಯೂಟ್ಯೂಬ್​ನಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ ಈ ಟ್ರಕ್ ಡ್ರೈವರ್; ಯಾರಿವರು?

author-image
Veena Gangani
Updated On
ಅಬ್ಬಬ್ಬಾ.. ಯೂಟ್ಯೂಬ್​ನಿಂದ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ ಈ ಟ್ರಕ್ ಡ್ರೈವರ್; ಯಾರಿವರು?
Advertisment
  • ಯೂಟ್ಯೂಬ್​ನಿಂದ ಬಂದ ಹಣದಲ್ಲೇ ಹೊಸ ಮನೆ ಖರೀದಿಸಿದ ರಾಜೇಶ್
  • ರಾಜೇಶ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿರೋ ವ್ಯಕ್ತಿ
  • ಟ್ರಕ್ ಡ್ರೈವರ್ ಕೆಲಸ ಮಾಡುತ್ತಿದ್ದ ತಿಂಗಳಿಗೆ 25 ರಿಂದ 30 ಸಾವಿರ ಸಂಬಳ

ಈ ಸೋಷಿಯಲ್ ಮೀಡಿಯಾ ಅನ್ನೋದೇ ಹಾಗೇ. ಈಗಂತೂ ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಹೇಳೋಕೆ ಆಗೋದಿಲ್ಲ. ಲಕ್​ ಅನ್ನೋದೆ ಹಾಗೇ ಯಾವಾಗ ಯಾರ ಕೈ ಹಿಡಿಯುತ್ತದೆ. ಯಾರ ಕೈ ಬಿಡುತ್ತದೆ ಎಂದು ಹೇಳೋದಕ್ಕೆ ಆಗದು. ಹೀಗೆ ಸುಮ್ಮನೆ ಶುರು ಮಾಡಿದ ಯೂಟ್ಯೂಬ್​ನಿಂದ ಲಕ್ಷ ಲಕ್ಷ  ಸಂಪದಾನೆಗೆ ಮಾಡುತ್ತಿದ್ದಾನೆ ಈ ವ್ಯಕ್ತಿ.

Advertisment

ಇದನ್ನೂ ಓದಿ:ನಿಮ್ಮಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ.. ನೇಹಾ ಗೌಡ, ಅನುಪಮಾ ಗೌಡ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ!

publive-image

ಹೌದು, ಟ್ರಕ್ ಡ್ರೈವರ್ ಅಂದ್ರೆ ಸಾಮಾನ್ಯ ಕೆಲಸವಲ್ಲ. ಆದರೆ ಈ ಟ್ರಕ್ ಡ್ರೈವರ್ ವೃತ್ತಿಯಿಂದ ಮಾತ್ರವಲ್ಲ ತಿಂಗಳಿಗೆ 10 ಲಕ್ಷ ರೂಪಾಯಿ ಯೂಟ್ಯೂಬ್​ನಿಂದ ಸಂಪಾದಿಸುತ್ತಾರಂತೆ. ಶ್ರಮ ಅನ್ನೋದು ಇದ್ದರೆ ಯಾರು ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

ಟ್ರಕ್ ಡ್ರೈವರ್ ಆಗಿರುವ ರಾಜೇಶ್ ರವಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಭಾರತದಾದ್ಯಂತ ಟ್ರಕ್ ಓಡಿಸುತ್ತಾ ಸುಮಾರು 20 ವರ್ಷಗಳ ವೃತ್ತಿಪರ ಅನುಭವ ಪಡೆದುಕೊಂಡಿರುವ ರಾಜೇಶ್ ಅವರು ತಮಗೆ ಅಡುಗೆಯ ಮೇಲಿರುವ ಆಸಕ್ತಿಯನ್ನು ಬಳಸಿಕೊಂಡೇ ವರ್ಲ್ಡ್ ಫೇಮಸ್ ಆಗಿದ್ದಾರೆ.

Advertisment

publive-image

ಆರ್ ರಾಜೇಶ್ ವ್ಲಾಗ್ಸ್ ಎಂಬ ಹೆಸರಿನ ಚಾನೆಲ್ ಮೂಲಕ ಅವರು ವಿಧ ವಿಧವಾದ ಅಡುಗೆಯನ್ನು ತಯಾರು ಮಾಡುತ್ತಾರೆ. ಜೊತೆಗೆ ಅಡುಗೆ ಮಾಡುವ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹೀಗಾಗಿ ರಾಜೇಶ್ ಅವರು ಈ ಮೂಲಕ ಯೂಟ್ಯೂಬ್​ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ. ಇನ್ನು, ತಾವು ಟ್ರಕ್ ಡ್ರೈವರ್ ಕೆಲಸ ಮಾಡುತ್ತಿದ್ದ ತಿಂಗಳಿಗೆ 25 ರಿಂದ 30 ಸಾವಿರ ಸಂಪಾದಿಸುತ್ತಿದ್ದರಂತೆ. ಆದರೆ ಯೂಟ್ಯೂಬ್​ನಿಂದ ತಿಂಗಳಿಗೆ 10 ಲಕ್ಷದ ತನಕ ದುಡಿಯುತ್ತಿದ್ದಾರಂತೆ.

ಇನ್ನು, ಸಖತ್​ ಫೇಮಸ್ ಆಗಿದ್ದ ರಾಜೇಶ್ ಅವರ ಬಗ್ಗೆ ಆನಂದ್ ಮಹೀಂದ್ರ ತಮ್ಮ ಟ್ವೀಟರ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, 25 ವರ್ಷಗಳಿಂದ ರಾಜೇಶ್ ರಾವಾನಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಫುಡ್ ಹಾಗೂ ಟ್ರಾವೆಲ್ ವ್ಲಾಗಿಂಗ್ ಮಾಡುತ್ತಾರೆ. ಈಗ ಅವರು ಯೂಟ್ಯೂಬ್​ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇರುವ ಯೂಟ್ಯೂಬರ್ ಆಗಿದ್ದಾರೆ.

ರಾಜೇಶ್​​ ತಮ್ಮ ಸಂಪಾದನೆಯಿಂದ ಹೊಸ ಮನೆ ಖರೀದಿಸಿದ್ದಾರೆ. ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಕೆಲಸ ಎಷ್ಟೇ ಕಷ್ಟದ್ದಾಗಿರಲಿ. ಹೊಸ ಟೆಕ್ನಾಲಜಿಗೆ ನಿಮ್ಮನ್ನು ನೀವು ಅಳವಡಿಸಿಕೊಂಡು ಬೆಳೆಯುವುದಕ್ಕೆ ಅಡ್ಡಿಯಿಲ್ಲ ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment