/newsfirstlive-kannada/media/post_attachments/wp-content/uploads/2024/11/RABBIT.jpg)
ಸಾಕಿದ ಮೊಲ ಕಚ್ಚಿ ವೃದ್ಧೆ ಜೀವ ಕಳೆದುಕೊಂಡ ಆಘಾತಕಾರಿ ಘಟನೆ ಕೇರಳದ ಅಲಪ್ಪುಳದ ತಕಾಝೀಯಲ್ಲಿ ಘಟನೆ ನಡೆದಿದೆ. 63 ವರ್ಷದ ಶಾಂತಮ್ಮ ಕೊನೆಯುಸಿರೆಳೆದಿದ್ದಾರೆ.
ಶಾಂತಮ್ಮ ಅವರಿಗೆ ಅಕ್ಟೋಬರ್ 21ರಂದು ಮೊಲ ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಂಜಾಗೃತ ಕ್ರಮವಾಗಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. ಮೂರನೇ ಡೋಸ್ ಹಾಕಿದ ನಂತರ ಅವರು ಕುಸಿದು ಬಿದ್ದಿದ್ದಾರೆ.
ನಂತರ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾದೇ ಶಾಂತಮ್ಮ ಜೀವ ಬಿಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಷಯ ತಿಳಿದು ಸಂಬಂಧಿಕರು ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಮೆಗಾ ಟ್ವಿಸ್ಟ್.. ಈ ವಾರದ ಕ್ಯಾಪ್ಟನ್ ಇವರೇ ನೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ