newsfirstkannada.com

ರೇಸ್​ ಕೋರ್ಸ್​ ಮೇಲೆ ಸಿಸಿಬಿ ಪೊಲೀಸರ ದಾಳಿ; 3 ಕೋಟಿ 47 ಲಕ್ಷ ರೂಪಾಯಿ ಪತ್ತೆ

Share :

Published January 13, 2024 at 6:44am

Update January 13, 2024 at 6:46am

    ರೇಸ್ ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ದಾಳಿ

    ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವ ಆರೋಪ

    ಮಧ್ಯರಾತ್ರಿ 1 ಗಂಟೆಗೆವರೆಗೂ ಪರಿಶೀಲನೆ ನಡೆಸಿ ಸಿಸಿಬಿ

ರೇಸ್ ಕೋರ್ಸ್ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಅಂದಾಜು 3 ಕೋಟಿ 47 ಲಕ್ಷ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಸಿಸಿಬಿ ಪೊಲೀಸರುಯ ರೇಸ್ ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ದಾಳಿ ಮಾಡಿದ್ದಾರೆ. ನಿಗದಿ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಜೊತೆಗೆ ಜಿಎಸ್​ಟಿ ಕಟ್ಟದೆ ವಂಚನೆ ಮಾಡುತ್ತಿದ್ದಾರೆ ಎಂಬ ದೂರಿಗೆ ಈ ದಾಳಿ ನಡೆದಿದೆ.

ಸಿಸಿಬಿ ಪೊಲೀಸರು ಬುಕ್ಕಿ ಕೌಂಟರ್ ಗಳನ್ನು ಲಾಕ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಒಂದೊಂದು ಕೌಂಟರ್​ಗು ಸಿಬ್ಬಂದಿಗಳಿಂದ ಭದ್ರತೆ ನೀಡಲಾಗಿದೆ. ದಾಳಿ ವೇಳೆ 3 ಕೋಟಿ 47 ಲಕ್ಷ ಹಣ ಸಿಕ್ಕಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನು ಪೊಲೀಸರು ಮಧ್ಯರಾತ್ರಿ 1 ಗಂಟೆಗೆವರೆಗೂ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಸುಮಾರು 60 ಜನರನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ರೇಸ್​ ಕೋರ್ಸ್​ ದಾಳಿ ವೇಳೆ ಸಿಕ್ಕ ಲೆಕ್ಕಕ್ಕಿಂತ ಅಧಿಕ ಹಣಕ್ಕೆ ದಾಖಲೆ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದಾರೆ. ದಾಖಲೆ ನೀಡಲು ವಿಫಲರಾದ್ರೆ ಇಡಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಸ್​ ಕೋರ್ಸ್​ ಮೇಲೆ ಸಿಸಿಬಿ ಪೊಲೀಸರ ದಾಳಿ; 3 ಕೋಟಿ 47 ಲಕ್ಷ ರೂಪಾಯಿ ಪತ್ತೆ

https://newsfirstlive.com/wp-content/uploads/2024/01/CCB.jpg

Load More