/newsfirstlive-kannada/media/post_attachments/wp-content/uploads/2025/02/Rachin_Ravindra_1-1.jpg)
ಪಾಕ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಹಿಡಿಯಲು ಹೋಗಿ ನ್ಯೂಜಿಲೆಂಡ್ನ ಪ್ಲೇಯರ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಅವರ ತಲೆಗೆ ಬಾಲ್ ಬಡಿದು ರಕ್ತ ಸುರಿದಿದೆ. ಚೆಂಡು ಬಡಿದ ರಭಸಕ್ಕೆ ಹೆಚ್ಚಿನ ಮಟ್ಟದಲ್ಲಿ ರಕ್ತ ಸುರಿದ ಕಾರಣ ತಕ್ಷಣ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.
ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ ನಡುವೆ ತ್ರಿಕೋನ ಸ್ಪರ್ಧೆಯ ಮೊದಲ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮೊದಲ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 6 ವಿಕೆಟ್ಗಳಿಗೆ 330 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದರಲ್ಲಿ ರಚಿನ್ ರವೀಂದ್ರ ಅವರು 19 ಬಾಲ್ಗೆ 25 ರನ್ಗಳ ಕಾಣಿಕೆ ನೀಡಿದ್ದರು. ಇದಾದ ಮೇಲೆ ಪಾಕಿಸ್ತಾನ ಬ್ಯಾಟಿಂಗ್ಗೆ ಆಗಮಿಸಿತ್ತು.
ಇದನ್ನೂ ಓದಿ:ಕಿಚ್ಚ ಸುದೀಪ್ ಕ್ಯಾಪ್ಟನ್ಸಿಯಲ್ಲಿ ಕರುನಾಡು ಜಯಭೇರಿ.. ವೇಗದ ಅರ್ಧ ಶತಕ ಸಿಡಿಸಿದ ಡಾರ್ಲಿಂಗ್ ಕೃಷ್ಣ
ಈ ವೇಳೆ ರಚೀನ್ ರವೀಂದ್ರ ಅವರು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. 38ನೇ ಓವರ್ ನಡೆಯುವಾಗ ಪಾಕ್ ಪರ ಬ್ಯಾಟ್ಸ್ಮನ್ ಖುಶ್ದಿಲ್ ಶಾ ಅವರು ಬೌಂಡರಿ ಬಾರಿಸಲು ಜೋರಾಗಿ ಬಾಲ್ ಅನ್ನು ಹೊಡೆದರು. ಈ ಬಾಲ್ ಅನ್ನು ಕ್ಯಾಚ್ ಹಿಡಿಯಲು ಮುಂದಾದಗ ಬಾಲ್ ನೇರ ರಚಿನ್ ರವೀಂದ್ರ ಅವರ ತಲೆಗೆ ಬಡಿದಿದೆ. ತಕ್ಷಣ ಕುಸಿದು ಬಿದ್ದ ರಚಿನ್ ರವೀಂದ್ರ ಅವರ ತಲೆಯಲ್ಲಿ ರಕ್ತ ಸುರಿಯುತ್ತಿತ್ತು.
ಇದನ್ನು ತಕ್ಷಣ ಕಂಡ ಸಿಬ್ಬಂದಿ ಓಡೋಡಿ ಬಂದು ರಚಿನ್ ರವೀಂದ್ರ ಅವರ ತಲೆಗೆ ರಕ್ತ ಸುರಿಯದಂತೆ ಟವಲ್ ಅನ್ನು ಗಟ್ಟಿಯಾಗಿ ಹಿಡಿದು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋದರು. ಬಳಿಕ ಚಿಕಿತ್ಸೆ ಕೊಡಿಸಲಾಗಿದ್ದು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಗೆ ಪ್ರಮುಖ ಕಾರಣ ಪಾಕ್ ಸ್ಟೇಡಿಯಂನಲ್ಲಿರುವ ಫ್ಲಡ್ ಲೈಟ್ಸ್ ಸರಿಯಾಗಿ ಬೆಳಗದಿರದಕ್ಕೆ ಬಾಲ್ ಕಾಣಿಸಿಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ