/newsfirstlive-kannada/media/post_attachments/wp-content/uploads/2024/09/TEAM_INDIA.jpg)
ಅಕ್ಟೋಬರ್​​ 16ನೇ ತಾರೀಕಿನಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಹಾಗಾಗಿ ನ್ಯೂಜಿಲೆಂಡ್​ ತಂಡವು ಭಾರತಕ್ಕೆ ಬಂದಿಳಿದಿದೆ. ನ್ಯೂಜಿಲೆಂಡ್​ ತಂಡವನ್ನು ಕಾಡಲಿರೋ ಟೀಮ್​ ಇಂಡಿಯಾದ ಇಬ್ಬರು ಆಟಗಾರರನ್ನು ಕಿವೀಸ್​​ನ ಟಾಪ್​ ಆರ್ಡರ್​ ಬ್ಯಾಟರ್​​ ರಚಿನ್​ ರವೀಂದ್ರ ಹೆಸರಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆಯಿಂದ ಶುರುವಾಗೋ ಟೆಸ್ಟ್​ಗೆ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ರಚಿನ್​​ ರವೀಂದ್ರ ಅವರು, ಸಖತ್​ ಫಾರ್ಮ್​ನಲ್ಲಿರೋ ಟೀಮ್​ ಇಂಡಿಯಾದ ಅಶ್ವಿನ್- ಜಡೇಜಾ ಜೋಡಿ ಬಹಳ ಡೇಂಜರ್​ ಎಂದಿದ್ದಾರೆ. ಸ್ಪಿನ್​ ಸ್ನೇಹಿ ಪಿಚ್​ಗಳಲ್ಲಿ ಇವರು ಮತ್ತಷ್ಟು ಅಪಾಯಕಾರಿ ಆಗಲಿದ್ದಾರೆ. ನ್ಯೂಜಿಲೆಂಡ್​ ತಂಡವು ಈ ಜೋಡಿಯನ್ನು ಎದುರಿಸಿದ್ರೆ ಪ್ರಾಬಲ್ಯ ಸಾಧಿಸಬಹುದು ಎಂದರು.
ಭಾರತವನ್ನು ಸೋಲಿಸೋದು ಸುಲಭವಲ್ಲ ಎಂದ ರಚಿನ್​
ಕ್ರೀಸ್​ನಲ್ಲಿ ಯಾರೇ ಇರಲಿ ಅವರ ವಿರುದ್ಧ ​ಅಶ್ವಿನ್- ಜಡೇಜಾ ಜೋಡಿ ಉತ್ತಮ ಹೋರಾಟ ನಡೆಸುತ್ತದೆ. ಕೇವಲ ಇಂಡಿಯಾ ಮಾತ್ರವಲ್ಲ ವಿಶ್ವದ ಎಲ್ಲಾ ಪಿಚ್​ಗಳಲ್ಲೂ ಇವರು ಅಪ್ರತಿಮ ಸಾಧನೆ ಮಾಡಿದ್ದಾರೆ. ಹಾಗಾಗಿ ಭಾರತ ತಂಡವನ್ನು ಸೋಲಿಸುವುದು ಸುಲಭದ ಸಂಗತಿಯಲ್ಲ ಎಂದರು.
ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಬಿಸಿಸಿಐ ಸೆಲೆಕ್ಷನ್ ಕಮಿಟಿ ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿಯಿಂದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರನನ್ನು ಕೈ ಬಿಟ್ಟಿದೆ. ಈ ಟೆಸ್ಟ್​​ ಸರಣಿಗೆ ಮುನ್ನ ಸುದ್ದಿಗೋಷ್ಠಿ ನಡೆಸಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ತಂಡದ ಪ್ಲಾನ್​ ಬಗ್ಗೆ ಮಾತಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us