/newsfirstlive-kannada/media/post_attachments/wp-content/uploads/2025/03/Dhoni-RAVINDRA.jpg)
ಐಪಿಎಲ್ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಲ್ಕು ವಿಕೆಟ್‌ಗಳಿಂದ ಜಯಗಳಿಸಿತು. ಪಂದ್ಯದ ನಂತರ ಎಂಎಸ್ ಧೋನಿ ಅಭಿಮಾನಿಗಳು ರಚಿನ್ ರವೀಂದ್ರ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತ್ತು. ಸಿಎಸ್‌ಕೆ ಬೌಲರ್ ನೂರ್ ಅಹ್ಮದ್ ನಾಲ್ಕು ವಿಕೆಟ್ ಕಬಳಿಸಿದರೆ, ಖಲೀಲ್ ಅಹ್ಮದ್ ಮೂರು ವಿಕೆಟ್ ಪಡೆದು ಮುಂಬೈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಮುಂಬೈ ಇಂಡಿಯನ್ಸ್ ನೀಡಿದ ಗುರಿ ಬೆನ್ನಟ್ಟಲು CSK ಬ್ಯಾಟಿಂಗ್ ಆರಂಭಿಸಿತ್ತು. ರಚಿನ್ ರವೀಂದ್ರ ಅರ್ಧಶತಕದೊಂದಿಗೆ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್ ಚಚ್ಚಿದ ವಿಪ್ರಜ್ ನಿಗಮ್ ಯಾರು?
ರಚಿನ್ ರವೀಂದ್ರ 45 ಎಸೆತಗಳಲ್ಲಿ 65 ರನ್ ಬಾರಿಸಿ ನಾಟೌಟ್ ಆಗಿ ಉಳಿದರು. 19ನೇ ಓವರ್ ಮುಕ್ತಾಯಗೊಂಡಾಗ ಸಿಎಸ್‌ಕೆ 6 ವಿಕೆಟ್ ಕಳೆದುಕೊಂಡು 152 ರನ್ಗಳಿಸಿತ್ತು. 20ನೇ ಓವರ್ನಲ್ಲಿ ರಚಿನ್ ರವಿಂದ್ರ ಸ್ಟ್ರೈಕ್ ಹಾಗೂ ನಾನ್ ಸ್ಟ್ರೈಕ್ನಲ್ಲಿ ಎಂಎಸ್ ಧೋನಿ ಇದ್ದರು. ಮುಂಬೈ ಇಂಡಿಯನ್ಸ್ನ ಸ್ಯಾಟ್ನರ್ ಎಸೆದ ಬಾಲ್ ಅನ್ನು ರಚಿನ್ ರವೀಂದ್ರ ಸಿಕ್ಸ್ ಹೊಡೆಯುವ ಮೂಲಕ ತಂಡವನ್ನು ಗೆಲ್ಲಿಸಿಕೊಟ್ಟರು. ನಂತರ ಧೋನಿ, ರವೀಂದ್ರ ವಿಶ್ ಮಾಡಿಕೊಂಡರು.
ಅಭಿಮಾನಿಗಳ ಬೇಸರ ಏನು..?
19ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಧೋನಿ ಒಂದೇ ಒಂದು ರನ್ ಗಳಿಸಿರಲಿಲ್ಲ. ಇದರಿಂದ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. 20ನೇ ಓವರ್ನಲ್ಲಿ ರವೀಂದ್ರ ಅವರಿಂದ ಸ್ಟ್ರೈಕ್ ಪಡೆದು, ಧೋನಿ ವಿನ್ನಿಂಗ್ ಶಾಟ್ ಹೊಡೀತಾರೆ ಅನ್ನೋದು ಅಭಿಮಾನಿಗಳ ಮಹದಾಸೆ ಆಗಿತ್ತು. ಆದರೆ ರವೀಂದ್ರ ಹಾಗೆ ಮಾಡಲಿಲ್ಲ. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಧೋನಿಗೆ ರವೀಂದ್ರ ಸ್ಟ್ರೈಕ್ ನೀಡದಿರೋದೇ ಧೋನಿ ಅಭಿಮಾನಿಗಳ ಆಕ್ರೋಶವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಧೋನಿ ಫ್ಯಾನ್ಸ್, ರವೀಂದ್ರರನ್ನು ನಿಂದನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಿಲೀಸ್ ಆದರೂ ತಪ್ಪದ ಸಂಕಷ್ಟ.. ನಿನ್ನೆ ಪೊಲೀಸ್ ವಿಚಾರಣೆ ವೇಳೆ ವಿನಯ್ ಹೇಳಿದ್ದೇನು..?
Dhobi fans abusing Rachin for not letting dhoni finish the match.
Worst fans man 💔💔 pic.twitter.com/vbsSHmfGPc— M. (@IxonicKohli) March 23, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್