Advertisment

ಚಿಕ್ಕಬಳ್ಳಾಪುರದ ರೈತನ ತೋಟದಲ್ಲಿ ರಚಿತಾ ರಾಮ್​, ಸನ್ನಿ ಲಿಯೋನ್​! ಟೊಮ್ಯಾಟೋ ಕಾಯುತ್ತಿದ್ದಾರೆ ಈ ಇಬ್ಬರು ನಟಿಯರು

author-image
AS Harshith
Updated On
ಚಿಕ್ಕಬಳ್ಳಾಪುರದ ರೈತನ ತೋಟದಲ್ಲಿ ರಚಿತಾ ರಾಮ್​, ಸನ್ನಿ ಲಿಯೋನ್​! ಟೊಮ್ಯಾಟೋ ಕಾಯುತ್ತಿದ್ದಾರೆ ಈ ಇಬ್ಬರು ನಟಿಯರು
Advertisment
  • ರೈತನ ತೋಟದಲ್ಲಿ ರಚಿತಾ ರಾಮ್​, ಸನ್ನಿ ಲಿಯೋನ್​ಗೇನು ಕೆಲಸ?
  • ಟೊಮ್ಯಾಟೋ ತೋಟದಲ್ಲಿದ್ದಾರೆ ಇಬ್ಬರು ನಟಿಯರು
  • ಡಿಂಪಲ್​ ಕ್ವೀನ್​ ಮತ್ತು ಮಾದಕ ನಟಿಯನ್ನು ಕಂಡು ಬೆಚ್ಚಿ ಬಿದ್ರು ಜನರು

ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಕೃಷಿ ತೋಟಗಳಲ್ಲಿ, ಗದ್ದೆಗಳಲ್ಲಿ ಬೆರ್ಚಪ್ಪ, ಬೆದುರು ಗೊಂಬೆಯನ್ನು ಇಡುತ್ತಾರೆ. ದೃಷ್ಟಿಯಾಗುತ್ತದೆ ಎಂಬ ನಂಬಿಕೆ ಆಧಾರದ ಮೇಲೆ ಮತ್ತು ಪ್ರಾಣಿ, ಪಕ್ಷಿಗಳು ಈ ಕಲಾಕೃತಿಯನ್ನು ಮನುಷ್ಯನೆಂದು ತಿಳಿದು ಹತ್ತಿರ ಸುಳಿಯದಂತಿರಲು ಈ ಪ್ಲಾನ್​ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ತೋಟಕ್ಕೆ ದೃಷ್ಟಿಯಾಗುತ್ತೆ ಎಂದು ನಟಿ ರಚಿತಾ ರಾಮ್ ಫೋಟೋವನ್ನು ಹಾಕಿದ ಸಂಗತಿ ಬೆಳಕಿಗೆ ಬಂದಿದೆ.

Advertisment

ವಿನೂತನ ಪ್ರಯೋಗ

ಹೌದು. ರೈತನೋರ್ವ ಟೊಮ್ಯಾಟೋ ತೋಟಕ್ಕೆ ದೃಷ್ಟಿಯಾಗದಂತೆ ನಟಿ ರಚಿತಾ ರಾಮ್ ಮಾತ್ರವಲ್ಲದೆ, ಸನ್ನಿ ಲಿಯೋನ್ ಫೋಟೋ ಹಾಕಿದ್ದಾನೆ. ದೃಷ್ಟಿ ಬೊಂಬೆ ಬದಲು ನಟಿಯರ ಫೋಟೋ ಬಳಸಿ ವಿನೂತನ ಪ್ರಯೋಗ ಮಾಡಿದ್ದಾನೆ.

ರಚಿತಾ ರಾಮ್​.. ಸನ್ನಿ ಲಿಯೋನ್

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ರೈತ ದೀಪಕ್ ಎಂಬುವವರು ತನ್ನ ತೋಟದಲ್ಲಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಬಳಕೆ ಮಾಡಿದ್ದಾರೆ. ಸದ್ಯ ಟೊಮ್ಯಾಟೋ ಬೆಲೆ 4 ಸಾವಿರದಿಂದ 5 ಸಾವಿರ ರೂಪಾಯಿ ಗಡಿ ದಾಟಿದೆ. ಒಳ್ಳೆಯ ಫಸಲು ಬರುವ ನೀರೀಕ್ಷೆಯಲ್ಲಿದೆ.

ಇದನ್ನೂ ಓದಿ: ಭರ್ತಿಯಾಗುವ ಹಂತದಲ್ಲಿ KRS​ ಡ್ಯಾಂ! ಇನ್ನೆಷ್ಟು ನೀರು ಸಂಗ್ರಹವಾಗಲು ಬಾಕಿ ಇದೆ?

Advertisment

ದೃಷ್ಟಿ ತಾಗದಿರಲಪ್ಪಾ..

ಹೀಗಾಗಿ ರೈತ ದೀಪಕ್​ ಟೊಮ್ಯಾಟೋ ಬೆಳೆಗೆ ಜನರ ದೃಷ್ಟಿ ತಾಗದಿರಲಿ ಅಂತ ನಟಿಯರ ಪೋಟೋಗಳನ್ನು ನೇತು ಹಾಕಿದ್ದಾರೆ. ಮತ್ತೊಂದು ಸಂಗತಿ ಎಂದರೆ ಸನ್ನಿ ಲಿಯೋನ್​ಗೆ ರಾಜ್ಯದಲ್ಲಿ ಅಭಿಮಾನಿಗಳು ಇದ್ದಾರೆ. ಅಭಿಮಾನಿ ಸಂಘಗಳು ಇವೆ. ಜಾತ್ರೆ ಹಾಗೂ ಹಬ್ಬಗಳಿಗೆ ಅವರ ಕಟೌಟ್​​ಗಳನ್ನು ಹಾಕಿದ ಉದಾಹರಣೆಗಳಿವೆ.

ಇದನ್ನೂ ಓದಿ: CCTV: ಅಬ್ಬಾ! ಏಕಾಏಕಿ ಕಳಚಿದ ಚಲಿಸುತ್ತಿದ್ದ ಬಸ್​ನ ಟಯರ್.. ಪ್ರಯಾಣಿಕ ಪರಿಸ್ಥಿತಿ?

ಏನ್​ ಪ್ಲಾನ್​ ಗುರೂ

ಇನ್ನು ಕನ್ನಡದ ನಟಿ ರಚಿತಾ ರಾಮ್​ ಕೂಡ ಕಡಿಮೆ ಏನಿಲ್ಲ. ಹಲವು ಸಿನಿಮಾಗಳ ಮೂಲಕ ಅನೇಕ ಮನಗೆದ್ದ ನಟಿಯಾಗಿದ್ದಾರೆ. ಹೀಗಾಗಿ ಕೃಷಿ ಮತ್ತು ಟೊಮ್ಯಾಟೋ ಮೇಲಿನ ಕಣ್ಣುಗಳು ಡಿಂಪಲ್​ ಕ್ವೀನ್​ ಫೋಟೋಗಳ ಮೇಲೆ ಬೀಳಲಿ ಎಂದು ಈ ರೈತ ಸಖತ್​ ಉಪಾಯ ಮಾಡಿದ್ದಾರೆ. ದೀಪಕ್​ ವಿನೂತನ ಐಡಿಯಾಗೆ ಸ್ಥಳೀಯರು ಫಿದಾ ಆಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment