/newsfirstlive-kannada/media/post_attachments/wp-content/uploads/2024/08/RACHITA-MEET-DACHU.jpg)
ರಚಿತಾ ರಾಮ್.. ಚಂದನವನದ ಡಿಂಪಲ್ ಕ್ವೀನ್.. ಪ್ರಾಮಿಸಿಂಗ್ ಆ್ಯಕ್ಟ್ರೆರ್ಸ್.. ಪಡ್ಡೆ ಹುಡುಗರ ಹಾರ್ಟ್ನ ಗುಳಿಕುನ್ನೆಯಿಂದಲೇ ಕದ್ದ ಚೆಂದುಳ್ಳಿ.. ಸದಾ ಕಾಲ ಕಾಂಟ್ರವರ್ಸಿಗಳಿಂದ ದೂರ ಇರ್ತಿದ್ದ ಬುಲ್ ಬುಲ್ ಮೇಲೆ ಅದ್ಯಾಕೋ ಕರೆಕ್ಟಾಗಿ ಒಂದ್ ವಾರದಿಂದ ವಿವಾದಗಳಿಂದಲೇ ಸುದ್ದಿಯಾಗ್ತಿದ್ರು. ಸದ್ಯ ಇದೀಗ ಎಲ್ಲದಕ್ಕೂ ಖುದ್ದು ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ.
ವಂಚನೆ ಆರೋಪಕ್ಕೆ ನಟಿ ರಚಿತಾ ರಾಮ್ ರಿಯಾಕ್ಟ್
ಕಳೆದೊಂದು ವಾರದಿಂದ ನಟಿ ರಚಿತಾ ರಾಮ್ ಮೇಲೆ ಸಾಲು ಸಾಲು ಆರೋಪಗಳು ಕೇಳಿ ಬಂದ್ವು. ಸಂಜು ವೆಡ್ಸ್ ಗೀತಾ 2 ತಂಡ ಬಹಿರಂಗವಾಗಿ ರಚಿತಾ ಮೇಲೆ ಆಡಿದ್ದ ಕೆಲ ಮಾತುಗಳು ಕೆಲ ಕಾಂಟ್ರವರ್ಸಿಗಳನ್ನ ಕ್ರಿಯೇಟ್ ಮಾಡಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಕೊಟ್ಟಿರೋ ಬುಲ್ ಬುಲ್, ಬೇಸರ ಆಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಜೊತೆ ಜೊತೆಗೆ ಈ ಆರೋಪ ಮಾಡೋಕೆ ಏನು ಕಾರಣ..? ಸಂಜು ವೆಡ್ಸ್ ಗೀತಾ ರೀರಿಲೀಸ್ ಚಿತ್ರದ ಪ್ರಮೋಷನ್ಗೆ ಯಾಕ್ ಬರ್ಲಿಲ್ಲ ಅನ್ನೊ ಬಗ್ಗೆಯೂ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ದೂರು; ಕಾರಣವೇನು?
ಏನಂದ್ರು ರಚಿತಾ ರಾಮ್..?
ಈಗ ಒಂದು ವಾರದಿಂದ ನನ್ನ ಮೇಲೆ ಅರೋಪಗಳು ಕೇಳಿ ಬರುತ್ತಿವೆ. ಇದರಲ್ಲಿ ಮೊದಲು ಸಂಜು ವೆಡ್ಸ್ ಗೀತಾ-2 ಸಿನಿಮಾ ಬಗ್ಗೆ ಮಾತನಾಡುತ್ತೇನೆ. ನನ್ನ ತಂಡ, ನಿರ್ಮಾಪಕರು, ನಿರ್ದೇಶಕರು ಹಾಗೂ ಹೀರೋ ಕೂಡ ಮಾಧ್ಯಮಗೋಷ್ಠಿಯಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡುವಾಗ ಬಳಸಿದ ಪದಗಳು, ಸ್ಟೇಟ್ಮೆಂಟ್ಗಳು ತುಂಬಾ ನೋವು ಉಂಟುಮಾಡಿವೆ, ತುಂಬಾನೇ ಬೇಸರ ಆಗಿದೆ.
ನಾನು ಸ್ವೀಕರಿಸುವಂತ ವಿಚಾರ ಅಲ್ಲವೇ ಅಲ್ಲ. ಸಂಜು ವೆಡ್ಸ್ ಗೀತಾ-2 ಸಿನಿಮಾ ತಂಡದ ಜೊತೆ ಒಂದೂವರೆ ವರ್ಷ ಸಿನಿಮಾ ಮಾಡಿರುತ್ತೇನೆ. ಜನವರಿ 17 ರಂದು ಮೊದಲ ಬಾರಿಗೆ ಈ ಸಿನಿಮಾ ರಿಲೀಸ್ ಆಗುತ್ತದೆ. ಈ ಸಮಯದಲ್ಲಿ ಎಲ್ಲ ವೇದಿಕೆಗಳಲ್ಲಿ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡುತ್ತಾರೆ. ಮೊದಲ ಬಾರಿ ಸಿನಿಮಾ ರಿಲೀಸ್ ಆಗುವಾಗ ನನ್ನನ್ನು ಎಲ್ಲ ರೀತಿಯಿಂದಲೂ ಹೊಗಳಿದ್ದರು.
ಅದೇ ತಂಡ ಇವತ್ತು ರೀ ರಿಲೀಸ್ ಸಮಯದಲ್ಲಿ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದೇ ಮಾತನ್ನು ಮೊದಲ ರಿಲೀಸ್ ಸಂದರ್ಭದಲ್ಲೇ ಮಾತನಾಡಬೇಕಿತ್ತು. ಯಾಕೆ ಆಗ ಕೆಟ್ಟ ಮಾತುಗಳನ್ನು ಆಡಲಿಲ್ಲ. ಆವಾಗ ಅಷ್ಟೊಂದು ಹೊಗಳಿ, ಈಗ ಯಾಕೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಸುಳ್ಳು, ನಾಟಕ ಮಾಡಿದ್ದೇನೆಂದು ಹೇಳುತ್ತಿದ್ದಾರೆ. ಇಲ್ಲಿ ಸುಳ್ಳು, ನಾಟಕ ಮಾಡುತ್ತಿರುವವರು ಯಾರು?. ಸಂಜು ವೆಡ್ಸ್ ಗೀತಾ- 2 ಸಿನಿಮಾದ ಶೂಟಿಂಗ್ ನಡೆಯುತ್ತಿರುತ್ತದೆ. ನನ್ನದೇ ಇನ್ನೊಂದು ಸಿನಿಮಾ ಬಿಡುಗಡೆಗೆ ರೆಡಿ ಇರುತ್ತದೆ. ಈ ವೇಳೆ ಸಿನಿಮಾದ ಪ್ರಚಾರಕ್ಕೆ, ಪ್ರಮೋಷನ್ಗೆ ಹೋಗಲು ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ಅವತ್ತು ಬಿಡಲಿಲ್ಲ.
ಮಹಿಳಾ ನಿರ್ಮಾಪಕಿ ದುಡ್ಡು ಹಾಕಿ ಸಿನಿಮಾ ಮಾಡಿದ್ದರು. ಆವತ್ತು ಯಾಕೆ ಇವರು ಪ್ರಚಾರ ಮಾಡಲು ನನಗೆ ಬಿಡಲಿಲ್ಲ. ಅವರದು ದುಡ್ಡು ಅಲ್ವಾ?. ಅವರದ್ದು ಸಿನಿಮಾ ಅಲ್ವಾ?. ಒಂದು ದಿನ ನನ್ನ ಆ ಸಿನಿಮಾ ಪ್ರಮೋಷನ್ಗೆ ಕಳಿಸಲಿಲ್ಲ ಇವರು. ಆದರೆ ಇವತ್ತು ಹೇಳುತ್ತಿದ್ದಾರೆ ರಚಿತಾ ರಾಮ್ ಅವರು ಪ್ರಮೋಷನ್ಗೆ ಬರುತ್ತಿಲ್ಲ ಅಂತ. ಸಿನಿಮಾದಲ್ಲಿ ಏನ್ ಮಾಡಬೇಕು ಅಂತ ಇತ್ತೋ ಅದನ್ನು ಸಂಪೂರ್ಣವಾಗಿ ಮಾಡಿದ್ದೇನೆ. ರೀ ರಿಲೀಸ್ ವೇಳೆ ಈ ಬಾರಿ ನನಗೆ ಬೇರೆ ಸಿನಿಮಾದ ಕಮಿಟ್ಮೆಂಟ್ ಇರುತ್ತೆ. ರೀ ರಿಲೀಸ್ ಟೈಮ್ ಪೋಸ್ಟ್ಪಾಂಡ್ ಆಗಿರುತ್ತೆ. ಅದಕ್ಕೆ ನಾನಾ ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅವತ್ತು ಸಂಜು ವೆಡ್ಸ್ ಗೀತಾ 2 ಟೀಮ್ ಏನ್ ಹೇಳಿದರೋ, ಅದನ್ನೇ ಈ ಬಾರಿ ಈ ಹೊಸ ಸಿನಿಮಾದ ನಿರ್ದೇಶಕರು ಹೇಳುತ್ತಿದ್ದಾರೆ. ರಚಿತಾ ಅವರೇ ನಮ್ಮ ಸಿನಿಮಾಗೆ ಡೇಟ್ಸ್ ಕೊಟ್ಟಿದ್ದೀರಿ, ನಾವು ಸಿನಿಮಾ ಮಾಡಿ ಮುಗಿಸಬೇಕಿದೆ ಅಂತ ಹೇಳುತ್ತಿದ್ದಾರೆ. ಈಗ ನೀವು ಹೇಳಿ ತಪ್ಪು ಯಾರದ್ದು ಅಂತ. ನಾನು ತಪ್ಪು ಮಾಡಿದ್ದೇನೆ ಅಂತ ಅನ್ನಿಸುತ್ತಿಲ್ಲ. ಸಂಜು ವೆಡ್ಸ್ ಗೀತಾ 2 ಪ್ರಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದೇನೆ. ನಾನು ತಪ್ಪು ಅಂತಾ ಮಾಡಿದ್ರೆ ಚಿಕ್ಕ ಮಕ್ಕಳ ಕಾಲಿಗೆ ಬೀಳೋಳು ನಾನು. ತಪ್ಪು ಮಾಡಿಲ್ಲ ಅಂದ್ರೆ ಆ ದೇವರೇ ಬಂದು ಕೇಳಿದ್ರೂ ಕ್ಷಮೆ ಕೇಳಲ್ಲ -ರಚಿತಾ ರಾಮ್, ನಟಿ
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಚಿತಾ ರಾಮ್ ಗರಂ.. ಅಷ್ಟಕ್ಕೂ ಹುಲಿ ಕಾರ್ತಿಕ್ ಮಾಡಿದ್ದೇನು?
ಸಂಜು ವೆಡ್ಸ್ ಗೀತಾ ವಿಚಾರವಾಗಿ ಮಾತ್ರ.. ನಟಿ ರಚಿತಾ ರಾಮ್ ವಿರುದ್ಧ ಕೇಳಿ ಬಂದಿದ್ದ ಮತ್ತೊಂದು ಆರೋಪ.. ಮಹಿಳಾ ಸಿನಿಮಾ ನಿರ್ಮಾಪಕರಿಗೆ ರಚಿತಾ ರಾಮ್ ವಂಚಿಸಿ ಡೇಟ್ಸ್ ಕೊಡದೇ ವಂಚಿಸಿದ್ದಾರೆ ಅನ್ನೋ ಆರೋಪ ಅದು.. ಆದ್ರೆ, ಆ ವಿಚಾರದ ಬಗ್ಗೆ ಮಾತ್ರ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ರಚಿತಾ ರಾಮ್, ಏನ್ ಹೇಳಿದರು?
ವಂಚನೆ ಆರೋಪ ರಚಿತಾ ರಾಮ್ ಫಸ್ಟ್ ರಿಯಾಕ್ಷನ್. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ನೀವೇ ಡಿಸೈಡ್ ಮಾಡಿ ಯಾರದ್ದು ತಪ್ಪು ಅಂತಾ ಎಂದು ನಿರ್ಮಾಪಕಿ ವಿಜಯಲಕ್ಷ್ಮೀ ಅರಸ್ ಹಾಗೂ ಸಂಜು ವೆಡ್ಸ್ ಗೀತಾ 2 ಚಿತ್ರದ ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.#rachitaram#sanjuwedsgeetha2#vijayalakshmiurs#producer#kfipic.twitter.com/3CxqcAqYIr
— NewsFirst Kannada (@NewsFirstKan) June 20, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ