/newsfirstlive-kannada/media/post_attachments/wp-content/uploads/2025/05/RACHITHA_RAM.jpg)
ಬೆಂಗಳೂರು: ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ಸಿನಿಮಾದ ಹಿರಿಯ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ ನಟಿ ರಚಿತ್ ರಾಮ್ ಕೂಡ ಹಾಡು ಹೇಳುವ ಮೂಲಕ ಕಮಲ್ ಹಾಸನ್ಗೆ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನ ರಚಿತಾ ರಾಮ್ ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡದವನು ಆಗಿರು’ ಎಂದು ಹಾಡಿದ್ದಾರೆ. ಯಾಕೆ ನಾನು ಈ ಹಾಡು ಹಾಡುತ್ತಿದ್ದೇನೆ, ಯಾಕೆ ಈ ಮಾತು ಹೇಳುತ್ತಿದ್ದೇನೆ ಎಂದು ನಿಮಗೆಲ್ಲಾ ಗೊತ್ತಾಗುತ್ತಿದೆ. ಕನ್ನಡ, ಕರ್ನಾಟಕ ಅಂತ ಬಂದರೆ ಪ್ರತಿಯೊಬ್ಬ ಕನ್ನಡಿಗನು ಭಾವನಾತ್ಮಕ ಎಂದು ಹೇಳಿದ್ದಾರೆ.
ಇದನ್ನೂ ಓದಿ: Eliminator ಪಂದ್ಯದಲ್ಲಿ ಸಿಡಿದ ಹಿಟ್ಮ್ಯಾನ್.. ಕೊಹ್ಲಿಯಂತೆ ರೋಹಿತ್ ಶರ್ಮಾ ರೆಕಾರ್ಡ್!
ನಮ್ಮ ಭಾಷೆ ಬಗ್ಗೆ ಯಾರಾದರೂ ಟೀಕೆ ಮಾಡುತ್ತಾರೆ ಎಂದರೆ ನಾವು ಸುಮ್ಮನೆ ಕೂರುವುದಕ್ಕೆ ಆಗಲ್ಲ. ಕನ್ನಡಿಗರು ಪ್ರತಿ ಭಾಷೆಯ ಸಿನಿಮಾ ನೋಡ್ತಿವಿ. ನಟರನ್ನು, ಕಲಾವಿದರನ್ನು ಪ್ರೋತ್ಸಾಹಿಸಿ ಸಪೋರ್ಟ್ ಮಾಡುತ್ತೇವೆ. ಆದರೆ ನಮ್ಮ ಭಾಷೆ ಕುರಿತು ಯಾರಾದರೂ ಮಾತನಾಡುತ್ತಾರೆ ಎಂದರೆ, ಅದಕ್ಕೆ ನಾವು ಯಾಕೆ ಧ್ವನಿಗೂಡಿಸಬಾರದು?. ನಾವು ಯಾವಾಗಲೂ ಯಾವ ಭಾಷೆ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ಎಲ್ಲ ಭಾಷೆಗೆ ಗೌರವ ಕೊಡುತ್ತೇವೆ. ಕನ್ನಡದ ಬಗ್ಗೆ ಯಾರಾದರೂ ಮಾತನಾಡಿದರೆ ನಾವು ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ. ಚಿಕ್ಕವರು ತಪ್ಪು ಮಾಡಿದರೆ ಕ್ಷಮೆ ಕೇಳುವವರೆಗೂ ದೊಡ್ಡವರು ಬಿಡಲ್ಲ. ಅದೇ ದೊಡ್ಡವರು ತಪ್ಪು ಮಾಡಿದರೆ, ತಪ್ಪು ಮಾಡಿದ ಮೇಲೆ ಕ್ಷಮೆ ಕೇಳುವುದರಲ್ಲಿ ತಪ್ಪು ಏನಿದೆ?. ಕನ್ನಡ ಬೇರೆಯವರಿಗೆ ಕಲಿಸುತ್ತೇವೆ. ಕನ್ನಡ ಭಾಷೆ ಬಗ್ಗೆ ತಪ್ಪಾಗಿ ಮಾತಾಡುವವರನ್ನು ಏನೆಂದು ಹೇಳೋಣ. ನವೆಂಬರ್-1ಕ್ಕೆ ಕನ್ನಡ ರಾಜ್ಯೋತ್ಸವ ಸಮಾರಂಭ ಮಾಡುತ್ತೇವೆ. ಅದರಂತೆ ಈಗ ನಮ್ಮ ಭಾಷೆಯ ಮೇಲಿನ ಪ್ರೀತಿ, ಗೌರವವನ್ನು ನಾವು ತಿಳಿಸೋಣ ಎಂದು ರಚಿತಾ ರಾಮ್ ಅವರು ಕನ್ನಡಿಗರಿಗೆ ಮನವಿ ಮಾಡಿದ್ದಾರೆ.
View this post on Instagram
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ