Advertisment

BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಬಿಗ್​ ಶಾಕ್​; ದೊಡ್ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ?

author-image
Veena Gangani
Updated On
BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಬಿಗ್​ ಶಾಕ್​; ದೊಡ್ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ?
Advertisment
  • ಬಿಗ್​ಬಾಸ್​ ಮನೆಗೆ ಬಂದ ಕನ್ನಡದ ನಿರೂಪಕಿ ಇವರೇ ನೋಡಿ
  • ವೀಕ್ಷಕರಲ್ಲಿ ಸಖತ್​ ಕುತೂಹಲ ಹೆಚ್ಚಿಸಿದ ಬಿಗ್​ಬಾಸ್​ ಶೋ
  • ರಾಧಾ ಹಿರೇಗೌಡರ್ ಖಡಕ್​ ಮಾತಿಗೆ ಉಳಿದ ಸ್ಪರ್ಧಿಗಳು ಶಾಕ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಮತ್ತೊಂದು ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹೌದು, ಕನ್ನಡದ ನಿರೂಪಕಿ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ:ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?

publive-image

ಕನ್ನಡದ ಬಿಗ್​ಬಾಸ್​ ಶುರುವಾಗಿ 25 ದಿನ ಕಳೆದಿದೆ. ಇದೇ ಹೊತ್ತಿಲ್ಲಿ ಬಿಗ್​ಬಾಸ್ ಶೋ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತದೆ. ಮೊನ್ನೆ ಮೊನ್ನೆಯಷ್ಟೇ ಬಿಗ್​ಬಾಸ್​ ಮನೆಗೆ ಗಾಯಕ ಹನುಮಂತ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಅದಾದ ಎರಡೇ ದಿನಕ್ಕೆ ಇದೀಗ ನಿರೂಪಕಿ ರಾಧಾ ಹಿರೇಗೌಡರ್ ಅವರು ಖಡಕ್​ ಆಗಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

publive-image

ಬಿಗ್​ಬಾಸ್​ ಮನೆಗೆ ರಾಧಾ ಹಿರೇಗೌಡರ್ ಅವರು ಬರುತ್ತಿದ್ದಂತೆ. ಕನ್ನಡ ಹೆಣ್ಣು ನಾನು ಸಿಡಿದೆದ್ದರೆ ಮಿಷನ್ ಗನ್ನು ಹಾಡನ್ನು ಹಾಕಲಾಗಿದೆ. ಮನೆಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. ಇನ್ನೂ, ಕೆಲವರಲ್ಲಿ ಭಯ ಹುಟ್ಟಿಕೊಂಡಿದೆ. ಮನೆಗೆ ಎಂಟ್ರಿ ಕೊಟ್ಟ ರಾಧಾ ಹಿರೇಗೌಡರ್ ಸ್ಪರ್ಧಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

Advertisment

ರಾಧಾ ಹಿರೇಗೌಡರ್ ಅವರ ಪ್ರಶ್ನೆಗೆ ಉತ್ತರ ಕೊಡದೇ ಕೆಲ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ರಾಧಾ ಹಿರೇಗೌಡರ್ ಅವರು ಸ್ಪರ್ಧಿಯಾಗಿ ಬಂದಿದ್ದಾರಾ ಅಥವಾ ಅತಿಥಿಯಾಗಿ ಬಂದಿದ್ದಾರಾ ಎಂದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment