/newsfirstlive-kannada/media/post_attachments/wp-content/uploads/2025/07/Chaithra-Rai3.jpg)
ನಟಿ ಚೈತ್ರ ರೈ.. ಜೀ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ರಾಧಾ ಕಲ್ಯಾಣ ಕೂಡ ಒಂದು. ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ಸೀರಿಯಲ್​ ಇದು. ಕನ್ನಡ ಕಿರುತೆರೆಯಲ್ಲಿ ಈ ಸೀರಿಯಲ್​ಗೆ ವಿಶೇಷ ಸ್ಥಾನ ಇದೆ. ಚಂದನ್​ ಗೌಡ, ಕೃತಿಕಾ ಹಾಗೂ ಚೈತ್ರಾ ರೈ ಅವರಿಗೆ ಬ್ರೇಕ್ ನೀಡಿದ ಸೀರಿಯಲ್​ ಇದು.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ
ಇವತ್ತಿಗೂ ಇವರನ್ನು ರಾಧಾ ಕಲ್ಯಾಣದ ನಟ-ನಟಿ ಅಂತ ವೀಕ್ಷಕರು ಗುರುತಿಸೋದು. ಸದ್ಯ ಈ ಸೀರಿಯಲ್​ ಬಗ್ಗೆ ಮಾತ್ನಾಡೋಕೆ ಕಾರಣ ರಾಧಾ ಕಲ್ಯಾಣದಲ್ಲಿ ವಿಷಾಕ ಪಾತ್ರ ಮಾಡುತ್ತಿದ್ದ ನಟಿ ಚೈತ್ರಾ ರೈ. ಮಂಗಳೂರು ಮೂಲದ ನಟಿ ಕನ್ನಡದಲ್ಲಿ ಮಾಡಿದ್ದು ಬೆರಳಿಣಿಕೆಯಷ್ಟು ಧಾರಾವಾಹಿ. ಹೆಚ್ಚಾಗಿ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಂಡಿದ್ರು. ರಾಧಾ ಕಲ್ಯಾಣ ನಂತರ ನಟಿ ಎಲ್ಲೋದರು ಅನ್ನೋ ಪ್ರಶ್ನೆಗೆ ಉತ್ತರ ತೆಲುಗು.
ಹತ್ತು ಹನ್ನೇರಡು ವರ್ಷಗಳಿಂದ ಚೈತ್ರಾ ಅವರು ತೆಲುಗು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ನೆಲೆಸಿರೋ ನಟಿಗೆ ಮದುವೆ ಆಗಿ ಮುದ್ದಾದ ಮಗಳಿದ್ದಾಳೆ.
ಸದ್ಯ ಚೈತ್ರಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಸದ್ಯದಲ್ಲೇ ನಟಿ ಚೈತ್ರಾ ರೈ ಅವರ ಮನೆಗೆ ಹೊಸ ಅತಿಥಿ ಆಗಮನ ಆಗಲಿದೆ. ನಟಿ ಚೈತ್ರಾ ರೈ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್​ ಲುಕ್​ನಲ್ಲಿ ನಟಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಆದಷ್ಟು ಕಾಳಜಿ ವಹಿಸಿ ಅಂತ ಕಾಮೆಂಟ್ಸ್​ ಮೂಲಕ ಸಲಹೆ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ