11 ಡ್ರೈವಿಂಗ್ ಲೈಸೆನ್ಸ್.. ಬೃಹತ್​ ವಾಹನಗಳನ್ನು ಚಲಾಯಿಸಿದ ಭಾರತದ ಮೊದಲ ಮಹಿಳೆ.. ಯಾರೀ ಗಟ್ಟಿಗಿತ್ತಿ?

author-image
Gopal Kulkarni
Updated On
11 ಡ್ರೈವಿಂಗ್ ಲೈಸೆನ್ಸ್.. ಬೃಹತ್​ ವಾಹನಗಳನ್ನು ಚಲಾಯಿಸಿದ ಭಾರತದ ಮೊದಲ ಮಹಿಳೆ.. ಯಾರೀ ಗಟ್ಟಿಗಿತ್ತಿ?
Advertisment
  • 74 ವರ್ಷ, 11 ಬಗೆಯ ಡ್ರೈವಿಂಗ್ ಲೈಸೆನ್ಸ್​, ಈ ದಿಟ್ಟ ಮಹಿಳೆ ಯಾರು ಗೊತ್ತಾ?
  • ದೇಶದಲ್ಲಿ ಮೊದಲ ಬಾರಿಗೆ ಭಾರೀ ವಾಹನಗಳ ಲೈಸೆನ್ಸ್ ಪಡೆದ ಮಹಿಳೆ ಇವರು
  • ವಯಸ್ಸು ಎಂಬುದು ಸಾಧನೆಗೆ ಎಂದೂ ಅಡ್ಡಿಯಲ್ಲ ಎಂದು ನಿರೂಪಿಸಿದ್ದು ಹೇಗೆ?

ವಯಸ್ಸು ಅನ್ನೋದು ಒಂದು ಸಂಖ್ಯೆಯಷ್ಟೇ ಎಂಬುದನ್ನು ಹಲವರು ನಿರೂಪಿಸಿದ್ದಾರೆ. ನಿರೂಪಿಸುತ್ತಲೂ ಇದ್ದಾರೆ. ಸಾಧನೆಗೆ, ಸಾಹಸಗಳಿಗೆ, ಯಶಸ್ಸಿಗೆ ವಯಸ್ಸು ಎಂಬುದು ಒಂದು ಅಡ್ಡಿ ಅಲ್ಲವೇ ಅಲ್ಲ. ಅದೊಂದು ನೆಪವಷ್ಟೇ. ಹೀಗೆ ವಯಸ್ಸಿನ ಹಂಗೇ ಇಲ್ಲದೇ, ತಮ್ಮ ಸಾಧನೆಯತ್ತ

ಕೇರಳದಲ್ಲಿ ರಾಧ ಮನಿಯಮ್ಮ ಅಂದ್ರೆ ಒಂದು ದೊಡ್ಡ ಹೆಸರೇ ಇದೆ. ಅವರ ಸಾಧನೆಗಳನ್ನ, ವೃತ್ತಿಯ ಬಗ್ಗೆ ಇರುವ ಅವರ ಶ್ರದ್ಧೆಯ ಕಥೆಗಳನ್ನು ಹೇಳುತ್ತದೆ ಕೇರಳದ ಪ್ರತಿ ಬೀದಿ. ಅದರಲ್ಲೂ ರಾಧಮ್ಮ 11 ಡ್ರೈವಿಂಗ್ ಲೈಸನ್ಸ್ ಹೊಂದಿರುವುದು ಇನ್ನೊಂದು ವಿಶೇಷ. ಇವರು ಕಾರ್​, ಸ್ಕೂಟರ್​, ಹೆವ್ವಿ ಡ್ಯೂಟಿ ಮಷಿನರಿಗಳಾದಂತಹ ಜೆಸಿಬಿ ಹಾಗೂ ಕ್ರೇನ್​ಗಳನ್ನು ಕೂಡ ಓಡಿಸುತ್ತಾರೆ.


74 ವರ್ಷದ ರಾಧಾ ಮನಿಯಮ್ಮ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಅವರ ಸಮುದಾಯದಲ್ಲಿ ಉಳಿದವರು ಕಂಡ ಶಿಕ್ಷಣ ಹೊಂದುವ ಬದುಕನ್ನು ಬೇರೆ ರೀತಿ ಕಟ್ಟಿಕೊಳ್ಳುವ ಅವಕಾಶದಿಂದ ಆರಂಭದಲ್ಲಿ ಅವರು ವಂಚಿತರಾದವರು. ಆದ್ರೆ ರಾಧಾ ಅವರಿಗೆ ಡ್ರೈವಿಂಗ್ ಬಗ್ಗೆ ಒಂದು ದೊಡ್ಡ ಹುಚ್ಚು ಇತ್ತು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ರಾಧಾ ಹೇಳಿಕೊಂಡಿದ್ದಾರೆ. ತಮ್ಮ ಈ ಆಸಕ್ತಿಯನ್ನು ಅವರು ತಮ್ಮ ಪತಿಯ ಜೊತೆಗೆ ಹಂಚಿಕೊಂಡಿದ್ದರು. 1981ರಲ್ಲಿ ರಾಧಾ ಮನಿಯಮ್ಮ ಅವರು ಮೊದಲ ಬಾರಿ ಕಾರ್​ ಡ್ರೈವಿಂಗ್ ಲೈಸೆನ್ಸ್ ಪಡೆದರು. ಇದಾದ ಮೇಲೆ 1984ರಲ್ಲಿ ಮೊದಲ ಬಾರಿ ಬೃಹತ್ ವಾಹನಗಳ ಚಾಲನಾ ಪರವಾನಿಗೆ ಪತ್ರವನ್ನು ಪಡೆದ ದೇಶದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಯನ್ನು ಕೂಡ ಪಡೆದರು.

ಇದನ್ನೂ ಓದಿ:ನಿಮ್ಮ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಬೆಳೆಸೋದು ಹೇಗೆ? ಅದಕ್ಕಾಗಿ ಪೋಷಕರು ಏನ್ಮಾಡಬೇಕು?

ರಾಧಾಮ್ಮ ಹಾಗೂ ಅವರ ಪತಿ 1970ರ್ಲಿ ಎ2ಝೆಡ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಹೆವ್ವೀ ಇಕ್ವಿಪ್ಮೆಂಟ್​ಗಳನ್ನು ಮಾರಾಟ ಮಾಡುತ್ತಿರುವ ವೇಳೆಯೇ ಹಲವು ಜನರಿಗೆ ಹೆವ್ವಿ ವೆಹಿಕಲ್​​ಗಳನ್ನು ಓಡಿಸುವದನ್ನು ಹೇಳಿಕೊಡುವ ಮೂಲಕಲೈಸನ್ಸ್​ ಸಿಗುವಂತೆ ಮಾಡಿತ್ತು ಈ ಜೋಡಿ. 2004ರಲ್ಲಿ ರಾಧಾ ಅವರ ಪತ್ನಿ ತೀರಿಕೊಂಡ ಬಳಿಕ ಅವರ ಎದುರು ದೊಡ್ಡ ಸವಾಲೊಂದು ಎದುರಾಗಿತ್ತು. ಪುರುಷ ಪ್ರಾಧಾನ್ಯತೆಯೇ ಹೆಚ್ಚು ಇರುವ ಅವರ ವ್ಯಾಪಾರವನ್ನು ಮಹಿಳಾ ಸಬಲೀಕರಣದತ್ತ ತೆಗೆದುಕೊಂಡು ಹೋಗುವ ಚಾಲೆಂಜ್ ರಾಧಾ ಅವರ ಎದುರು ಇತ್ತು.

ಇದನ್ನೂ ಓದಿ: ಮತ್ತಷ್ಟು ಸ್ಲಿಮ್‌ ಆದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಧನುಶ್ರೀ; ಸೀಕ್ರೆಟ್ ಏನು ಗೊತ್ತಾ?


ಅವರ ಶ್ರಮ ಹಾಗೂ ಶ್ರದ್ಧೆ ಅವರನ್ನು ಇಂಡಿಯಾದ ಬುಕ್​ ಆಫ್​ ರೆಕಾರ್ಡ್​ನಲ್ಲಿ ಹೆಸರು ಮೂಡುವಂತೆ ಮಾಡಿತು. 2022ರಲ್ಲಿ ವರ್ಷದ ಪ್ರೇರಣಾದಾಯಕ ವ್ಯಕ್ತಿತ್ವ ಎಂಬ ಅವಾರ್ಡ್​ನ್ನು ಕೂಡ ರಾಧಾ ಮನಿಯಮ್ಮ ಪಡೆದಿದ್ದಾರೆ. ರಾಧಾ ಮನಿಯಮ್ಮ ಸದ್ಯ ಎಷ್ಟು ಜನಪ್ರಿಯವಾಗಿದ್ದಾರೆ ಅಂದ್ರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 29 ಲಕ್ಷ ಜನರು ಫಾಲೋವರ್ಸ್​ ಹೊಂದಿದ್ದಾರೆ.
ಕೇವಲ 11 ಲೈಸೆನ್ಸ್ ಹೊಂದಿರುವುದು ಮಾತ್ರ ರಾಧಾ ಅವರ ಸಾಧನೆಯಲ್ಲ. ಅವರು ಟ್ರಾನ್ಸ್​ಪೋರ್ಟ್​ ಉದ್ಯದಮದಲ್ಲಿ ತಮ್ಮದೇ ಆದ ಒಂದು ಎತ್ತರಕ್ಕೆ ಬೆಳೆದಿದ್ದಾರೆ. ಆ ಕ್ಷೇತ್ರದಲ್ಲಿಯೂ ಕೂಡ ಅವರ ಶ್ರಮ ಶ್ರದ್ಧೆಗಳು ಕಾಣವುವಂತೆ ಬೆಳೆದಿದ್ದಾರೆ. ಸದ್ಯ ರಾಧಾ ಮನಿಯಮ್ಮ ಅವರು Age Is Just Number ಎಂಬ ಮಾತಿಗೆ ಮೂರ್ತರೂಪದಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment