/newsfirstlive-kannada/media/post_attachments/wp-content/uploads/2025/01/YATNAL_VIJAYENDRA.jpg)
ಕೇಸರಿ ಪಡೆಯಲ್ಲಿ ನಡೆಯುತ್ತಿರುವ ಆಂತರಿಕ ವಾರ್ಗೆ ತಡೆ ಹಾಕೋದಕ್ಕೆ ಹೈಕಮಾಂಡ್ ಮುಂದಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಶುರುವಾಗಿರುವ ಸಮರ ಹೈಕಮಾಂಡ್ ನಾಯಕರಿಗೆ ತಲೆ ಬಿಸಿ ಜಾಸ್ತಿ ಮಾಡಿದೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲು ಬಂದ ರಾಧಮೋಹನ್ ದಾಸ್ ಅಗರವಾಲ್ಗೆ ಮತ್ತಷ್ಟು ತಲೆನೋವು ಶುರುವಾಗಿದೆ.
ರಾಜ್ಯ ಬಿಜೆಪಿ ಗೊಂದಲಕ್ಕೆ ಬ್ಯಾಕ್ ಟು ಬ್ಯಾಕ್ ಸಭೆ
ರಾಜ್ಯ ಕಮಲದಲ್ಲಿ ವಿಜಯೇಂದ್ರ ವರ್ಸಸ್ ಯತ್ನಾಳ್ ಬಣದ ನಡುವೆ ಕದನ ತಾತರಕ್ಕೇರಿದೆ. ಇದಕ್ಕೆ ಬ್ರೇಕ್ ಹಾಕೊದಕ್ಕೆ ಹೈಕಮಾಂಡ್ ಕಟ್ಟು ನಿಟ್ಟಿನ ಆಜ್ಞೆ ನೀಡಿದೆ. ಯಾವಾಗ ಹೈಕಮಾಂಡ್ ಆರ್ಡರ್ ಪಾಸ್ ಅಗುತ್ತಲೆ ರಾಜ್ಯಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್ ಅಗರವಾಲ್ ಪಕ್ಷದ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಭೆಗಳನ್ನ ನಡೆಸಿದ್ದಾರೆ.
ಇನ್ನೂ ಈ ಸಭೆಗೂ ಮುನ್ನ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣದ MP ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಶಾಸಕರ ಸಭೆ ನಡೆಸಿ ಪಕ್ಷ ಕಟ್ಟೋಕೆ ಹಾಲಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಮಾತ್ರ ಸಾಲೋದಿಲ್ಲ. ನಮ್ಮ ಸಹಕಾರವೂ ಬೇಕಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನ ಮುಂದುವರೆಸಿ ಯತ್ನಾಳ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಂತ ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್ ದಾಸ್ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:VIDEO: ಮಹಾ ಕುಂಭಮೇಳದಲ್ಲೂ ಕನ್ನಡದ ಕಲರವ; ನ್ಯೂಸ್‌ಫಸ್ಟ್‌ಗೆ ಕನ್ನಡಿಗರು ಹೇಳಿದ್ದೇನು?
ಚುನಾವಣೆ ಆಗಬೇಕಾ, ಆಗಬಾರದ ಸರ್ವ ಸಮ್ಮತ ಆಗಬೇಕಾ ಎನ್ನುವ ತೀರ್ಮಾನ ಮಾಡುವುದು ಶಿವರಾಜ್ಸಿಂಗ್ ಸವ್ಹಾಣ್ ಅವರಿಗೆ ಇರುತ್ತದೆ. ಕೇಂದ್ರದ ನಾಯಕರ ಜೊತೆ ಮಾತನಾಡುತ್ತಾರೆ. ಕೇಂದ್ರದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಏನು ನಿರ್ಧಾರ ಕೊಡುತ್ತಾರೋ ಅದಕ್ಕೆ ನಾವೆಲ್ಲರೂ ತಲೆ ಬಾಗುತ್ತೇವೆ.
ಆರ್.ಅಶೊಕ್, ವಿಪಕ್ಷ ನಾಯಕ
ನ್ಯೂಸ್‌ಫಸ್ಟ್‌ಗೆ ಸಭೆಯಲ್ಲಾದ ಚರ್ಚೆ, ಸಂಪೂರ್ಣ ಮಾಹಿತಿ ಲಭ್ಯ
ಸಭೆಯಲ್ಲಿ ಎರಡು ಬಣ ವಿಚಾರವೇ ಹೆಚ್ಚು ಸದ್ದು ಮಾಡಿದೆ.. ಪಕ್ಷದ ಆಂತರಿಕ ಕಲಹವನ್ನ ಸರಿಪಡಿಸಿ.. ದಿನ ಬೆಳಗಾದ್ರೆ ಇವರದ್ದೇ ಕಿತ್ತಾಟ.. ಬಹಿರಂಗ ಹೇಳಿಕೆಗಳಿಂದ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ. ನಮಗೂ ಕ್ಷೇತ್ರದಲ್ಲಿ ಮುಜುಗರ.. ಕಾಂಗ್ರೆಸ್ ನವರು ಕಾಲೆಳೀತಿದ್ದಾರೆ.. ನಮಗೂ ಬಣ ಕಚ್ಚಾಟ ಸಾಕಾಗಿದೆ ಮೊದಲು ಪರಿಸ್ಥಿತಿ ಸರಿಪಡಿಸಿ ಅಂತ ಶಾಸಕರು ಒತ್ತಾಯ ಮಾಡಿದ್ದಾರೆ. ಇನ್ನೂ ದಾವಣಗೆರೆ ಲೋಕಸಭಾ ಸೋಲಿನಲ್ಲಿ ರೇಣುಕಾಚಾರ್ಯ ಮಾಡಿದ್ದು ಒಳ ರಾಜಕೀಯ, ಅವರು ಮಾಡಿದ್ದು ಸರಿನಾ ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದ ಹರಿಹಯ ಶಾಸಕ ಹರೀಶ್ ಅಸಮಧಾನದ ಮಾತಿಗೆ ಪೂರಕವಾಗಿ ಮಾತನಾಡಿದರಂತೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್.
ಸಭೆಯಲ್ಲಿ ಚರ್ಚಿತ ವಿಷಯಗಳು!
- ರಾಜ್ಯ ಬಿಜೆಪಿ, ಸಂಘಟನಾತ್ಮಕವಾಗಿ 39 ಜಿಲ್ಲೆಗಳನ್ನ ಮಾಡಿದೆ
- ಈ ಪೈಕಿ ಮಹಿಳಾ ಮೀಸಲಾತಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕು
- ಕನಿಷ್ಠ 10 ಜಿಲ್ಲೆಗಳಲ್ಲಾದ್ರೂ ಮಹಿಳೆಯರನ್ನ ಜಿಲ್ಲಾಧ್ಯಕ್ಷರಾಗಿ ಮಾಡಿ
- ನಿರೀಕ್ಷೆ ಮಟ್ಟಕ್ಕೆ ಕಾರ್ಯನಿರ್ವಹಣೆ ಮಾಡದವರಿಗೆ ಅವಕಾಶ ಕಟ್
- ಎಲ್ಲಾ ಮೋರ್ಚಾಗಳ ಅಧ್ಯಕ್ಷರ ಬದಲಾವಣೆ ಮಾಡೋದು ಉತ್ತಮ
- ಹೊಸ ಜಿಲ್ಲಾಧ್ಯಕ್ಷರ ನೇಮಕ, ವಯಸ್ಸು 60 ವರ್ಷಕ್ಕಿಂತ ಕೆಳಗಿರಬೇಕು
- ಹೊಸ ಮುಖ, ಸಂಘಟನೆ ಉತ್ಸಾಹ, ವರ್ಚಸ್ಸು ಉಳ್ಳವರಿಗೆ ಆದ್ಯತೆ
- ರಾಜ್ಯ ನಾಯಕರ ಟಾರ್ಗೆಟ್ ಸರಿ ಹೋಗಲಿ, ನಿರ್ದಾಕ್ಷಿಣ್ಯವಾಗಿ ಕ್ರಮ
- ರಾಷ್ಟ್ರೀಯಾಧ್ಯಕ್ಷರ ನೇಮಕ ಬಳಿಕ, ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ
- ಕೇಂದ್ರದಿಂದ ಮಹಿಳಾ ಮೀಸಲಾತಿ ಕೊಟ್ಟಿದೆ, ಸದ್ಭಳಕೆ ಆಗಬೇಕು
ಬಿಜೆಪಿ ಬಣ ಬಡಿದಾಟಕ್ಕೆ ತೆರೆ ಎಳೆಯುವ ಸೆಣೆಸಾಟ ನಡೆಯುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಶಾಸಕರ ಸಂಸದರ ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ನೀಡಲು ವರದಿ ಸಿದ್ಧವಾಗಿದೆ. ಇದಕ್ಕೆ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ, ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ಏನ್ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ