ಬಾಲ್ಗಾಗಿ ಓಡೋಡಿ ಹೋಗಿ ಕ್ಯಾಚ್ ಹಿಡಿದ ಪ್ಲೇಯರ್ ರಾಧ
ಏಕದಿನ ಪಂದ್ಯದಲ್ಲಿ ಇದೊಂದು ಅತ್ಯದ್ಭುತ ಕ್ಯಾಚ್ ಆಗಿದೆ
ರಾಧ ಯಾದವ್ ಡೈವ್ ಮಾಡಿದ ವಿಡಿಯೋ ಸಖತ್ ವೈರಲ್
ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಧ ಯಾದವ್ ಅತ್ಯದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಆಗಿ ಕ್ರೀಸ್ಗೆ ಆಗಮಿಸಿದ ಸುಜಿ ಬೇಟ್ಸ್ 58, ಜಾರ್ಜಿಯಾ ಪ್ಲಿಮ್ಮರ್ 41 ರನ್ ಗಳಿಸಿ ಉತ್ತಮ ಆರಂಭವನ್ನು ನೀಡಿ ಔಟ್ ಆದರು. ನಂತರ ಕ್ರೀಸ್ನಲ್ಲಿ ಕ್ಯಾಪ್ಟನ್ ಸೋಫಿ ಡಿವೈನ್ ಹಾಗೂ ಬ್ರೂಕ್ ಹ್ಯಾಲಿಡೇ ಬ್ಯಾಟಿಂಗ್ ಮಾಡುತ್ತಿದ್ದರು.
ಇದನ್ನೂ ಓದಿ: ಕಿವೀಸ್ ಎದುರು ಮಂಡಿಯೂರಿದ ಟೀಮ್ ಇಂಡಿಯಾ.. ಕ್ಯಾಪ್ಟನ್ ಸೋಫಿ ಡಿವೈನ್ ಬೊಂಬಾಟ ಬ್ಯಾಟಿಂಗ್
ಈ ವೇಳೆ 32ನೇ ಓವರ್ನ ಪ್ರಿಯಾ ಮಿಶ್ರಾ ಬೌಲಿಂಗ್ನಲ್ಲಿ ಬ್ರೂಕ್ ಹ್ಯಾಲಿಡೇ ಫ್ರಂಟ್ ಬಂದು ಬಿಗ್ ಶಾಟ್ ಮಾಡಿದರು. ಆ ಬಾಲ್ ಸಿಕ್ಸ್ ಹೋಗುತ್ತೆ ಎಂದು ಭಾವಿಸಲಾಗಿತ್ತಾದ್ರು ಮೈದಾನದಲ್ಲೇ ಮೇಲಕ್ಕೆ ಹೋಯಿತು. ಈ ವೇಳೆ ಫ್ರಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಧ ಯಾದವ್ ವೇಗವಾಗಿ ಓಡಿ ಬಾಲ್ ಅನ್ನು ಡೈವ್ ಮಾಡಿ ಕ್ಯಾಚ್ ಹಿಡಿದರು. ಇದರಿಂದ ಕಿವೀಸ್ 139 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ರಾಧ ಯಾದವ್ ಡೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
At this point I think India should name the fielding medal after her..
‘The Radha Yadav Fielding Medal’ award goes to..pic.twitter.com/VrBXTAAdwu
— Kanav Bali (@Concussion__Sub) October 27, 2024
ಈ ಪಂದ್ಯದಲ್ಲಿ ಆಲ್ರೌಂಡರ್ ಆಟ ಆಡಿದ್ದ ರಾಧ ಯಾದವ್ ಅವರು 3 ಕ್ಯಾಚ್ ಹಿಡಿದಿದ್ದು ಅಲ್ಲದೇ, 4 ವಿಕೆಟ್ ಪಡೆದಿದ್ದರು. ಜೊತೆಗೆ ಅದ್ಭುತ ಬ್ಯಾಟಿಂಗ್ ಮಾಡಿ 48 ರನ್ಗಳನ್ನ ಬಾರಿಸಿದ್ದರು. ಈ ಏಕದಿನ ಪಂದ್ಯದಲ್ಲಿ ಕಿವೀಸ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ಗಳನ್ನ ಗಳಿಸಿತ್ತು. ಆದರೆ ಭಾರತದ ಮಹಿಳಾ ಆಟಗಾರ್ತಿಯರು 47 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 183 ರನ್ಗಳನ್ನ ಮಾತ್ರ ಗಳಿಸಿತು. ಇದರಿಂದ ನ್ಯೂಜಿಲೆಂಡ್ 76 ರನ್ಗಳಿಂದ ವಿಜಯ ಸಾಧಿಸಿ, ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ