/newsfirstlive-kannada/media/post_attachments/wp-content/uploads/2024/09/Radhika-kumaraswamy.jpg)
ಸ್ಯಾಂಡಲ್‌ವುಡ್ ಸ್ವೀಟಿ ಖ್ಯಾತಿಯ ರಾಧಿಕಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಬಹಳ ವರ್ಷಗಳ ಈ ಕುತೂಹಲಕ್ಕೆ ಕೊನೆಗೂ ಹೊಸ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್ ಫಸ್ಟ್ ವಿಶೇಷ ಸಂದರ್ಶದಲ್ಲಿ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ ಅವರೇ ನಾನ್ ರೆಡಿ ಎಂದು ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ಮತ್ತಷ್ಟು ಸೀಕ್ರೆಟ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪರೂಪಕ್ಕೆ ರಾಧಿಕಾ ಕುಮಾರಸ್ವಾಮಿ ಕಂಡು ಖುಷ್.. ಸ್ವೀಟಿಗೆ ವಯಸ್ಸೇ ಆಗಲ್ವಾ ಎಂದ ಫ್ಯಾನ್ಸ್! VIDEO
ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬರಲು ನಾನ್ ರೆಡಿ ಅನ್ನೋ ಸಂದೇಶವನ್ನು ನೀಡಿದ್ದಾರೆ. ಸಿನಿಮಾನಾ, ರಾಜಕೀಯನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ಅವಕಾಶ ಸಿಕ್ರೆ ರಾಜಕೀಯಕ್ಕೆ ಬರೋದಾಗಿ ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರನ್ನು ನ್ಯೂಸ್ ಫಸ್ಟ್ ಎಕ್ಸ್ಕ್ಲೂಸಿವ್ ಸಂದರ್ಶನ ಮಾಡಿದೆ. ಅದರಲ್ಲಿ ರಾಧಿಕಾ ಲೈಫು, ಫ್ಯಾಷನ್ ಕುರಿತ ಪ್ರಶ್ನೆಗಳಿಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಪ್ರಮುಖವಾಗಿ ರಾಧಿಕಾ ಕುಮಾರಸ್ವಾಮಿ ಅವರ ಬ್ಯೂಟಿ ಸೀಕ್ರೆಟ್ ಏನು? ರಾಧಿಕಾ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ರಾಧಿಕಾ ಮಗಳು ಅಪ್ಪನ ಹಾಗೋ ಅಮ್ಮನ ಹಾಗೋ ಅನ್ನೋದಕ್ಕೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಇಲ್ಲಿದೆ ಹೊಸ ಸುದ್ದಿ..!
View this post on Instagram
ಇದೇ ಸಂದರ್ಶನದಲ್ಲಿ ನಟ ದರ್ಶನ್ ಸ್ಥಿತಿ ಕಂಡು ಮರುಗಿರುವ ರಾಧಿಕಾ ಕುಮಾರಸ್ವಾಮಿ ಅವರು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ