ಕತ್ತಿನಲ್ಲಿದ್ದ ಸರ ಬಳೆಯಾಗಿ ಕೈಗೆ ಬಂತು.. ಕರಿಮಣಿ, ಮುತ್ತು, ಲಾಕೆಟ್ ಅಷ್ಟೇ ಅಲ್ಲ ಇನ್ನೂ ಏನೋ ಇದೆ..!

author-image
Ganesh
Updated On
ಕತ್ತಿನಲ್ಲಿದ್ದ ಸರ ಬಳೆಯಾಗಿ ಕೈಗೆ ಬಂತು.. ಕರಿಮಣಿ, ಮುತ್ತು, ಲಾಕೆಟ್ ಅಷ್ಟೇ ಅಲ್ಲ ಇನ್ನೂ ಏನೋ ಇದೆ..!
Advertisment
  • ತಾಳಿ ಸರದಲ್ಲಿ ಅಂಬಾನಿ ಸೊಸೆಯ ‘ಅನಂತ ಪ್ರೀತಿ’
  • ಇನ್ಮುಂದೆ ಇದೇ ಟ್ರೆಂಡ್ ಆದರೂ ಅಚ್ಚರಿ ಇಲ್ಲ
  • ಟ್ರೆಂಡ್ ಸೃಷ್ಟಿಸೋದ್ರಲ್ಲಿ ಅಂಬಾನಿ ಸೊಸೆಯರು ಫಂಟರ್

ಸಿರಿವಂತ ಅಂಬಾನಿ ಕುಟುಂಬದ ಸೊಸೆಯಂದಿರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಈ ವಿಚಾರದಲ್ಲಿ ನೀತಾ ಅಂಬಾನಿ ಮಾತ್ರವಲ್ಲ, ಇತ್ತೀಚೆಗಷ್ಟೇ ಅಂಬಾನಿ ಕುಟುಂಬ ಸೇರಿರುವ ರಾಧಿಕಾ ಮರ್ಚೆಂಟ್ ಕೂಡ ಸಾಮಾಜಿಕ ಜಾಲತಾಣದ ಅಟೆನ್ಷನ್ ಕ್ರಿಯೇಟರ್!

ಸದ್ಯ ನೀತಾ ಅಂಬಾನಿಗಿಂತ ರಾಧಿಕಾ ಮರ್ಚೆಂಟ್ ಹೆಚ್ಚು ಟ್ರೆಂಡ್​​ನಲ್ಲಿದ್ದಾರೆ. ತಮ್ಮ ನೋಟ, ಫ್ಯಾಷನ್ ಹಾಗೂ ಜೀವನ ಶೈಲಿ ವಿಚಾರದಲ್ಲಿ ಅಭಿಮಾನಿಗಳ ಹೃದಯಕ್ಕೆ ಹತ್ತಿರ ಆಗ್ತಿದ್ದಾರೆ. ಇಲ್ಲಿ ಅವರ ಫ್ಯಾಷನ್‌ಗೆ ಯಾವುದೇ ಉತ್ತರವಿಲ್ಲ. ವಿಷಯ ಏನೆಂದರೆ ಕಳೆದ ಮೂರು ದಿನಗಳ ಹಿಂದಷ್ಟೇ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದೇವೆ.

ತಾಳಿ ಸರದ ಮೇಲೆ ‘ಅನಂತ ಪ್ರೀತಿ’

ಇದೇ ಸಂದರ್ಭದಲ್ಲಿನ ವಿಶೇಷ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್​ಗೆ ಸಂಬಂಧಿಸಿದ ಫೋಟೋ ಅದು. ಉದ್ಯಮಿ ಪತ್ನಿ ಬಳಿಯಿರುವ ಮಂಗಳ ಸೂತ್ರಕ್ಕೆ ಸಂಬಂಧಿಸಿದ ಫೋಟೋ. ಈ ಫೋಟೋದಲ್ಲಿ ರಾಧಿಕಾ ಮಂಗಳ ಸೂತ್ರವನ್ನು ಕೊರಳಲ್ಲಿ ಹಾಕಿಕೊಂಡಿಲ್ಲ. ಬದಲಾಗಿ ಅದನು ಬಳೆಯಾಗಿ ಪರಿವರ್ತಿಸಿ ಕೈಗೆ ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ:ಗಂಭೀರ್ ತಲೆದಂಡಕ್ಕೆ ಕೌಂಟ್​ಡೌನ್.. 2 ತಿಂಗಳು, 2 ಚಾನ್ಸ್ ಟೈಮ್​ ಫಿಕ್ಸ್..!

publive-image

ಅಷ್ಟೇ ಅಲ್ಲ, ಕೈಯಲ್ಲಿರುವ ಮಂಗಳ ಸೂತ್ರದಲ್ಲಿ ಅನಂತ್ ಅಂಬಾನಿ ಮೇಲೆ ಅವರಿಗಿರುವ ಪ್ರೀತಿಯನ್ನು ಜನ ಕಂಡಿದ್ದಾರೆ. ಅಂದಹಾಗೆ ಮಣಿಕಟ್ಟಿನ ಮೇಲೆ ತಾಳಿ ಸರ ಕಟ್ಟಿ ಕೊಂಡಿದ್ದರು. ಆ ಮಂಗಳ ಸೂತ್ರದಲ್ಲಿ ಕರಿಮಣಿ, ಮುತ್ತುಗಳು ಹಾಗೂ ಲಾಕೆಟ್ ಹೊರತುಪಡಿಸಿ ಅನಂತ್ ಅಂಬಾನಿ ಹೆಸರಿನ ಮೊದಲ ಅಕ್ಷರ ಕೂಡ ಒಳಗೊಂಡಿದೆ. ಅದರಲ್ಲಿ ನೀವು ಇಂಗ್ಲಿಷ್ ಅಕ್ಷರ A ಎಂದು ಬರೆದಿರುವುದನ್ನು ನೋಡಬಹುದು. ಇದನ್ನು ನೋಡಿದ ಜನರು ಅನಂತ್ ಅಂಬಾನಿಯನ್ನು ರಾಧಿಕಾ ಎಷ್ಟು ಪ್ರೀತಿಸುತ್ತಾರೆ ಅನ್ನೋದು ಇಲ್ಲಿ ಗೊತ್ತಾಗ್ತಿದೆ ಎಂದಿದ್ದಾರೆ.

ಇದೇ ಟ್ರೆಂಡ್ ಆದರೂ ಅಚ್ಚರಿ ಇಲ್ಲ

ಫ್ಯಾಷನ್ ಆಗಿ ರಾಧಿಕಾ ಮರ್ಚೆಂಟ್ ಕೈಗೆ ತಾಳಿ ಸರವನ್ನು ಕಟ್ಟಿಕೊಂಡಿದ್ದಾರೆ. ಇದು ಅವರ ಸ್ಟೈಲ್ ಆಗಿದೆ. ಮುಂದಿನ ದಿನಗಳಲ್ಲಿ ಇದು ಹೊಸ ಟ್ರೆಂಡ್ ಆದರೂ ಅಚ್ಚರಿ ಇಲ್ಲ. ಯಾಕೆಂದರೆ ರಾಧಿಕಾ ಮರ್ಚೆಂಟ್, ನೀತಾ ಅಂಬಾನಿ ಟ್ರೆಂಡ್ ಸೃಷ್ಟಿಸೋದ್ರಲ್ಲಿ ಫೇಮಸ್. ಹೀಗಾಗಿ ಮುಂದೊಂದು ದಿನ ಇದು ಹೆಣ್ಮಕ್ಕಳ ಫ್ಯಾಷನ್ ಆದರೂ ಅಚ್ಚರಿ ಇಲ್ಲ. ಅಂದ್ಹಾಗೆ ಈ ಸುಂದರ ಫೋಟೋವನ್ನು ಮೊದಲು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ರಾಧಿಕಾ ಮರ್ಚೆಂಟ್ ಅವರ ಪ್ರೀತಿಯ ಸಹೋದರಿ ಅಂಜಲಿ.

ಇದನ್ನೂ ಓದಿ:ಅನಂತ್ ಅಂಬಾನಿಗೆ ವಾಚ್​ ಕ್ರೇಜ್; ದಿಗಿಲು ಹುಟ್ಟಿಸುತ್ತೆ ಕೈಯಲ್ಲಿರುವ ವಾಚ್​​ನ ಬೆಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment