Advertisment

ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

author-image
Bheemappa
Updated On
ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?
Advertisment
  • ನೋಡೋಕೆ ಪಿಂಕ್ ಕಲರ್ ಲೆಹೆಂಗಾ, ಇದರಲ್ಲಿರೋದೆಲ್ಲ ಚಿನ್ನ
  • ಅಂಬಾನಿ ಸೊಸೆಯ ಲೆಹೆಂಗಾದಲ್ಲಿ ಸಂಸ್ಕೃತ ಶ್ಲೋಕಗಳಿವೆಯಾ?
  • ಈ ಲೆಹೆಂಗಾ ರೆಡಿ ಮಾಡಿರುವ ಬಾಲಿವುಡ್ ಡಿಸೈನರ್ ಯಾರು?

ಅಂಬಾನಿ ಫ್ಯಾಮಿಯಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳು ಕಳೆಗಟ್ಟಿವೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹದ ವೇಳೆ ಸ್ವರ್ಗವೇ ಧರೆಗೆ ಇಳಿದಂತ ಅನುಭವ ಆಗೋದು ಪಕ್ಕಾ. ಮುಂಬೈಯ ಅಂಬಾನಿ ನಿವಾಸದಲ್ಲಿ 'ಮಾಮೆರು' ಸಮಾರಂಭ ಸಡಗರದಿಂದ ನಡೆಸಲಾಗಿದೆ. ಇದರಲ್ಲಿ ನವ ವಧು ರಾಧಿಕಾ ಧರಿಸಿದ್ದ ಪಿಂಕ್ ಕಲರ್ ಬಂಧಿನಿ ಲೆಹೆಂಗಾದಲ್ಲಿದ್ದ ಸಂಸ್ಕೃತ ಶ್ಲೋಕಗಳನ್ನ ಬಂಗಾರದಿಂದ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

Advertisment

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

'ಮಾಮೆರು' ಸಮಾರಂಭದಲ್ಲಿ ವಧು ರಾಧಿಕಾ ಮರ್ಚೆಂಟ್ ತಮ್ಮ ಗುಜರಾತಿ ಸಾಂಪ್ರದಾಯಿಕ ಬಂಧಿನಿ ಲೆಹೆಂಗಾವನ್ನ ತೊಟ್ಟಿದ್ದರು. ಈ ಲೆಹೆಂಗಾವನ್ನು ಬಾಲಿವುಡ್​ನ ಫ್ಯಾಷನ್ ಡಿಸೈನರ್​ ಮನೀಶ್ ಮಲ್ಹೋತ್ರಾ ಅವರು ಅಸಲಿ ಚಿನ್ನದಿಂದ ಮನಮೋಹಕವಾಗಿ ಡಿಸೈನ್ ಮಾಡಿದ್ದರು. ಈ ಲೆಹೆಂಗಾ ಮೇಲೆ ಚಿನ್ನದ ತಾರ್ ಜರ್ದೋಸಿಯಿಂದ ದುರ್ಗಾದೇವಿಯ ಪವಿತ್ರ ಶ್ಲೋಕಗಳನ್ನು ಕಸೂತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ದುರ್ಗಾದೇವಿಯ 9 ಅವತಾರಗಳಿಗೆ ರಾಧಿಕಾ ಅವರು ಪೂಜೆ ಸಲ್ಲಿಸಿ ನಮಸ್ಕಾರ ಮಾಡಿದರು.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

Advertisment

publive-image

ಸಂಪ್ರದಾಯದಂತೆ ರಾಧಿಕಾ ಅವರು ತನ್ನ ತಾಯಿಯ ಚಿನ್ನದ ಆಭರಣಗಳನ್ನು ಸಮಾರಂಭದಲ್ಲಿ ಹಾಕಿಕೊಂಡಿದ್ದರು. ಕಿವಿಯೋಲೆಗಳು, ಕುತ್ತಿಗೆಗೆ ನೆಕ್ಲೇಸ್, ಮಾಂಗ್-ಟೀಕಾ, ಚಿನ್ನದ ಬಳೆಗಳು ಹಾಗೂ ರಾಧಿಕಾ ಜಡೆಗೆ ಸಿಂಗಾರ ಮಾಡಲಾಗಿದ್ದ ಎಲ್ಲ ವಸ್ತುಗಳು ಅಪ್ಪಟ ಚಿನ್ನದಿಂದಲೇ ಮಾಡಿದಂತವು ಆಗಿದ್ದವು. ತನ್ನ ತಾಯಿಯ ಆಭರಣಗಳಲ್ಲಿ ರಾಧಿಕಾ ಸಖತ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಇನ್ನು ರಾಧಿಕಾ ಧರಿಸಿದ್ದ ರಾಯ್ ಬಂಧೇಜ್ (ವೇಲು) ಅನ್ನು ಟೈ-ಡೈ ತಂತ್ರದಿಂದ ಬನಾರಸಿ ಬ್ರೊಕೇಡ್‌ನಿಂದ ತಯಾರಿಸಲಾಗಿದೆ.

ಇದನ್ನೂ ಓದಿ:BREAKING: ನಟ ದರ್ಶನ್‌ಗೆ ಮತ್ತೆ ಜೈಲೇ ಗತಿ.. ನ್ಯಾಯಾಂಗ ಬಂಧನ ವಿಸ್ತರಣೆ; ಎಷ್ಟು ದಿನ?

ಇನ್ನು ಮಾಮೆರು ಸಮಾರಂಭ ಎಂದರೆ ವರನ ಕಡೆಯವರು ನವದಂಪತಿ ಉತ್ತಮವಾದ ಜೀವನ ನಡೆಸಲೆಂದು ಹಾರೈಸುವುದು ಆಗಿದೆ. ಈ ಹಿನ್ನೆಲೆಯಲ್ಲಿ ಮಾಮೆರು ಸಮಾರಂಭವನ್ನ ಅನಂತ್ ಅಂಬಾನಿಯ ಚಿಕ್ಕಪ್ಪ ಮತ್ತು ಕುಟುಂಬದವರು ರಾಧಿಕಾ ಅವರಿಗೆ ನೀಡಿದ್ದು ಸಾಂಪ್ರದಾಯಿಕ ಉಡುಗೊರೆಗಳನ್ನ ಸಮಾರಂಭದಲ್ಲಿ ನೀಡಲಾಗಿದೆ ಎಂದು ಹೇಳಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment