Advertisment

ಮಗಳ ಮೇಲೆ ಅಪ್ಪನಿಂದಲೇ ಗುಂಡಿನ ದಾಳಿ; ಜೀವಬಿಟ್ಟ ನ್ಯಾಷನಲ್ ಲೆವೆಲ್ ಟೆನ್ನಿಸ್ ಆಟಗಾರ್ತಿ.. ಕಾರಣ..?

author-image
Ganesh
Updated On
ಮಗಳ ಮೇಲೆ ಅಪ್ಪನಿಂದಲೇ ಗುಂಡಿನ ದಾಳಿ; ಜೀವಬಿಟ್ಟ ನ್ಯಾಷನಲ್ ಲೆವೆಲ್ ಟೆನ್ನಿಸ್ ಆಟಗಾರ್ತಿ.. ಕಾರಣ..?
Advertisment
  • ಹರಿಯಾಣದ ಗುರುಗ್ರಾಮ್​​ನಲ್ಲಿ ಅಪ್ಪನಿಂದ ಘೋರ ಕೃತ್ಯ
  • ಮಗಳ ಆದಾಯದಲ್ಲಿ ಬದುಕುತ್ತಿದ್ದೀಯಾ ಅಂತಾ ಜನ ಗೇಲಿ
  • ರೊಚ್ಚಿಗೆದ್ದ ತಂದೆಯಿಂದ ಮಗಳ ಮೇಲೆ ಗುಂಡಿನ ದಾಳಿ

ಹೆತ್ತ ತಂದೆಯೇ 25 ವರ್ಷದ ಮಗಳನ್ನು ಗುಂಡಿಕ್ಕಿ ಜೀವ ತೆಗೆದ ಘಟನೆ ಹರಿಯಾಣದ ಗುರುಗ್ರಾಮ್ ಸೆಕ್ಟರ್​​ 75 ರಲ್ಲಿ (Gurugram’s Sector 57) ನಡೆದಿದೆ. ರಾಧಿಕ ಯಾದವ್, (Radhika Yadav) ತಂದೆಯಿಂದಲೇ ಜೀವ ಕಳೆದುಕೊಂಡ ಹೆಣ್ಮಗಳು. ಈಕೆ ನ್ಯಾಷನಲ್ ಲೇವೆಲ್​​ನ ಟೆನ್ನಿಸ್ ಆಟಗಾರ್ತಿ (National-level tennis player) ಆಗಿದ್ದರು.

Advertisment

ಅಪ್ಪ ಯಾಕೆ ಹಾಗೆ ಮಾಡಿದ..?

ದೀಪಕ್ ಯಾದವ್ (Deepak Yadav), ಮಗಳ ಜೀವ ತೆಗೆದ ಆರೋಪಿ ಅಪ್ಪ. ಪೊಲೀಸರಿಗೆ ಆರೋಪಿ ತಪ್ಪೊಪ್ಪಿಗೆ ನೀಡಿದ್ದಾನೆ. ಅದರಲ್ಲಿ ಮಗಳ ಆದಾಯ ಹಾಗೂ ಆಕೆಯ ಕ್ಯಾರೆಕ್ಟರ್​​ ಬಗ್ಗೆ ಸ್ಥಳೀಯರು ನಿಂದಿಸುತ್ತಿದ್ದರು. ಅಲ್ಲದೇ ಮಗಳ ಆದಾಯದಿಂದ ನಾನು ಜೀವ ಸಾಗಿಸುತ್ತಿದ್ದೇನೆ ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ಅವಮಾನಕ್ಕೆ ಒಳಗಾಗಿ ಇಂಥ ಕೆಲಸ ಮಾಡಿದೆ. ನಾನು ಹಲವು ಬಾರಿ ಟೆನ್ನಿಸ್ ಅಖಾಡಮಿ ಮುಚ್ಚುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಆಕೆ ಒಪ್ಪಿರಲಿಲ್ಲ ಅಂತಲೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..

publive-image

ಪೊಲೀಸರು ಆರೋಪಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಅದರ ಪ್ರಕಾರ, ಚಿಕ್ಕಪ್ಪ ಕುಲ್ದೀಪ್ ಯಾದವ್, ಆಕೆಯ ಬಗ್ಗೆ ಪದೇ ಪದೆ ದೂರು ನೀಡುತ್ತಿದ್ದ. ಆದರೂ ರಾಧಿಕಾ ಯಾದವ್ ವಿವಾದಿತ ಅಕಾಡೆಮಿಯನ್ನು ಮುಂದುವರಿಸಿದ್ದಕ್ಕೆ ತಂದೆ ಬೇಸತ್ತುಗೊಂಡಿದ್ದ. ಇದೇ ಕೋಪದಲ್ಲಿ ಗುಂಡು ಹಾರಿಸಿದ್ದಾನೆ. ಅಲ್ಲದೇ ಕೌಟುಂಬಿಕ ಕಲಹ ಕೂಡ ಇತ್ತು  ಎಂದು ದಾಖಲಾಗಿದೆ.

Advertisment

ಇದನ್ನೂ ಓದಿ: ನಾಯಕರು 75ನೇ ವಯಸ್ಸಿಗೆ ನಿವೃತ್ತರಾಗಬೇಕು ಎಂದ ಭಾಗವತ್; ಮೋದಿಗೆ ಲಿಂಕ್ ಮಾಡಿದ ವಿಪಕ್ಷಗಳು..!

ನಿನ್ನೆ ಬೆಳಗ್ಗೆ 10.30ಕ್ಕೆ ಕೃತ್ಯ ನಡೆದಿದೆ. ಮೊದಲ ಮಹಡಿಯ ಕಿಚನ್​​ನಲ್ಲಿ ರಾಧಿಕಾ ಆಹಾರ ತಯಾರು ಮಾಡುತ್ತಿದ್ದಾಗ ಗುಂಡು ಹಾರಿಸಿದ್ದಾನೆ. ದೀಪಕ್, ಪರವಾನಗಿ ಇರುವ ಗನ್​ ಹೊಂದಿದ್ದ. ಅದರಲ್ಲೇ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ.

ರಾಧಿಕಾ ಟೆನ್ನಿಸ್​​ನಲ್ಲಿ ನ್ಯಾಷನಲ್ ಲೇವಲ್​​ವರೆಗೆ ಆಡಿದ್ದರು. ಹಲವು ಟ್ರೋಫಿಗಳಲ್ಲಿ ಗೆಲುವು ಸಾಧಿಸಿದ್ದರು. ಪಂದ್ಯದ ವೇಳೆ ಭುಜಕ್ಕೆ ಗಂಭೀರವಾಗಿ ಗಾಯಮಾಡಿಕೊಂಡಿದ್ದಳು. ಇದರಿಂದ ಆಕೆ ಆಡೋದನ್ನು ನಿಲ್ಲಿಸಿದ್ದಳು. ನಂತರ ಟೆನ್ನಿಸ್ ಅಖಾಡೆಮಿ ತೆರೆದು, ಮಕ್ಕಳಿಗೆ ತರಬೇತಿ ನೀಡುತ್ತಿದ್ದಳು ಎನ್ನಲಾಗಿದೆ.

Advertisment

ಇದನ್ನೂ ಓದಿ: ಮೂರನೇ ಟೆಸ್ಟ್​ನಿಂದ ಪಂತ್ ಔಟ್..? ಗಾಯದ ಬಗ್ಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ಮಾಜಿ ಕ್ರಿಕೆಟಿಗ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment