Advertisment

ಇಸ್ಪೀಟ್ ಆಡುವಾಗ ಪೊಲೀಸರ ದಾಳಿ.. ತೆಪ್ಪ ಮಗುಚಿ 2 ಸಾವು, ಇಬ್ಬರ ರಕ್ಷಣೆ.. ಐವರಿಗಾಗಿ ಮುಂದುವರೆದ ಶೋಧಕಾರ್ಯ

author-image
AS Harshith
Updated On
ಇಸ್ಪೀಟ್ ಆಡುವಾಗ ಪೊಲೀಸರ ದಾಳಿ.. ತೆಪ್ಪ ಮಗುಚಿ 2 ಸಾವು, ಇಬ್ಬರ ರಕ್ಷಣೆ.. ಐವರಿಗಾಗಿ ಮುಂದುವರೆದ ಶೋಧಕಾರ್ಯ
Advertisment
  • ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ
  • ಗಾಳಿ ಹಾಗೂ ಜನರ ಭಾರದಿಂದ ಮುಗುಚಿದ ತೆಪ್ಪ 
  • ಇಬ್ಬರ ಮೃತದೇಹ ಪತ್ತೆ, ನಾಲ್ವರಿಗಾಗಿ ಮುಂದುವರೆದ ಶೋಧ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ನಿನ್ನೆ ಸಾಯಂಕಾಲ 4 ಗಂಟೆಗೆ ಘಟನೆ ನಡೆದಿದ್ದು, ಈ ವೇಳೆ ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದೆ. ಆದರೆ ನಿನ್ನೆ ಓರ್ವನ ಮೃತದೇಹ ಸಿಕ್ಕಿದ್ದು, ಇಂದು ಮತ್ತೊಬ್ಬನ ಮೃತದೇಹ ಸಿಕ್ಕಿದೆ.

publive-image

ಇದನ್ನೂ ಓದಿ: ಭೋಲೇ ಬಾಬಾ ನೋಡಲು ಹೋಗಿ 130ಕ್ಕೂ ಹೆಚ್ಚು ಮಂದಿ ಸಾವು.. ಮೋದಿ ಸಂತಾಪ; ಮೃತರಿಗೆ ಎಷ್ಟು ಲಕ್ಷ ಪರಿಹಾರ?

ಗಾಳಿ ಹಾಗೂ ತೆಪ್ಪದಲ್ಲಿ ಜನರ ಭಾರವಾದ ಹಿನ್ನೆಲೆ ತೆಪ್ಪ ಮುಗುಚಿದೆ. ಪರಿಣಾಮ ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಇದನ್ನೂ ಓದಿ: ಫುಟ್ಬಾಲ್ ಮ್ಯಾಚ್ ನೋಡಲು ಅಂತ್ಯಕ್ರಿಯೆಯನ್ನೇ ನಿಲ್ಲಿಸಿದ ಕುಟುಂಬಸ್ಥರು; ವಿಡಿಯೋ ವೈರಲ್‌!

ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: VIDEO: ದರ್ಶನ್​ ಬಗ್ಗೆ ಕೇಳುತ್ತಿದ್ದಂತೆ ಕೈ ಎತ್ತಿ ಮುಗಿದ ಮಾಲತಿ ಸುಧೀರ್; ಈ ಬಗ್ಗೆ ಏನಂದ್ರು?

Advertisment

ನಿನ್ನೆ ರಾತ್ರಿಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕಲಬುರ್ಗಿಯಿಂದ ಎಸ್ ಡಿ ಆರ್ ಎಫ್ ತಂಡ ಅಗ್ನಿಶಾಮಕ ದಳ ಸಿಬ್ಬಂದಿ ನೆರವಿನಿಂದ ನಾಲ್ವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್​ಪಿ ಋಷಿಕೇಶ್ ಸೋನಾವನೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment