Advertisment

ಕೇರಳದ ನರ್ಸಿಂಗ್ ಕಾಲೇಜಿನಲ್ಲಿ ಭಯಾನಕ Ragging​; ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ!

author-image
Gopal Kulkarni
Updated On
ಕೇರಳದ ನರ್ಸಿಂಗ್ ಕಾಲೇಜಿನಲ್ಲಿ ಭಯಾನಕ Ragging​; ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ!
Advertisment
  • ಕೇರಳದ ಕೊಟ್ಟಾಯಂನಲ್ಲಿ ಭೀಕರ Ragging ಪ್ರಕರಣ ಬೆಳಕಿಗೆ
  • ಖಾಸಗಿ ಅಂಗಗಳಿಗೆ ಡಂಬೆಲ್ಸ್​ ಕಟ್ಟಿ ಹೊಡೆದು ಹಿಂಸಿಸಿದ ನೀಚರು
  • ಮೂವರು ವಿದ್ಯಾರ್ಥಿಗಳು ನೀಡಿದ ದೂರಿನನ್ವಯ ಐವರ ಬಂಧನ

ಕೇರಳದ ಕೊಟ್ಯಾಯಂನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ Ragging​ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳನ್ನು ಸಂಪೂರ್ಣ ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. ಸದ್ಯ ಕೊಟ್ಟಾಯಂ ಜಿಲ್ಲೆಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಜ್ಯೂನಿಯರ್ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

Advertisment

ಐವರು ಆರೋಪಿಗಳು ಮೂವರು ವಿದ್ಯಾರ್ಥಿಗಳನ್ನು ಅದ್ಯಾವ ರೀತಿ ಚಿತ್ರಹಿಂಸೆ ನೀಡಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಪೊಲೀಸರ ಮುಂದೆ ವಿವರಿಸಿದ್ದಾರೆ. ಮೂವರು ಜ್ಯೂನಿಯರ್ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ವಿವಸ್ತ್ರಗೊಳಿಸಿ ಅವರ ಖಾಸಗಿ ಭಾಗಗಳಿಗೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಅದು ಮಾತ್ರವಲ್ಲ ಜಾಮಿಟ್ರಿ ಬಾಕ್ಸ್​ನಿಂದ ಹೊಡೆದು ಮೂರು ತಿಂಗಳುಗಳ ಕಾಲ ರಕ್ತ ಬರುವಂತೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೂವರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೊದಲ ವರ್ಷದ ಮೂವರು ನರ್ಸಿಂಗ್ ಹೋಮ್ ವಿದ್ಯಾರ್ಥಿಗಳು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಈಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಂಟಿ Ragging ಆಕ್ಟ್​ ಅಡಿ ಆರೋಪಿಗಳ ಬಂಧನವಾಗಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಸಸ್ಪೆಂಡ್ ಕೂಡ ಮಾಡಲಾಗಿದೆ. ಈಗಾಗಲೇ ಐವರನ್ನೂ ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:BREAKING: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ

Advertisment

ಜಾಮಿಟ್ರಿ ಕಂಪಾಸ್ಸ್​ನಿಂದ ಜ್ಯೂನಿಯರ್ ವಿದ್ಯಾರ್ಥಿಗಳನ್ನು ಹೊಡೆದು ಚಿತ್ರಹಿಂಸೆ ಮಾಡಿ ಅದೆಲ್ಲವನ್ನು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾರೆ. ಬೇರೆಯವರಿಗೆ ಹೇಳಿದರೆ, ಮುಂದಿನ ಪರಿಣಾಮ ಸರಿಯಿರಲ್ಲ, ನಿಮ್ಮ ಅಕಾಡೆಮಿಕ್ ಕೆರಿಯರ್ ಕೂಡ ಹಾಳಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಜೊತೆಗೆ ಪ್ರತಿ ಭಾನುವಾರ ಮದ್ಯಸೇವನೆಗೆ ಜ್ಯೂನಿಯರ್ ವಿದ್ಯಾರ್ಥಿಗಳಿಂದ ತಪ್ಪದೇ ಹಣ ವಸೂಲಿ ಮಾಡುತ್ತಿದ್ದರಂತೆ. ಹಣ ನೀಡಲು ನಿರಾಕರಿಸಿದರೆ ಹೊಡೆದು ಹಿಂಸೆ ಮಾಡುತ್ತಿದ್ದರಂತೆ.

ಇದನ್ನೂ ಓದಿ:ದೇಶದಲ್ಲಿ ಚಿನ್ನ ಸಂಚಲನ! RBI ಯಾಕೆ ಗೋಲ್ಡ್ ಸಂಗ್ರಹಿಸುತ್ತೆ..? ಸೀತಾರಾಮನ್ ಉತ್ತರ..!​

ಈ ಎಲ್ಲಾ ಹಿಂಸೆಗಳನ್ನು ತಾಳಲಾರದೆ ತಮ್ಮ ಮನೆಗೆ ಹೋಗಿ ತಂದೆಯ ಬಳಿ Ragging​ ವಿಚಾರವನ್ನು ಬಿಚ್ಚಿಟ್ಟಿದ್ದಾನೆ ಓರ್ವ ವಿದ್ಯಾರ್ಥಿ. ಬಳಿಕ ಪೊಲೀಸರಿಗೆ ದೂರು ನೀಡಿದ್ದು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಐವರು ವಿದ್ಯಾರ್ಥಿಗಳನ್ನು ಬಂಧಿಸಿ ಇಂದು ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಪೊಲೀಸರು. ಕಳೆದ ಕೆಲವು ವಾರಗಳ ಹಿಂದೆ ಕೊಚ್ಚಿಯಲ್ಲಿ ನಡೆದ Ragging ನಿಂದಾಗಿ 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ಬೆನ್ನಲ್ಲೆ ಮತ್ತೊಂದು ಭೀಕರ Ragging​ ಪ್ರಕರಣ ಈಗ ಬೆಳಕಿಗೆ ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment