/newsfirstlive-kannada/media/post_attachments/wp-content/uploads/2025/01/RAGHVENDRA-HITNAL.jpg)
ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಲಿಗೆ ಗ್ಯಾರಂಟಿಗಳು ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿವೆಯಾ ಅಥವಾ ಹೊರೆ ಆಗಿವೆಯಾ ಗೊತ್ತಿಲ್ಲ. ರಾಜ್ಯದ ಜನರ ಪಾಲಿಗಂತೂ ಜೇಬಿಗೆ ಭಾರವಾಗಿವೆ. ಒಂದಾದ ಮೇಲೊಂದರಂತೆ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಈ ನಡುವೆ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ನಾಯಕರೇ ಅಸಮಾಧಾನ ಹೊರಹಾಕ್ತಿದ್ದಾರೆ.
ಒಂದೊಂದೇ ದಿನಬಳಕೆ ವಸ್ತುಗಳ ಬೆಲೆ ಏರಿಸಿ ಫ್ರೀ ಜೊತೆ ವರಿಯನ್ನೂ ಕೊಡ್ತಿದೆ. ಹೆಣ್ಮಕ್ಕಳಿಗೆ ಫ್ರೀ ಶಕ್ತಿ ಕೊಟ್ಟ ಸರ್ಕಾರ ಗಂಡ್ಮಕ್ಕಳ ಜೇಬಿನ ಶಕ್ತಿ ಕಸಿಯುತ್ತಿದೆ. ಈ ಗ್ಯಾರಂಟಿ ಯೋಜನೆಗಳಿಂದ ಜನರ ಜೇಬಿಗೆ ಮಾತ್ರ ಕತ್ತರಿ ಬೀಳ್ತಿಲ್ಲ, ಸರ್ಕಾರದ ಹಲವು ಯೋಜನೆಗಳ ಅನುದಾನಕ್ಕೂ ಕೊಕ್ಕೆ ಬಿದ್ದಿದೆ. ಈ ಬಗ್ಗೆ ವಿಪಕ್ಷ ನಾಯಕರು ಆರೋಪ ಮಾಡೋದು ಬಿಡಿ ಖುದ್ದು ಕಾಂಗ್ರೆಸ್ ಶಾಸಕರೇ ಮೇಲಿಂದ ಮೇಲೆ ಗ್ಯಾರಂಟಿ ಬಗ್ಗೆ ಅಸಮಾಧಾನ ಹೊರಹಾಕ್ತಿದ್ದಾರೆ.
ಇದನ್ನೂ ಓದಿ: ಎಲೆಕ್ಷನ್ನಲ್ಲಿ ಗೆದ್ರೆ ಪ್ರಿಯಾಂಕ ಗಾಂಧಿ ಕೆನ್ನೆಯಂತ ರಸ್ತೆ ನಿರ್ಮಾಣ.. BJP ಅಭ್ಯರ್ಥಿ ಹೇಳಿಕೆಗೆ ಆಕ್ರೋಶ
ಅಭಿವೃದ್ಧಿ ಕುಂಠಿತ
ಕಳೆದ ತಿಂಗಳಷ್ಟೇ ವಿಜಯನಗರದ ಹೊಸಪೇಟೆ ಕಾಂಗ್ರೆಸ್ ಶಾಸಕ ಗವಿಯಪ್ಪ ಗ್ಯಾರಂಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ ಕೆಲವು ಶಾಸಕರಂತೂ ಉಚಿತ ಯೋಜನೆಗಳಿಂದ ನಮಗೆ ಸರಿಯಾಗಿ ಅನುದಾನ ಬರ್ತಿಲ್ಲ. ಕ್ಷೇತ್ರದಲ್ಲಿ ಓಡಾಡೋಕೆ ಆಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ, ಅದು ಕೂಡ ಸಿಎಂ ಸಿದ್ದರಾಮಯ್ಯ ಆಪ್ತ ರಾಘವೇಂದ್ರ ಹಿಟ್ನಾಳ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲು ಗ್ಯಾರಂಟಿ ಯೋಜನೆಗಳೇ ಕಾರಣ ಎಂದಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕುಣಿಕೇರಿಯಲ್ಲಿ ಮಾತನಾಡಿದ ಹಿಟ್ನಾಳ್, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿವೆ ಎಂದು ಬಾಂಬ್ ಸಿಡಿಸಿದ್ದಾರೆ. ಗ್ಯಾರಂಟಿ ಯೋಜನೆಗೆ 56,000 ಕೋಟಿ ಅನುದಾನ ನೀಡಲಾಗಿದೆ. ಈಗ ಅಭಿವೃದ್ದಿ ನಡೆಯುತ್ತಿವೆ. ಆದರೂ ಕುಂಠಿತವಾಗಿದೆ. ಅಭಿವೃದ್ಧಿಕಾರ್ಯಗಳು ನಡೆದಿವೆ. ಆದರೆ ಸ್ವಲ್ಪ ತಡವಾಗಿ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಂಡನ ಫ್ರೆಂಡ್ ಜೊತೆ ಲವ್ವಿಡವ್ವಿ.. ಇಬ್ಬರು ಮಕ್ಕಳ ತಾಯಿ ಪರಾರಿ; ಇದು ವಿಚಿತ್ರ ಪ್ರೇಮ ಕಹಾನಿ!
ಇನ್ನು ಉಚಿತ ಯೋಜನೆಗಳಿಗೆ ಸರ್ಕಾರದ ಖಜಾನೆಯ ಬಹುಪಾಲು ಹಣ ವಿನಿಯೋಗವಾಗ್ತಿದೆ. ಹೀಗಾಗಿ ಸಂಪತ್ತಿನ ಕ್ರೋಢಿಕರಣಕ್ಕಾಗಿ ಬೆಲೆ ಏರಿಕೆ ಮಾಡಲಾಗ್ತಿದೆ. ನಿನ್ನೆಯಿಂದ ಬಸ್ ಟಿಕೆಟ್ ರೇಟ್ 15 ಶೇಕಡಾ ಹೆಚ್ಚಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಛೀಮಾರಿ ಹಾಕುತ್ತಲೇ ಬಸ್ನಲ್ಲಿ ಪ್ರಯಾಣ ಮಾಡ್ತಿದ್ದಾರೆ. ಈ ನಡುವೆ ದರ ಹೆಚ್ಚಿಸಿದನ್ನ ಮಾಜಿ ಸಿಎಂ ಬಿಎಸ್ವೈ ಖಂಡಿಸಿದ್ದಾರೆ. ತಕ್ಷಣ ಟಿಕೆಟ್ ದರ ಏರಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಇತ್ತ ಬೆಲೆ ಏರಿಕೆ ಬಗ್ಗೆ ಕೇಳಿದ್ರೆ ಸಿಎಂ ಐದು ವರ್ಷ ಆಯ್ತು ಬಸ್ ದರ ಏರಿಸಿಲ್ಲ. ಅದಕ್ಕೆ ಮಾಡಿದ್ದೀವಿ ಅಂತಿದ್ದಾರೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದ್ಕಡೆ ಗ್ಯಾರಂಟಿಗಳನ್ನು ಕೊಟ್ಟು ಮತ್ತೊಂದ್ಕಡೆ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕ್ತಿದೆ. ಸದ್ಯ ಬಸ್ ಟಿಕೆಟ್ ದರ ಏರಿಸಿರುವ ಸರ್ಕಾರ ಮತ್ಯಾವ ದರ ಏರಿಕೆ ಮಾಡುತ್ತೋ ಅಂತ ಜನಸಾಮಾನ್ಯರು ಟೆನ್ಶನ್ ಮಾಡುವಂತಾಗಿದೆ.
ಇದನ್ನೂ ಓದಿ: BBK11: ಬಿಗ್ಬಾಸ್ ಕಪ್ ಆಸ್ಕರ್‌ಗಿಂತ ದೊಡ್ಡದು.. ರಜತ್ ಮಾತಿಗೆ ಫಿದಾ ಆದ ಕಿಚ್ಚ ಸುದೀಪ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ