newsfirstkannada.com

UPSC ಟಾಪರ್​​ಗೂ ಕೊಹ್ಲಿಯೇ ಸ್ಫೂರ್ತಿ, ರಘುರಾಂ ರಾಜನ್​​ ಕೂಡ ಕೊಹ್ಲಿ ಬಗ್ಗೆ ಮಾತು..!

Share :

Published April 18, 2024 at 9:42am

  ಜೀವನಕ್ಕೆ ಸ್ಫೂರ್ತಿಯಾದ ಕ್ರಿಕೆಟ್​​ ಲೋಕದ ದೊರೆ

  ಕ್ರಿಕೆಟ್​​ನ ಬೌಂಡರಿಯನ್ನೂ ದಾಟಿದ ಕಿಂಗ್​ ಹವಾ

  UPSCಯಲ್ಲಿ 3ನೇ ಱಂಕ್​ ಪಡೆದ ಅನನ್ಯಾ ಹೇಳಿದ್ದೇನು.?

ವಿರಾಟ್​​​​ ಕೊಹ್ಲಿ. ಕ್ರಿಕೆಟ್​​ ಲೋಕದ ದೊರೆ ಅನ್ನೋದು ನಿಮಗೆ ಗೊತ್ತು. ಈ ಕಿಂಗ್​ ಹವಾ ಕ್ರಿಕೆಟ್​​ನ ಬೌಂಡರಿಯನ್ನೂ ದಾಟಿದೆ. ಬ್ಯಾಟ್​ ಹಿಡಿದು ಫೀಲ್ಡ್​ನಲ್ಲಿ ಕೊಹ್ಲಿ ಆಡ್ತಿರೋ ಆಟ, ಆಫ್​ ದ ಫೀಲ್ಡ್​ನಲ್ಲಿ ಹಲವರ ಜೀವನಕ್ಕೆ ಟರ್ನಿಂಗ್​ ಪಾಯಿಂಟ್​​ ಆಗಿದೆ. ವಿರಾಟ್​​ ವ್ಯಕ್ತಿತ್ವ ಹಲವರ ಜೀವನಕ್ಕೆ ಸ್ಫೂರ್ತಿಯಾದ ಸ್ಪೆಷಲ್​​ ಸ್ಟೋರಿ ಇದು.

ವಿರಾಟ್​​ ಕೊಹ್ಲಿ.. ಈ ಹೆಸರಿಗೆ ಒಂದು ವಿಶಿಷ್ಟವಾದ ಪವರ್​​ ಇದೆ. ವಿಶ್ವ ಕ್ರಿಕೆಟ್​ ಲೋಕದಲ್ಲಿ ಟನ್​ಗಟ್ಟಲೇ ರನ್ ಸಿಡಿಸಿ​, ನೀರು ಕುಡಿದಷ್ಟು ಸುಲಭಕ್ಕೆ ಸೆಂಚುರಿ ಬಾರಿಸಿ, ಅಸಾಧ್ಯ ಅಂದುಕೊಂಡಿದ್ದ ದಾಖಲೆಗಳು ಉಡೀಸ್ ಮಾಡಿರುವ ಮಾಡ್ರನ್​ ಕ್ರಿಕೆಟ್​ನ ದೊರೆ ಈತ. ತನ್ನ ಮಾಂತ್ರಿಕ ಬ್ಯಾಟಿಂಗ್​, ಅಗ್ರೆಸ್ಸೀವ್​ ಆಟ, ಛಲದ ಹೋರಾಟದಿಂದಲೇ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನ ಸಂಪಾದಿಸಿರುವ ಸುಲ್ತಾನ.

ಇದನ್ನೂ ಓದಿ:CET Exam: ಇಂದಿನಿಂದ ಸಿಇಟಿ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಡ್ರೆಸ್​ಕೋಡ್, ಮಾರ್ಗಸೂಚಿ..!

ಕ್ರಿಕೆಟ್​ ಫೀಲ್ಡ್​ನಲ್ಲಿ ಹಿಂದೆ ಯಾರಿಗೂ ಇರದಷ್ಟು ಫಾಲೋವರ್ಸ್​ ಈಗ ಕೊಹ್ಲಿಗಿದ್ದಾರೆ. ​ಯುವ ಕ್ರಿಕೆಟಿಗರ ಪಾಲಿಗಂತೂ ವಿರಾಟ್ ಸ್ಪೂರ್ತಿಯ ಚಿಲುಮೆ. ಆಟ ಮಾತ್ರವಲ್ಲ.. ಕೊಹ್ಲಿ ಫಿಟ್​ನೆಸ್​, ಡಿಸಿಪ್ಲೀನ್​, ಫಿಯರ್​ಲೆಸ್​ ಆ್ಯಟಿಟ್ಯೂಡ್​, ಫೈಟಿಂಗ್​ ಮೆಂಟ್ಯಾಲಿಟಿ ನಿಜಕ್ಕೂ ಅನುಕರಣೀಯ. ಹೀಗಾಗಿಯೇ ಕ್ರಿಕೆಟ್​ ಫೀಲ್ಡ್​ ಹೊರತಾಗಿಯೂ ಕಿಂಗ್​ ಕೊಹ್ಲಿಯನ್ನ ಆರಾಧಿಸುವ ಅಭಿಮಾನಿಗಳಿದ್ದಾರೆ. ಕೊಹ್ಲಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡವರಿದ್ದಾರೆ.

UPSC ಟಾಪರ್​​ಗೆ ವಿರಾಟ್​ ಕೊಹ್ಲಿಯೇ ಸ್ಫೂರ್ತಿಯಂತೆ
ಯುಪಿಎಸ್​​ಸಿ ಪರೀಕ್ಷೆಯನ್ನ ಪಾಸ್ ಮಾಡೋದೇ ಸವಾಲಿನ ವಿಚಾರ. ಅಂತಹದ್ರಲ್ಲಿ 3ನೇ ಱಂಕ್​​ ಪಡೆದುಕೊಳ್ಳೋದು ಅಂದ್ರೆ, ಸಾಮಾನ್ಯದ ವಿಚಾರನಾ? ಮೊನ್ನೆ ತಾನೆ ಯುಪಿಎಸ್​​ಸಿ ಫಲಿತಾಂಶ ಪ್ರಕಟವಾಯ್ತು. ಈ ಬಾರಿ ತೆಲಂಗಾಣದ ಡೋಣೂರು ಅನನ್ಯಾ ರೆಡ್ಡಿ 3ನೇ ಱಂಕ್​ ಪಡೆದುಕೊಂಡಿದ್ದಾರೆ. ಅತ್ಯದ್ಭುತ ಸಾಧನೆ ಮಾಡಿರುವ ಅನನ್ಯಾ ರೆಡ್ಡಿಗೆ ವಿರಾಟ್​ ಕೊಹ್ಲಿಯೇ ಸ್ಫೂರ್ತಿಯಂತೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

ವಿರಾಟ್​ ಕೊಹ್ಲಿ ನನ್ನ ನೆಚ್ಚಿನ​ ಆಟಗಾರ. ಅವರ ಛಲ ಬಿಡದ ಹೋರಾಟ ಮತ್ತು ಶಿಸ್ತು ಸ್ಪೂರ್ತಿಯ ವಿಚಾರವಾಗಿದೆ. ರಿಸಲ್ಟ್​ ಏನು ಬರುತ್ತೆ ಅನ್ನೋದರ ಹೊರತಾಗಿ ನಾವು ಕಠಿಣ ಪರಿಶ್ರಮ ಪಡುತ್ತಲೇ ಇರಬೇಕು. ಈ ಪ್ರಮುಖ ವಿಚಾರವನ್ನ ನಾನು ವಿರಾಟ್​ ಕೊಹ್ಲಿಯಿಂದ ಕಲಿತೆ. ಅವರು ನನಗೆ ಸ್ಪೂರ್ತಿ -ಅನನ್ಯಾ ರೆಡ್ಡಿ, UPSC ಟಾಪರ್​​

ದೇಶದ ಯುವ ಜನತೆ​ಗೆ ಕೊಹ್ಲಿ ರೋಲ್​ ಮಾಡೆಲ್
ದೆಹಲಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವಿರಾಟ್​ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಅಥ್ಲೀಟ್​ ಹಾಗೂ ಸೆಲಬ್ರಿಟಿಯಾಗಿ ಬೆಳೆದಿದ್ದಾರೆ. ಯಾವುದಕ್ಕೂ ಅಂಜದೆ, ಅಳುಕದೇ, ಸಾಧಿಸುವ ಹಠದೊಂದಿಗೆ ಮುನ್ನುಗ್ಗಿದ್ದೇ ಈ ಸಕ್ಸಸ್​ ಹಿಂದಿನ ಸೀಕ್ರೆಟ್​. ಹೀಗಾಗಿಯೇ ಭಾರತದ ಯಂಗ್​ಸ್ಟರ್​​ಗಳೂ ಕೂಡ ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರಂತೆ. ಹೀಗೆ ಹೇಳಿರೋದು ಆರ್​​ಬಿಐ ಮಾಜಿ ಗರ್ವನರ್​ ರಘುರಾಂ ರಾಜನ್​.

ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

ನನ್ನ ಪ್ರಕಾರ ಯಂಗ್​ ಇಂಡಿಯಾ ವಿರಾಟ್​ ಕೊಹ್ಲಿಯ ಮನಸ್ಥಿತಿಯನ್ನ ಹೊಂದಿದೆ. ಈ ಜಗತ್ತಿನಲ್ಲಿ ನಾನು ಯಾರಿಗೂ ಎರಡನೆಯವನಲ್ಲ ಅನ್ನುವ ಮನಸ್ಥಿತಿ -ರಘುರಾಂ ರಾಜನ್, ಆರ್​​ಬಿಐ ಮಾಜಿ ಗರ್ವನರ್​ ರ

ಕೊಹ್ಲಿಯ ಗುಣಗಾನ ಮಾಡಿದ ವಿದೇಶಾಂಗ ಸಚಿವ
ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಕೂಡ ವಿರಾಟ್​ ಕೊಹ್ಲಿಯ ಬಿಗ್​ಫ್ಯಾನ್​. ಆಸ್ಟ್ರೇಲಿಯಾ ಭೇಟಿ ನೀಡಿದ ಸಂದರ್ಭದಲ್ಲಿ ಕೊಹ್ಲಿ ಸಹಿ ಹಾಕಿದ್ದ ಬ್ಯಾಟ್​ ಅನ್ನ ಅಲ್ಲಿನ ಉಪ ಪ್ರಧಾನಿಗೆ ಗಿಫ್ಟ್​ ಕೊಟ್ಟಿದ್ರು. ಇಂಗ್ಲೆಂಡ್​ ಪ್ರಧಾನಿ ರಿಷಿ ಸುನಕ್​​ಗೂ ಕೊಹ್ಲಿ ಬ್ಯಾಟ್​​ ಅನ್ನ ಉಡುಗೊರೆಯಾಗಿ​ ನೀಡಿದ್ರು. ಆಗಾಗ ಕೊಹ್ಲಿ ಬಗ್ಗೆ ಮಾತನಾಡೋ ಜೈ ಶಂಕರ್​​, ಕೊಹ್ಲಿಯ ಸಾಧಿಸುವ ಹಸಿವಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ​

ಇದನ್ನೂ ಓದಿ: ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್.!

‘ನಾನು ಕೂಡ ವಿರಾಟ್​ ಕೊಹ್ಲಿಯ ಫ್ಯಾನ್​. ನಾನು ತುಂಬಾ ಹೊಗಳುತ್ತೇನೆ. ಯಾಕಂದ್ರೆ, ನಾನು ಕೆಲಸ ಮಾಡುವ ರಾಜಕೀಯ ಅಥವಾ ರಾಜತಾಂತ್ರಿಕತೆ ಎರಡೂ ಸ್ಪರ್ಧಾತ್ಮಕ ಕ್ಷೇತ್ರಗಳು. ನಾನು ಕೊಹ್ಲಿಯನ್ನ ನೋಡಿದಾಗ ಸಾಧಿಸುವ ಹಸಿವು ಕಾಣಿಸುತ್ತದೆ’-ಜೈ ಶಂಕರ್​, ವಿದೇಶಾಂಗ ಸಚಿವ

ಇವರಿಷ್ಟೇ ಅಲ್ಲ.. ಕೊಹ್ಲಿ ಆಟಕ್ಕೆ ಮನಸೋತಿದ್ದ ಆಸ್ಟ್ರೇಲಿಯಾ ಮಾಜಿ ಸ್ಪೋರ್ಟ್ಸ್​ ಮಿನಿಸ್ಟರ್​​ ಬ್ರಿಡ್​ಗೆಟ್ ಮೆಕೆಂಝಿ ಕೂಡ ನನಗೆ ಕ್ರಶ್​ ಆಗಿದೆ ಅಂತಾ ಬಹಿರಂಗವಾಗೇ ಹೇಳಿಕೊಂಡಿದ್ರು. ತನ್ನ ಆಟದ ಮೂಲಕ ಮಾತ್ರವಲ್ಲದೇ, ತನ್ನ ನಡೆ, ನುಡಿ, ಜೀವನ ಶೈಲಿಯಿಂದಲೂ ಕೂಡ ವಿರಾಟ್​ ವಿಶ್ವದ ಹಲವರಿಗೆ ಸ್ಫೂರ್ತಿಯಾಗಿರೋದು ಹೆಮ್ಮೆಯ ವಿಚಾರ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

UPSC ಟಾಪರ್​​ಗೂ ಕೊಹ್ಲಿಯೇ ಸ್ಫೂರ್ತಿ, ರಘುರಾಂ ರಾಜನ್​​ ಕೂಡ ಕೊಹ್ಲಿ ಬಗ್ಗೆ ಮಾತು..!

https://newsfirstlive.com/wp-content/uploads/2024/04/VIRAT-KOHLI-3.jpg

Load More