2047ಕ್ಕೆ ವಿಕಸಿತ ಭಾರತ.. ಪ್ರಧಾನಿ ನರೇಂದ್ರ ಮೋದಿ ಭರವಸೆ ಸುಳ್ಳಾ?
ನಂಬುವುದೇ ದೊಡ್ಡ ತಪ್ಪು ಎಂದ RBI ಮಾಜಿ ಗವರ್ನರ್ ರಘುರಾಮ್ ರಾಜನ್
2024ರ ಲೋಕಸಭಾ ಚುನಾವಣೆ ಬಳಿಕ ಆರ್ಥಿಕತೆ ಬದಲಾಗದಿದ್ರೆ ಸಂಕಷ್ಟ
ನವದೆಹಲಿ: 2047ಕ್ಕೆ ವಿಕಸಿತ ಭಾರತ. ಈ ಮಾತು ನಂಬುವುದೇ ಭಾರತ ಮಾಡಬಹುದಾದ ದೊಡ್ಡ ತಪ್ಪು ಎಂದು RBI ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 2047ಕ್ಕೆ ದೇಶ ಅಭಿವೃದ್ಧಿ ಹೊಂದಲಿದೆ ಅನ್ನೋ ಪ್ರಚೋದನಾತ್ಮಕ ಹೇಳಿಕೆಯನ್ನು ನಂಬುವಾಗ ಎಚ್ಚರವಾಗಿರಬೇಕು. ಇದೇ ರೀತಿ ಆರ್ಥಿಕತೆ ಮುಂದುವರಿದರೆ ಸ್ವಾತಂತ್ರ್ಯ ಬಂದ ನೂರು ವರ್ಷಕ್ಕೂ ಭಾರತದ ಅಭಿವೃದ್ಧಿ ಅಸಾಧ್ಯ ಎಂದು ಕಾರಣಗಳನ್ನು ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತ ಆಗಲಿದೆ. ಇನ್ನು 23 ವರ್ಷದಲ್ಲಿ ಭಾರತ ಅಭಿವೃದ್ಧಿ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಮಾತನ್ನು ಪರೋಕ್ಷವಾಗಿ ತಳ್ಳಿ ಹಾಕಿರುವ ರಘುರಾಮ್ ರಾಜನ್, ಈ ಭರವಸೆಯನ್ನ ನಂಬುವುದೇ ದೊಡ್ಡ ತಪ್ಪು ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದ ತಂಗಡಗಿ ವಿರುದ್ಧ ಹಿಂದೂ ಕಾರ್ಯಕರ್ತರ ಪ್ರತಿಭಟನೆ
ರಘುರಾಮ್ ರಾಜನ್ ಅವರು ಬ್ಲೂಮ್‌ಬರ್ಗ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ಬಳಿಕ ರಚನೆಯಾಗುವ ನೂತನ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದ ಕೌಶಲ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಶಿಕ್ಷಣ ಹಾಗೂ ಕೌಶಲ್ಯದ ಪ್ರಗತಿ ಇಲ್ಲದಿದ್ರೆ ದೇಶದಲ್ಲಿ ಯುವ ಸಮುದಾಯ ಸಂಕಷ್ಟ ಎದುರಿಸಬೇಕಾಗುತ್ತದೆ. 30 ವರ್ಷ ಮೇಲ್ಪಟ್ಟ ಯುವಕರಿಗೆ ಸರಿಯಾದ ಕೌಶಲ್ಯ ತರಬೇತಿಯ ಅಗತ್ಯವಿದೆ ಎಂದಿದ್ದಾರೆ.
‘ಪ್ರಚೋದನೆ ನಂಬುವುದೇ ದೊಡ್ಡ ತಪ್ಪು’
2047ರ ವಿಕಸಿತ ಭಾರತದ ಪ್ರಚೋದನೆಯ ಮಾತು ನಂಬಲು ಅಸಾಧ್ಯ. ಇದೊಂದು ನಾನ್‌ಸೆನ್ಸ್ ಎಂದಿರುವ ರಘುರಾಮ್ ರಾಜನ್, ಭಾರತದಲ್ಲಿ ಮಕ್ಕಳು ಹೈಸ್ಕೂಲ್ ಶಿಕ್ಷಣ ಸಿಗುತ್ತಿಲ್ಲ. ಹೈಸ್ಕೂಲ್‌ನಿಂದ ಹೊರ ಬರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಭಾರತದ ಪರಿಸ್ಥಿತಿ ಸದ್ಯ ಅಪಾಯಕಾರಿಯಾಗಿದೆ. ರಾಜಕಾರಣಿಗಳು ತಮ್ಮ ಭರವಸೆಯನ್ನು ಜನ ನಂಬಬೇಕೆಂದು ಬಯಸುತ್ತಾರೆ. ಇದು ದೊಡ್ಡ ತಪ್ಪು ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ