ಅವನ ಚಿಂತೆಯಲ್ಲೇ ತಾಯಿ ಹಾಸಿಗೆ ಹಿಡಿದಿದ್ದರು -ದರ್ಶನ್ ಕೇಸ್​ ಆರೋಪಿ ರಘು ಅಣ್ಣ ಹೇಳಿದ್ದೇನು..?

author-image
Ganesh
Updated On
ಅವನ ಚಿಂತೆಯಲ್ಲೇ ತಾಯಿ ಹಾಸಿಗೆ ಹಿಡಿದಿದ್ದರು -ದರ್ಶನ್ ಕೇಸ್​ ಆರೋಪಿ ರಘು ಅಣ್ಣ ಹೇಳಿದ್ದೇನು..?
Advertisment
  • ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ
  • ದರ್ಶನ್ ಕೇಸ್​ನ 4ನೇ ಆರೋಪಿ ರಘು ತಾಯಿ ನಿಧನ
  • ತಾಯಿ ಅಂತ್ಯಕ್ರಿಯೆಗೆ ಜೈಲಿನಿಂದ ಬರುತ್ತಾರಾ ರಘು..?

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ4 ಆರೋಪಿಯಾಗಿರುವ ರಘು ಅವರ ತಾಯಿ ನಿಧನರಾಗಿದ್ದಾರೆ. 65 ವರ್ಷ ವಯಸ್ಸಿನ ತಾಯಿ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ತಾಯಿ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಆರೋಪಿ ರಘು ಸಹೋದರ ಸತೀಶ್ ಬಸರೀಕಟ್ಟೆ.. ಅಮ್ಮ ಬೆಳಗ್ಗೆ 4.30ಕ್ಕೆ ತೀರಿಕೊಂಡಿದ್ದಾರೆ. ಜೈಲಿನಲ್ಲಿರುವ ತಮ್ಮನನ್ನು ಕಳುಹಿಸಿದರೆ ಚೆನ್ನಾಗಿರುತ್ತದೆ. ದರ್ಶನ್ ಪ್ರಕರಣ ಆದ ಮೇಲೆ ಅಮ್ಮ ಆತನ ಚಿಂತೆಯಲ್ಲಿ ಹಾಸಿಗೆ ಹಿಡಿದ್ದರು. ತಮ್ಮನಿಗೆ ಅಮ್ಮ ಅಂದರೆ ಆಸೆ, ಆತನಿಗೂ ಅಷ್ಟೇ. ಆತ 15 ದಿನಕ್ಕೊಮ್ಮೆ ನನ್ನ ಮನೆಗೆ ಬಂದು ಅಮ್ಮನನ್ನು ನೋಡಿಕೊಂಡು ಹೋಗುತ್ತಿದ್ದ. ಇಂದು ಆತ ಅಂತ್ಯಕ್ರಿಯೆಗೆ ಬಂದರೆ ಚೆನ್ನಾಗಿರುತ್ತದೆ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ:ಈ ಹುಡ್ಗಿಯಿಂದಾಗಿ ಪಾಂಡ್ಯ ಡಿವೋರ್ಸ್ ಪಡೆದರಾ​..? ಹಾರ್ದಿಕ್ ಜೊತೆ ತಳುಕು ಹಾಕಿಕೊಂಡ ಬ್ಯೂಟಿ ಇವರೇ..!

ರಘು ಅವರ ಸಹೋದ ಸಂಬಂಧಿ ಪ್ರತಿಕ್ರಿಯಿಸಿ.. ರಘು ನನಗೆ ಅಳಿಯ ಆಗಬೇಕು. ನಾನು ಅವನನ್ನು ತುಂಬಾ ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಈ ರೀತಿ ಮಾಡಿಕೊಂಡಿದ್ದು ತಪ್ಪಿದೆ. ತಾಯಿದು ಅಂತ್ಯಕ್ರಿಯೆ ಆಗಬೇಕು ಎಂದರೆ ಕರೆದುಕೊಂಡು ಬನ್ನಿ. ಸಂಬಂಧಿಕರೆಲ್ಲ ಬರುತ್ತಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್​ನ ರಘು ಸಹೋದರಿ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment