ಇದು ತುಪ್ಪದ ಬೆಡಗಿ ಸ್ಪೆಷಲ್​; ದುಂಡು ಮಲ್ಲಿಗೆ ಹೂವುಗಳ ಹಾರದಲ್ಲಿ ರಾಗಿಣಿ ಮೋಹಕ.. ಮನಮೋಹಕ!

author-image
Bheemappa
Updated On
ಇದು ತುಪ್ಪದ ಬೆಡಗಿ ಸ್ಪೆಷಲ್​; ದುಂಡು ಮಲ್ಲಿಗೆ ಹೂವುಗಳ ಹಾರದಲ್ಲಿ ರಾಗಿಣಿ ಮೋಹಕ.. ಮನಮೋಹಕ!
Advertisment
  • ಯಾವಾಗಲೂ ವಿಶೇಷವಾಗಿ ಕಾಣಲು ಇಷ್ಟ ಪಡುವ ರಾಗಿಣಿ
  • ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ ಈ ನಟಿ
  • ಯುಗಾದಿ ಸ್ಪೆಷಲ್​, ಸ್ಯಾಂಡ್​ಲ್​ವುಡ್​ ಬ್ಯೂಟಿ ರಾಗಿಣಿ ದ್ವೆವೇದಿ

ಸ್ಯಾಂಡಲ್​ವುಡ್​ನ ತುಪ್ಪದ ಬೆಡಗಿ, ಮೋಸ್ಟ್ ಬ್ಯೂಟಿಫುಲ್ ಹೀರೋಯಿನ್ ರಾಗಿಣಿ ದ್ವಿವೇದಿ ಅವರು ಯಾವಾಗಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಸ್​ನಿಂದ ಅಪ್​​ಡೇಟ್​ ಕೊಡುತ್ತಾರೆ. ಅದರಂತೆ ಇದೀಗ ಯುಗಾದಿ ಹಬ್ಬಕ್ಕೆ ದುಂಡು ಮಲ್ಲಿಗೆ ಹೂವುಗಳ ಹಾರದ ಬ್ಲೌಸ್​ ತೊಟ್ಟು ಸ್ಪೆಷಲ್ ಲುಕ್ ಕೊಟ್ಟಿದ್ದಾರೆ.

publive-image

ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಅವರು ಈ ಬಾರಿ ತುಂಬಾ ವಿಭಿನ್ನವಾಗಿ, ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡ್​ ಕಲರ್ ಸ್ಯಾರಿಯಲ್ಲಿ ಕಾಣಸಿರುವ ರಾಗಿಣಿ, ದುಂಡು ಮಲ್ಲಿಗೆ ಹೂವುಗಳ ಹಾರದಿಂದ ತಯಾರಿಸಿದ ರವಿಕೆ ಧರಿಸಿ ಮೋಹಕವಾಗಿ, ಮನಮೋಹಕವಾಗಿ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಯುವಕರ ಕಣ್ಮನ ಸೆಳೆಯುವಂತೆ ಸೊಗಸಾಗಿ ಇವೆ.

ಯುಗಾದಿ ಹಬ್ಬಕ್ಕೆ ತುಪ್ಪದ ಬೆಡಗಿಯ ವಿಭಿನ್ನವಾದ ಫೋಟೋಶೂಟ್‌ ಮಾಡಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ ಬರುತ್ತಿವೆ. ಹೊಸ ವರ್ಷ, ಹೊಸ ಚಾಪ್ಟರ್‌, ನಿರೀಕ್ಷೆಯೊಂದಿಗೆ ಪ್ರತಿ ಬೆಳಗಿನ ಜಾವವು ಹೊಸ ಅವಕಾಶ ನೀಡುತ್ತದೆ. ಅದನ್ನೇ ಅದ್ಭುತವಾಗಿ ರೂಪಿಸಿಕೊಳ್ಳಿ, ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ಇದನ್ನೂ ಓದಿ: ಹೈದ್ರಾಬಾದ್ ಬ್ಯಾಟಿಂಗ್​ ಬಲದ ಮೇಲೆ ಸ್ಟಾರ್ಕ್, ಕುಲ್​ದೀಪ್ ಆಕ್ರಮಣ.. ಸಾಧಾರಣ ಮೊತ್ತಕ್ಕೆ SRH ಆಲೌಟ್​

publive-image

ರಾಗಿಣಿ ದ್ವಿವೇದಿ ಅವರು ಸ್ಯಾಂಡಲ್​ವುಡ್ ಮಾತ್ರವಲ್ಲ, ಕಾಲಿವುಡ್​, ಟಾಲಿವುಡ್​ ಹಾಗೂ ಮಾಲಿವುಡ್​ ಸಿನಿಮಾಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಸಿನಿಮಾಗಳಲ್ಲಿನ ಐಟಂ ಸಾಂಗ್​ಗಳಲ್ಲೂ ರಾಗಿಣಿ ಅವರು ಸ್ಟೆಪ್ಸ್​ ಹಾಕುತ್ತಿದ್ದಾರೆ. ಇತ್ತೀಚೆಗೆ ಆಲ್ಬಮ್‌ ಸಾಂಗ್‌ನಲ್ಲಿಯೂ ಕಾಣಿಸಿರುವುದು ವಿಶೇಷ. ಫ್ಯಾಷನ್​​ನಲ್ಲಿ ಹಲವಾರು ಪ್ರಯೋಗಗಳನ್ನು ಮಾಡುವ ರಾಗಿಣಿ ಯಶಸ್ಸು ಕಾಣುತ್ತಲೇ ಇರುತ್ತಾರೆ. ಹೀಗಾಗಿ ಈ ಸಲ ದುಂಡು ಮಲ್ಲಿಗೆ ಹೂವುಗಳ ಹಾರದಲ್ಲಿ ಮನಮೋಹಕವಾಗಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment