/newsfirstlive-kannada/media/post_attachments/wp-content/uploads/2024/12/RAHANE-1.jpg)
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೆಮಿಫೈನಲ್​ಗಾಗಿ ನಡೆದ ಕಾದಾಟದಲ್ಲಿ ವಿದರ್ಭ ಎದುರು ಅಜಿಂಕ್ಯಾ ರಹಾನೆ ಮಿಂಚಿನ ಬ್ಯಾಟಿಂಗ್ ಮಾಡುವ ಮೂಲಕ ಮುಂಬೈ ಟೀಮ್ ಜಯಭೇರಿ ಬಾರಿಸಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್​ ಟಾರ್ಗೆಟ್ ಮಾಡಿದ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ.
ಬೆಂಗಳೂರಿನ ಹೊರವಲಯದಲ್ಲಿ ಇರುವ ಆಲೂರು ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮುಂಬೈ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಎದುರಾಳಿ ವಿದರ್ಭ ತಂಡದ ಆಟಗಾರರು ಬ್ಯಾಟಿಂಗ್​ಗೆ ಆಗಮಿಸಿ ಹೊಡಿಬಡಿ ಆಟವಾಡಿದ್ದರು. ಹೀಗಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 221 ರನ್​ಗಳಿಸಿದ್ದರು.
/newsfirstlive-kannada/media/post_attachments/wp-content/uploads/2024/12/RAHANE_1.jpg)
ಇದನ್ನೂ ಓದಿ: ಪುಷ್ಪ- 2 ಮೂವಿ ನೋಡುವಾಗ ಕಿವಿ ಕಚ್ಚಿದ ಮಾಲೀಕ.. FIR ದಾಖಲು, ಅಸಲಿ ಕಾರಣವೇನು?
ಈ ಬಿಗ್​ ಟಾರ್ಗೆಟ್​ ಬೆನ್ನು ಹತ್ತಿದ ಮುಂಬೈ ಟೀಮ್ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಪೃಥ್ವಿ ಶಾ ಹಾಗೂ ಅಜಿಂಕ್ಯಾ ರಹಾನ್ ಮಿಂಚಿನ ಬ್ಯಾಟಿಂಗ್ ಮಾಡಿದ್ದರು. ಶಾ 49 ರನ್​ಗೆ ಔಟ್​ ಆಗಿ ಕೇವಲ ಒಂದು ರನ್​​ನಿಂದ ಅರ್ಧ ಶತಕ ವಂಚಿತರಾದರು. ರಹಾನೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ ಕೇವಲ 45 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಮೇತ 84 ರನ್​ಗಳನ್ನು ಗಳಿಸಿ ಔಟ್ ಆದರು.
ಇವರ ನಂತರ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಬೇಗ ಔಟ್ ಆದರು. ಆದರೆ ಶಿವಂ ದುಬೆ 37 ಹಾಗೂ ಸೂರ್ಯಾಂಶ್ ಶೆಡ್ಗೆ 36 ಇವರ ಉತ್ತಮ ಜೊತೆಯಾಟದಿಂದ ಮುಂಬೈ ಗೆಲುವಿನ ನಗೆ ಬೀರಿತು. 19.2 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 224 ರನ್​ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 4ನೇ ಅರ್ಧಶತಕ ದಾಖಲಿಸಿದ ರಹಾನೆ, ಮುಂಬೈ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇದರೊಂದಿಗೆ ಮುಂಬೈ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಡಿ. 13 ರಂದು ಬರೋಡ ಜೊತೆ ಪಂದ್ಯವಾಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us