newsfirstkannada.com

ಏಷ್ಯಾಕಪ್: ಪಾಕ್ ವಿರುದ್ಧದ ಪಂದ್ಯಕ್ಕೆ ಕೈಕೊಟ್ಟ ಕೆ.ಎಲ್​.ರಾಹುಲ್..!

Share :

Published August 29, 2023 at 2:33pm

    ನಾಳೆಯಿಂದ ಏಷ್ಯಾಕಪ್ ಆರಂಭ ಆಗಲಿದೆ

    ಕೆ.ಎಲ್.ರಾಹುಲ್ ಬಗ್ಗೆ ಮಾಹಿತಿ ನೀಡಿದ ದ್ರಾವಿಡ್

    KL ರಾಹುಲ್ ಪ್ರ್ಯಾಕ್ಟೀಸ್ ವೇಳೆ ಸಿಕ್ಸರ್ ಬಾರಿಸಿದ ವಿಡಿಯೋ

ಏಷ್ಯಾಕಪ್ ಹೊತ್ತಿನಲ್ಲಿ ಟೀ ಇಂಡಿಯಾಗೆ ಆನೆಬಲ ಬಂದಿದ್ದು ಕನ್ನಡಿಗ ಕೆ.ಎಲ್​.ರಾಹುಲ್ ಆಡೋದು ಪಕ್ಕಾ ಆಗಿದೆ. ಆದರೆ ಮೊದಲ ಎರಡು ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದಾರೆ. ಮೊದಲ ಪಂದ್ಯವನ್ನು ಭಾರತ ಪಾಕಿಸ್ತಾನದ ವಿರುದ್ಧ ಆಡುತ್ತಿದೆ.

ಆಗಸ್ಟ್ 30 ರಿಂದ ಆರಂಭವಾಗುವ ಏಷ್ಯಾ ಕಪ್​ನಲ್ಲಿ ಕನ್ನಡಿಗ ಕೆ.ಎಲ್​.ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದರೂ, ಆಡುತ್ತಾರೋ ಇಲ್ಲವೋ ಅನ್ನೋದು ಗುಟ್ಟಾಗಿಯೇ ಉಳಿದಿತ್ತು. ಇದೀಗ ಮಾಧ್ಯಮಗಳ ಜೊತೆ ಮಾತನಾಡಿರುವ ಮುಖ್ಯ ಕೋಚ್​ ರಾಹುಲ್ ದ್ರಾವಿಡ್.. ಏಷ್ಯಾ ಕಪ್​ನ ಮೊದಲ ಎರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಿದ್ದಾರೆ.

ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಆಡಲಿದ್ದೇವೆ. ನಂತರ ಸೆಪ್ಟೆಂಬರ್ 4 ರಂದು ನೇಪಾಳದ ವಿರುದ್ಧ ಆಡುತ್ತೇವೆ. ಈ ಎರಡು ಪಂದ್ಯಗಳಿಗೆ ರಾಹುಲ್ ಇರುವುದಿಲ್ಲ. ಖುಷಿ ವಿಚಾರ ಏನಂದರೆ ರಾಹುಲ್ ಅವರು ಬೆಂಗಳೂರಿನ ಎನ್​ಸಿಎಗೆ ಬಂದ ಮೇಲೆ ತುಂಬಾ ಸ್ಟ್ರಾಂಗ್ ಆಗಿ ಚೇತರಿಸಿಕೊಂಡಿದ್ದಾರೆ. ಅವರ ಫಿಟ್ನೆಸ್​ ಮತ್ತಷ್ಟು ಸುಧಾರಿಸಿದೆ. ಮುಂದಿನ ಪಂದ್ಯಗಳಲ್ಲಿ ಲಭ್ಯರಿರುತ್ತಾರೆ ಎಂದಿದ್ದಾರೆ. ಮತ್ತೊಂದು ಕಡೆ ಕೆಎಲ್ ರಾಹುಲ್ ತಮ್ಮ ಕಸರತ್ತು ಮುಂದುವರಿಸಿದ್ದಾರೆ. ಮೈದಾನದಲ್ಲಿ ಬೆವರು ಇಳಿಸುತ್ತಿದ್ದು, ಸಖತ್ ಆಗಿ ಸಿಕ್ಸರ್ ಬಾರಿಸಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಷ್ಯಾಕಪ್: ಪಾಕ್ ವಿರುದ್ಧದ ಪಂದ್ಯಕ್ಕೆ ಕೈಕೊಟ್ಟ ಕೆ.ಎಲ್​.ರಾಹುಲ್..!

https://newsfirstlive.com/wp-content/uploads/2023/08/KL-Rahul-2.jpg

Load More