/newsfirstlive-kannada/media/post_attachments/wp-content/uploads/2025/03/RAHUL_DRAVID_INJURY.jpg)
ರಾಹುಲ್ ದ್ರಾವಿಡ್.. ಯುವ ಕ್ರಿಕೆಟರ್ಗಳ ಪಾಲಿನ ಸ್ಪೂರ್ತಿಯ ಚಿಲುಮೆ, ಶಿಸ್ತು, ಬದ್ಧತೆ, ಸಂಯಮಕ್ಕೆ ಕೇರ್ ಆಫ್ ಅಡ್ರೆಸ್. ಕ್ರಿಕೆಟ್ನಿಂದ ದೂರಾಗಿ ವರ್ಷಗಳೇ ಉರುಳಿದ್ರೂ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಮತ್ತೆ ಜಂಟಲ್ಮನ್ ಗುಣಗಾನ ನಡೀತಿದೆ. ಯಾಕೆ ಅಂತೀರಾ?. ನಿಮ್ಮ ಬದುಕಲ್ಲೂ ಕೊಂಚ ಬದಲಾವಣೆ ಆಗಬಹುದು.
ಊರುಗೋಲು ಸಹಾಯದಿಂದ ಹೆಜ್ಜೆ ಹಾಕ್ತಿರುವ ದ್ರಾವಿಡ್ ಅವರ ಆರೋಗ್ಯವನ್ನು ಆಟಗಾರರು ವಿಚಾರಿಸ್ತಿದ್ದಾರೆ. ಚೇರ್ ಮೇಲೆ ಕಾಲಿಟ್ಟು ಚಿಂತಾಕ್ರಾಂತರಂತೆ ದ್ರಾವಿಡ್ ಕುಳಿತುಕೊಳ್ಳುತ್ತಾರೆ. ಇಂಜುರಿಯ ನೋವಿನ ನಡುವೆಯೂ ಯುವ ಆಟಗಾರರಿಗೆ ಬ್ಯಾಟಿಂಗ್ ಪಾಠ ಮಾಡುವ ಗುರು ಇವರು.
ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ಸೆಷನ್ ರಾಹುಕ್ ದ್ರಾವಿಡ್ ಇಂಜುರಿಗೆ ಒಳಗಾಗಿರುವುದು ಕಂಡು ಬಂದಿದೆ. ದ್ರಾವಿಡ್ಗೆ ಏನಾಯ್ತು..? ಇಂಜುರಿ ಹೇಗಾಯ್ತು ಅನ್ನೋ ಪಶ್ನೆ ಬಂದೇ ಬರುತ್ತೆ. ಆದ್ರೆ, ಈ ಇಂಜುರಿಗೆ ಕಾರಣವಾಗಿದ್ದು ಬೆಂಗಳೂರಿನಲ್ಲಿ ನಡೆದ ಆ ಒಂದು ಪಂದ್ಯ.
ನಾಸೂರ್ ಮೆಮೊರಿಯಲ್ ಶೀಲ್ಡ್ ಟೂರ್ನಿಯಲ್ಲಿ ಇಂಜುರಿ
ಕೆಎಸ್‌ಸಿಎ 3ನೇ ಡಿವಿಷನ್ನ ನಾಸೂರ್ ಮೆಮೊರಿಯಲ್ ಶೀಲ್ಡ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರಾಹುಲ್ ದ್ರಾವಿಡ್, ವಿಜಯಾ ಕ್ರಿಕೆಟ್ ಕ್ಲಬ್ ಪರ ಬ್ಯಾಟ್ ಬೀಸಿದ್ದರು. ಲಯನ್ಸ್ ಕ್ಲಬ್ ಎದುರಿನ ಈ ಪಂದ್ಯದಲ್ಲಿ ದ್ರಾವಿಡ್ ಎದುರಿಸಿದ್ದ 8 ಎಸೆತಗಳಲ್ಲಿ 10 ರನ್ ಗಳಿಸಿದ್ದರು. ಇದೇ ಮ್ಯಾಚ್ನಲ್ಲೇ ಪುತ್ರ ಸಮಿತ್, 60 ಎಸೆತಗಳಲ್ಲಿ 58 ರನ್ ಕೊಳ್ಳೆ ಹೊಡೆದಿದ್ದರು. ಈ ಮ್ಯಾಚ್ನಲ್ಲಿ ದ್ರಾವಿಡ್, ಎಡಗಾಲಿನ ಇಂಜುರಿಗೆ ತುತ್ತಾಗಿದ್ದರು. ಇದೇ ವಿಚಾರವನ್ನು ಆರ್ಆರ್, ಫೋಸ್ಟ್ ಮಾಡಿತ್ತು. ದ್ರಾವಿಡ್ ಕಾಲಿಗೆ ಕಟ್ಟಿದ್ದ ಬ್ಯಾಂಡೇಜ್ ನೋಡಿದ್ದ ಫ್ಯಾನ್ಸ್ಗೂ ಶಾಕ್ ಕಾದಿತ್ತು.
ದ್ರಾವಿಡ್ ಡೆಡಿಕೇಷನ್.. ಕಮಿಟ್ಮೆಂಟ್ಗೆ ಫ್ಯಾನ್ಸ್ ಸಲಾಂ..!
ಇಂಜುರಿಗೆ ತುತ್ತಾಗಿದ್ದ ದ್ರಾವಿಡ್, ಶೀಘ್ರ ಗುಣಮುಖರಾಗಲ್ಲ. ಐಪಿಎಲ್ ಆರಂಭಕ್ಕೂ ಮುನ್ನ ಹೆಡ್ ಕೋಚ್ ಸೇವೆ ಆಟಗಾರರಿಗೆ ಸಿಗಲ್ಲ ಅನ್ನೋ ಚಿಂತೆಯಲ್ಲಿತ್ತು. ಆದ್ರೆ, ದಿ ಗ್ರೇಟ್ ವಾಲ್, ಇಂಜುರಿ ನೋವಿನ ನಡುವೆ ಗಾಲ್ಫ್ ಕೋರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದರು.
ನಡೆಯಲು ಸಾಧ್ಯವಾಗದಿದ್ದರೂ, ಊರುಗೋಲಿನ ಸಹಾಯದಿಂದ ಹೆಜ್ಜೆ ಹಾಕಿದ್ದರು. ನಿಲ್ಲಲೂ ಆಗದಿದ್ದರೂ ಯುವ ಆಟಗಾರರಿಗೆ ಮಾರ್ಗದರ್ಶನ ನೀಡ್ತಿದ್ದಾರೆ. ಇದು ಲೆಜೆಂಡರಿ ಕ್ರಿಕೆಟರ್ನ ಡೆಡಿಕೇಷನ್, ಕಮಿಟ್ಮೆಂಟ್ನ ಎತ್ತಿ ತೋರಿಸುತ್ತಿತ್ತು. ಅಷ್ಟೇ ಅಲ್ಲ, ದ್ರಾವಿಡ್ ಲೆಜೆಂಡ್ ಆಗಿ ಬೆಳೆದ ಹಿಂದಿನ ಕಥೆಯನ್ನ ಹೇಳ್ತಿತ್ತು.
ಇಂಜುರಿ ನಡುವೆ ತಂಡದ ಗೆಲುವಿಗೆ ಹೋರಾಡಿದ್ದ ಧೀರ..!
ದ್ರಾವಿಡ್ ಅಂದ್ರೆ, ಕಮಿಟ್ಮೆಂಟ್, ಕಮಿಟ್ಮೆಂಟ್ ಅಂದ್ರೆ ದ್ರಾವಿಡ್ ಅಂದ್ರೆ ನಿಜಕ್ಕೂ ತಪ್ಪಿಲ್ಲ. ಯಾಕಂದ್ರೆ, ದ್ರಾವಿಡ್, ಡೆಡಿಕೇಷನ್ ಲೆವೆಲ್ ಬಗ್ಗೆ ಇಡೀ ವಿಶ್ವ ಕ್ರಿಕೆಟ್ ಲೋಕವೇ ಮಾತಡುತ್ತೆ. ಆತನ ಶ್ರದ್ಧೆ, ಕಟ್ಟು ನಿಟ್ಟು. ಪರಿಶ್ರಮ ಎಲ್ಲವೂ ಕಣ್ಣ ಮುಂದಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 2002ರಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯ.
ಈ ಪಂದ್ಯದ ಮೊದಲ ವಿಂಡೀಸ್ 501 ರನ್ ಪೇರಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 99 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಡೆಡ್ಲಿ ಪೇಸರ್ ಮರ್ವಿನ್ ಡಿಲ್ಲನ್ ಎಸೆತ ದ್ರಾವಿಡ್ ದವಡೆಗೆ ಬಿದಿತ್ತು. ಆದ್ರೆ, ಈ ನೋವಿನ ನಡುವೆಯೂ ದ್ರಾವಿಡ್ ಬ್ಯಾಟ್ ಬೀಸಿದ್ದು ಬರೋಬ್ಬರಿ 7 ಗಂಟೆಗಳ ಕಾಲ. ಅಷ್ಟೇ ಅಲ್ಲ, ಅಜೇಯ 144 ರನ್ ಗಳಿಸಿದ ದ್ರಾವಿಡ್, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ನೆರವಾಗಿದ್ದರು.
ಇದನ್ನೂ ಓದಿ:KL ರಾಹುಲ್ ಫ್ಯಾನ್ಸ್ಗೆ ನಿರಾಸೆ.. ನಾಯಕನ ಹೆಸರು ಅಧಿಕೃತವಾಗಿ ಘೋಷಿಸಿದ ಡೆಲ್ಲಿ ಕ್ಯಾಪಿಟಲ್ಸ್..!
180 ರನ್ಗಳ ಹೋರಾಟದ ಇನ್ನಿಂಗ್ಸ್ ಕಟ್ಟಿದ್ದರು
ಆಸ್ಟ್ರೇಲಿಯಾ ಎದುರಿನ 2001ರ ಈಡನ್ ಗಾರ್ಡನ್ಸ್ ಟೆಸ್ಟ್.. ಈ ಟೆಸ್ಟ್ನಲ್ಲಿ ಲಕ್ಷ್ಮಣ್ ಹಾಗೂ ದ್ರಾವಿಡ್ ಇನ್ನಿಂಗ್ಸ್ ಯಾವಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿ ಮರೆಯಲ್ಲ. ಆದ್ರೆ, ಈ ಟೆಸ್ಟ್ನಲ್ಲಿ ರಾಹುಲ್ ದ್ರಾವಿಡ್, ಫೀವರ್ ನಡುವೆ ಕಣಕ್ಕಿಳಿದ್ದಿದ್ದರು. 180 ರನ್ಗಳ ಹೋರಾಟದ ಇನ್ನಿಂಗ್ಸ್ ಕಟ್ಟಿದ್ದ ದ್ರಾವಿಡ್, ತಂಡದ ಗೆಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಗಳಿಸಿದ್ದ ದ್ರಾವಿಡ್ ಹೆಸರನ್ನು ರಾಹುಲ್ ಡೇವಿಡ್ ಎಂದು ಪತ್ರಿಕೆಯಲ್ಲಿ ಬರೆದಿದ್ದರು. ಈ ವೇಳೆ ತನ್ನ ಹೆಸರು ಪ್ರಪಂಚಕ್ಕೆ ತಿಳಿಯುವಂತೆ ಮಾಡಬೇಕೆಂಬ ಶಪಥ ಮಾಡಿದ್ದ ದ್ರಾವಿಡ್, ಕೆಲವೇ ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದ್ದರು. ಕೋಚ್ ಆಗಿಯೂ ದಿಟ್ಟತನ ತೋರಿದ್ದ ದ್ರಾವಿಡ್, ಇವತ್ತಿಗೂ ಆ ಬದ್ಧತೆಯನ್ನು ಮರೆತಿಲ್ಲ. ಇದೇ ಕಾರಣಕ್ಕೆ ದ್ರಾವಿಡ್, ಯುವ ಕ್ರಿಕೆಟರ್ಗಳ ಪಾಲಿಗೆ ಸ್ಪೂರ್ತಿಯ ಚಿಲುಮೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ