/newsfirstlive-kannada/media/post_attachments/wp-content/uploads/2024/07/RAHUL_DRAVID-2.jpg)
ಕ್ರಿಕೆಟ್​ ಲೋಕದಲ್ಲಿ ಸದ್ಯ 2025ರ ಐಪಿಎಲ್ ಟೂರ್ನಿಯ​ ಸುದ್ದಿಗಳು ಭಾರೀ ​ಸೌಂಡ್​ ಮಾಡುತ್ತಿವೆ. ಮೆಗಾ ಆಕ್ಷನ್​ಗೂ ಮೊದಲೇ ರಿಟೈನ್​-ರಿಲೀಸ್​ ಲೆಕ್ಕಾಚಾರಗಳು ಆರಂಭವಾಗಿದ್ದು, ಪ್ಲೇಯರ್ಸ್​ ಕೋಚ್​ಗಳ ಬಗ್ಗೆ ದಿನಕ್ಕೊಂದು ಶಾಕಿಂಗ್​​ ಸುದ್ದಿಗಳು ಹೊರ ಬೀಳ್ತಿವೆ. ಸದ್ಯ ಇದೀಗ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್​ ರಾಹುಲ್ ದ್ರಾವಿಡ್​ ಅವರ ಕುರಿತು ಬಿಗ್ ಅಪ್​ಡೇಟ್​ ಹೊರ ಬಿದ್ದಿರುವುದು ಬೆಂಗಳೂರು ಫ್ಯಾನ್ಸ್​ಗೆ ಇದು ತುಸು ಬೇಸರ ತರಿಸಬಹುದು.
ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಈ ಸಂಬಂಧ ಕನ್ನಡಿಗನ ಜೊತೆ ರಾಜಸ್ಥಾನ ಫ್ರಾಂಚೈಸಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಮಾಡುವುದು ಬಾಕಿಯಿದೆ. ಇನ್ನು RRನೊಂದಿಗೆ ದ್ರಾವಿಡ್ ಸುದೀರ್ಘ ಸಂಬಂಧ ಹೊಂದಿದ್ದಾರೆ. ಹೀಗಾಗಿ ಇವರು ಕೋಚ್ ಆಗುವುದು ಪಕ್ಕಾ ಎನ್ನಲಾಗ್ತಿದೆ. ಒಂದು ವೇಳೆ ರಾಹುಲ್ ದ್ರಾವಿಡ್​ ಅವರು ರಾಜಸ್ಥಾನ ತಂಡದ ಮುಖ್ಯ ಕೋಚ್ ಆದರೆ ನಿರ್ದೇಶಕರಾದ ಕುಮಾರ್ ಸಂಗಕ್ಕಾರನ್ನು ಫ್ರಾಂಚೈಸ್ ಉಳಿಸಿಕೊಳ್ಳುತ್ತೋ, ಬಿಡುತ್ತೋ ಎಂಬುದು ಮುಂದೆ ತಿಳಿಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು
ರಾಹುಲ್ ದ್ರಾವಿಡ್ 2015 ರಿಂದ ಬಿಸಿಸಿಐನೊಂದಿಗೆ ಭಾರತದ U-19 ಹಾಗೂ 'A' ತಂಡಗಳ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇದಾದ ಮೇಲೆ ಬೆಂಗಳೂರಿನಲ್ಲಿನ ಎನ್​ಸಿಎನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಂತಿಮವಾಗಿ 2021ರ ಅಕ್ಟೋಬರ್​​ನಿಂದ ಟೀಮ್​ ಇಂಡಿಯಾದ ಹೆಡ್​ ಮಾಸ್ಟರ್​ ಆಗಿ ಕೆಲಸ ಮಾಡಿದ್ದರು. ಅದರಂತೆ ಕೋಚ್ ಆಗಿ 2024ರ ಟಿ20 ವಿಶ್ವಕಪ್​ ಅನ್ನು ಗೆಲ್ಲಿಸಿಕೊಟ್ಟ ಹಿರಿಮೆ ಕನ್ನಡಿಗ ರಾಹುಲ್​ ದ್ರಾವಿಡ್​ದ್ದು. ಹೀಗಾಗಿಯೇ ಮುಂದಿನ ಐಪಿಎಲ್​ನಲ್ಲಿ ರಾಹುಲ್ ದ್ರಾವಿಡ್​ರನ್ನ ತಮ್ಮ ತಂಡಕ್ಕೆ ಕೋಚ್​ ಆಗಿ ನೇಮಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್​ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ