newsfirstkannada.com

ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್​ ಮ್ಯಾನ್..!

Share :

Published August 13, 2024 at 9:11am

Update August 13, 2024 at 9:13am

    ಬೌಲರ್​ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್​​​ಮನ್​​​

    ದಿಗ್ಗಜನ ಜೊತೆ ಆಟ..ಗ್ರೌಂಡ್​ ಸ್ಟಾಫ್​​ ಫುಲ್​​​ ಖುಷ್​​​​..!

    ಇವರೆಂದರೆ ರಾಹುಲ್ ದ್ರಾವಿಡ್​ಗೇಕೆ ಅಚ್ಚುಮೆಚ್ಚು..?

ಎಂತಹ ಕ್ಯಾರಕ್ಟರ್​ ಕಣ್ರಿ. ನಿಜಕ್ಕೂ ಕ್ರಿಕೆಟ್ ದಂತಕಥೆ ರಾಹುಲ್​ ದ್ರಾವಿಡ್​​​​ರಂತವರು ಕೋಟಿಗೊಬ್ಬರೇ. ಅಪಾರ ಜನಮನ್ನಣೆ ಸಿಕ್ಕಿದೆ. ನೇಮ್​, ಫೇಮ್​ ಎಲ್ಲಾ ಇದೆ. ಇಷ್ಟಾದ್ರೂ ದ್ರಾವಿಡ್ ಮಾತ್ರ ಬದಲಾಗಿಲ್ಲ. ಸ್ಟಾರ್​ಗಿರಿ ಮೈಗೂಡಿಸಿಕೊಳ್ಳದೆ ಸಿಂಪಲ್​ ಆಗಿ ಇದ್ರೂ ಎಲ್ಲರ ಹೃದಯಕ್ಕೆ ಹತ್ತಿರವಾಗ್ತಿದ್ದಾರೆ.

ರಾಹುಲ್​ ದ್ರಾವಿಡ್​​! ಜಂಟಲ್​ಮನ್​​ ಗೇಮ್​​ನ ರಿಯಲ್​ ಜಂಟಲ್​ಮನ್​​​!​ ಈ ಗ್ರೇಟೆಸ್ಟ್​ ಬ್ಯಾಟ್ಸ್​​​ಮನ್​ ಯಶಸ್ಸನ್ನ ಎಂದೂ ತಲೆಗೇರಿಸಿಕೊಂಡವರಲ್ಲ. ಅದು ಅಟಗಾರನಾಗಿದ್ದಲೂ ಅಷ್ಟೇ. ಟೀಮ್ ಇಂಡಿಯಾ ಹೆಡ್​ಕೋಚ್ ಆಗಿ ಇತಿಹಾಸ ನಿರ್ಮಿಸಿದಾಗಲೂ ಅಷ್ಟೇ. ಸದಾ ಸಿಂಪಲ್​. ಅಹಂ ಅನ್ನ ಮೂಟೆ ಕಟ್ಟಿ ಎಸೆದು, ಸರಳತೆಯ ಸಾಹುಕಾರ ಅನ್ನಿಸಿಕೊಂಡವರು. ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿದ ಚಾಂಪಿಯನ್ ಕೋಚ್ ಇದೀಗ ಸಿಂಪಲ್​​ ನಡೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್​ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?

ಬೌಲರ್​ ಆಗಿ ಬದಲಾದ ಲೆಜೆಂಡ್ರಿ ಬ್ಯಾಟ್ಸ್​​​ಮನ್
ದಿ ಗ್ರೇಟ್ ರಾಹುಲ್​ ದ್ರಾವಿಡ್​​ ಟೀಮ್ ಇಂಡಿಯಾ ಹೆಡ್​ಕೋಚ್​​​​​​​​​​​ ಹುದ್ದೆಗೆ ಗುಡ್​ಬೈ ಹೇಳಿದ್ದಾಗಿದೆ. ಮುಂದೇನ್​ ಮಾಡ್ತಾರೆ ಅನ್ನೋ ಸಸ್ಪೆನ್ಸ್ ಆಗಿ ಉಳಿದಿದೆ. ಈ ನಡುವೆ ದ್ರಾವಿಡ್​ ಹೊಸ ಅವತಾರ ಎತ್ತಿದ್ದಾರೆ. ಕಲಾತ್ಮಕ ಬ್ಯಾಟಿಂಗ್​ನಿಂದ ಕ್ರಿಕೆಟ್ ಲೋಕವನ್ನ ಆಳಿದ್ದ ದ್ರಾವಿಡ್​​​​, ಇದೀಗ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಕ್ರಿಕೆಟ್​ ದಂತಕಥೆ ದ್ರಾವಿಡ್​​ ಬಿಡುವಿನ ಸಮಯವನ್ನ ಎಂಜಾಯ್​ ಮಾಡ್ತಿದ್ದಾರೆ. ಮಾಜಿ ಕೋಚ್ ದ್ರಾವಿಡ್​ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ ಬಳಿಕ ​​​ ಕೆಎಸ್​ಸಿಎಗೆ ಬಂದಿದ್ದರು. ಈ ವೇಳೆ ಎನ್​​ಸಿಎ ಗ್ರೌಂಡ್​ ಸ್ಟಾಫ್​​ ಜೊತೆ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡಿದ್ದಾರೆ.
ದ್ರಾವಿಡ್​ ಬೌಲಿಂಗ್ ಮಾಡಿದ್ದು ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ದಿ ವಾಲ್​​ ಓಡಿ ಬಂದು ಬೌಲಿಂಗ್ ಮಾಡ್ತಿದ್ರೆ ಎನ್​ಸಿಎ ಸ್ಟಾಫ್​​ ಮೆಂಬರ್ಸ್​ ಅತೀವ ಖುಷಿಯಿಂದ ಬ್ಯಾಟ್ ಬೀಸಿದ್ದಾರೆ. ಅವರ ಸಂಭ್ರಮವನ್ನ ಹೇಳತೀರದು. ವಿಶ್ವದ ಸೂಪರ್​​ ಸ್ಟಾರ್​ ಕ್ರಿಕೆಟರ್​​, ಜಗತ್ತೇ ಮೆಚ್ಚಿದ ಆಟಗಾರ ರಾಹುಲ್​ ದ್ರಾವಿಡ್​.. ದ್ರಾವಿಡ್​ನ ನೋಡಬೇಕು, ಮಾತನಾಡಬೇಕು, ಆಟೋಗ್ರಾಫ್, ಫೋಟೋಗ್ರಾಫ್​ಗೆ ಹಂಬಲಿಸೋ ಕೋಟ್ಯಂತರ ಮನಸ್ಸುಗಳಿವೆ. ಅಂತಾ ಆಟಗಾರನೊಂದಿಗೆ ಕ್ರಿಕೆಟ್​ ಆಡೋ ಅವಕಾಶ ಸಿಕ್ಕರೆ ಪದಗಳಲ್ಲಿ ಆ ಸಂತೋಷವನ್ನ ಹಿಡಿದಿಡೋಕೆ ಆಗಲ್ಲ ಬಿಡಿ.

ಗ್ರೌಂಡ್​​ ಸ್ಟಾಫ್​​ ಅಂದ್ರೆ ದ್ರಾವಿಡ್​​ಗೆ ಸ್ಪೆಷಲ್​ ಲವ್
ರಾಹುಲ್​​ ದ್ರಾವಿಡ್​ ಎಷ್ಟೇ ಎತ್ತರಕ್ಕೆ ಬೆಳೆದ್ರೂ ಗ್ರೌಂಡ್​ ಸ್ಟಾಫ್​ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಮೈದಾನ ಸಿಬ್ಬಂದಿ ಅಂದ್ರೆ ದಿ ವಾಲ್​​ಗೆ ಅದೇನೋ ಸ್ಪೆಷಲ್​ ಲವ್. ಆಟಗಾರನಾಗಿ, ಭಾರತ ಎ ತಂಡದ ಕೋಚ್​​, ಅಂಡರ್​​​-19 ಹೆಡ್​​ಕೋಚ್​​​​​ ಹಾಗೂ ಟೀಮ್ ಇಂಡಿಯಾದ ಹೆಡ್​ಕೋಚ್​ ಆದರೂ ಗ್ರೌಂಡ್​ ಸ್ಟಾಫ್​​ ಮೇಲಿನ ಗೌರವ ಮಾತ್ರ ಕಮ್ಮಿಯಾಗಿರಲ್ಲ. ಕ್ರಿಕೆಟರ್ ಆಗಿ ದ್ರಾವಿಡ್​​​​ ಗ್ರೌಂಡ್​ ಸ್ಟಾಫ್​ಗಳಿಗೆ ಕೊಡುವಷ್ಟು ಗೌರವವನ್ನ ಮತ್ತೋರ್ವ ಕ್ರಿಕೆಟರ್ ಕೊಡಲಾರ. ಆ ಮಟ್ಟಿಗೆ ದ್ರಾವಿಡ್ ಗೌರವಿಸ್ತಾರೆ.

ಸ್ಪರ್ಧಾತ್ಮಕ ಪಿಚ್​ಗಾಗಿ ಗ್ರೌಂಡ್​ ಸ್ಟಾಫ್​ಗೆ 35 ಸಾವಿರ ರೂಪಾಯಿ
ಇದೊಂದು ನಿದರ್ಶನ ಸಾಕು. ದ್ರಾವಿಡ್​ಗೆ ಗ್ರೌಂಡ್​​​ ಸ್ಟಾಫ್​ ಮೇಲೆ ಅದ್ಯಾವ ಮಟ್ಟಿಗೆ ಪ್ರೀತಿ ಇದೆ ಅನ್ನೋದಕ್ಕೆ. 2021 ರಲ್ಲಿ ನ್ಯೂಜಿಲೆಂಡ್​ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಕಾನ್ಪುರದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಸ್ಪರ್ಧಾತ್ಮಕ ಪಿಚ್​​ ನಿರ್ಮಿಸಿದ್ದಕ್ಕೆ ಖುಷಿಗೊಂಡಿದ್ದ ಹೆಡ್​ ಕೋಚ್​ ದ್ರಾವಿಡ್​​ ಉತ್ತರ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್​​​​ನ ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ರು. ಈ ನಡೆಯಿಂದ ದ್ರಾವಿಡ್​​​​ ಎಲ್ಲರ ದಿಲ್ ಗೆದ್ದಿದ್ರು.

ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!

ಮೈದಾನ ಸಿಬ್ಬಂದಿ ಅವಿರತ ಪರಿಶ್ರಮಕ್ಕೆ ದ್ರಾವಿಡ್ ಮೆಚ್ಚುಗೆ
2022ರಲ್ಲಿ ಇಂತಹದ್ದೇ ಮತ್ತೊಂದು ನಡೆಯಿಂದ ರಾಹುಲ್​ ದ್ರಾವಿಡ್​​​ ಮೆಚ್ಚುಗೆ ಗಳಿಸಿದ್ರು. ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಮೈದಾನದ ಸಿಬ್ಬಂದಿ ಪಂದ್ಯ ಮರು ಆರಂಭಕ್ಕೆ ಇನ್ನಿಲ್ಲದ ಪರಿಶ್ರಮ ಹಾಕಿದ್ರು. ಮಧ್ಯರಾತ್ರಿ 1 ಗಂಟೆ ಪಂದ್ಯ ಆರಂಭಗೊಂಡು ಸರಣಿ 1-1 ರಲ್ಲಿ ಸಮಗೊಳ್ತು. ಪಂದ್ಯ ಮುಕ್ತಾಯದ ಬಳಿಕ ಮೈದಾನದ ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡು ಅವರ ಕಾರ್ಯವನ್ನ ಶ್ಲಾಘಿಸಿದ್ರು.

ರಾಹುಲ್​ ದ್ರಾವಿಡ್​​​ ಗ್ರೌಂಡ್ ಸ್ಟಾಫ್​ಗಳನ್ನ ಎಷ್ಟು ಪ್ರೀತಿಸ್ತಾರೋ, ಅವರು ಸಹ ದಿ ವಾಲ್​ರನ್ನ ಅಷ್ಟೇ ಇಷ್ಟಪಡ್ತಾರೆ. ಭಾರತದಲ್ಲಿ ಎಲ್ಲೆ ಪಂದ್ಯ ನಡೆದ್ರೂ, ವಾಲ್​ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳ್ತಿದ್ರೂ ದ್ರಾವಿಡ್ ಎಂದೂ ಅವರನ್ನ ಬೇಸರಗೊಳಿಸಿಲ್ಲ. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್​​​ಗೆ ಜಂಟಲ್​ಮನ್​ ಗೇಮ್​ನ ರಿಯಲ್​​ ಜಂಟಲ್​ಮನ್​ ಅನಿಸಿಕೊಂಡಿರೋದು.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಪ್ಲಾನ್; ಇಲ್ಲಿ ಎಲಾನ್ ಮಸ್ಕ್​ ಅವರ SpaceX ಕೆಲಸ ಏನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್​ ಮ್ಯಾನ್..!

https://newsfirstlive.com/wp-content/uploads/2024/08/DRAVID-2.jpg

Load More