newsfirstkannada.com

ವಿಶ್ವಕಪ್​ ಸೋಲಿಗೆ ಮತ್ತೆ ಕಾರಣ ಕೇಳಿದ ಬಿಸಿಸಿಐ; ಆಕ್ರೋಶ ಹೊರಹಾಕಿದ ದ್ರಾವಿಡ್​​, ರೋಹಿತ್​!

Share :

Published January 24, 2024 at 6:36pm

    ವಿಶ್ವಕಪ್​ ಸೋಲಿಗೆ ಮತ್ತೆ ಕಾರಣ ಕೇಳಿದ ಬಿಸಿಸಿಐ

    ಈ ಬಗ್ಗೆ ಕೋಚ್​ ದ್ರಾವಿಡ್​ ಹೇಳಿದ್ದೇನು ಗೊತ್ತಾ..?

    ಕಾರಣ ಕೇಳಿದ ಬಿಸಿಸಿಐಗೆ ದ್ರಾವಿಡ್​ ತಿರುಗೇಟು

ಬಿಸಿಸಿಐ, ಟೀಂ ಇಂಡಿಯಾ ಹಾಗೂ ಅಭಿಮಾನಿಗಳು ವಿಶ್ವಕಪ್​ ಸೋಲಿನ ನೋವಿನಿಂದ ಇನ್ನೂ ಸರಿಯಾಗಿ ಹೊರಗೆ ಬಂದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಫೈನಲ್ ಪಂದ್ಯದಲ್ಲಿ ನಡೆದ ಕ್ಷಣಗಳು ಕಾಡುತ್ತಲೇ ಇದೆ. ಸರಿ, ತಪ್ಪುಗಳ ಲೆಕ್ಕಾಚಾರ ಮನಸಿನ ಆಳದಲ್ಲಿ ಆಗಾಗ ಬಂದು ಹೋಗುತ್ತಲೇ ಇದೆ.

ಈ ಮಧ್ಯೆ ಬಿಸಿಸಿಐ, ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್​ ಅವರ ಜತೆ ಮೀಟಿಂಗ್ ಮಾಡಿ ತಂಡದ ಸೋಲಿಗೆ ಮತ್ತೆ ಕಾರಣ ಕೇಳಿದೆ. ಇಬ್ಬರ ಜೊತೆ ಸೋಲಿನ ಕುರಿತು ವಿಮರ್ಶೆ ಮಾಡಿದೆ. ವಿಡಿಯೋ ಕಾಲ್ ಮೂಲಕ ಬಿಸಿಸಿಐ ಸರಿ, ತಪ್ಪುಗಳ ಬಗ್ಗೆ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ.

ಬಿಸಿಸಿಐ ಸೆಕ್ರೆಟರಿ ಜಯ್ ಶಾ, ವೈಸ್ ಪ್ರೆಸಿಡೆಂಟ್ ರಾಜೀವ್ ಶುಕ್ಲಾ, ಖಜಾಂಜಿ ಶಶಿಶ್ ಶೇಲರ್ ಮೀಟಿಂಗ್​ನಲ್ಲಿ ಇದ್ದರು. ಈ ವೇಳೆ ರಾಹುಲ್ ದ್ರಾವಿಡ್, ಫೈನಲ್ ನಡೆದ ಸ್ಥಳ ಅಹಮ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಬಗ್ಗೆ ದೂರಿದ್ದಾರೆ. ನಾವು ಏನು ನಿರೀಕ್ಷೆ ಮಾಡಿದ್ದೇವೋ, ಆ ರೀತಿ ಪಿಚ್ ಇರಲಿಲ್ಲ. ಇದರಿಂದ ನಮಗೆ ಅನಾನುಕೂಲ ಆಯಿತು. ಪರಿಣಾಮ ಇದರಿಂದ ನಾವು ವಿಶ್ವಕಪ್​ನಲ್ಲಿ ಸೋಲಬೇಕಾಯಿತು ಎಂದು ದ್ರಾವಿಡ್ ಬಿಸಿಸಿಐಗೆ ದೂರು ನೀಡಿದ್ದಾರೆ. ಅಲ್ಲದೇ ಎಷ್ಟು ಬಾರಿ ಮತ್ತೆ ಅದೇ ಪ್ರಶ್ನೆ ಕೇಳ್ತೀರಾ? ಎಂದು ದ್ರಾವಿಡ್​, ರೋಹಿತ್​ ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಸೋಲಿಗೆ ಮತ್ತೆ ಕಾರಣ ಕೇಳಿದ ಬಿಸಿಸಿಐ; ಆಕ್ರೋಶ ಹೊರಹಾಕಿದ ದ್ರಾವಿಡ್​​, ರೋಹಿತ್​!

https://newsfirstlive.com/wp-content/uploads/2023/07/RAHUL_DRAVID_ROHIT_SHARMA.jpg

Load More