/newsfirstlive-kannada/media/post_attachments/wp-content/uploads/2024/08/DRAVID-SON.jpg)
ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರನ್ನು ಮೈಸೂರು ವಾರಿಯರ್ಸ್ ಈ ಹಿಂದೆ ಖರೀದಿ ಮಾಡಿತ್ತು. ಇದೀಗ ಮಹಾರಾಜ ಟ್ರೋಫಿ ಟಿ-20ಯಲ್ಲಿ ಸಿಕ್ಸರ್ ಬಾರಿಸಿ ಸುದ್ದಿಯಾಗಿದ್ದಾರೆ.
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ್ದಾರೆ. ಅವರ ಸಿಕ್ಸರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಅಂದ್ಹಾಗೆ ಮೈಸೂರು ವಾರಿಯರ್ಸ್ ಪರ ಸಮಿತ್ ನಾಲ್ಕನೇ ಪ್ಲೇಸ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳಲ್ಲಿ 7 ರನ್ ಗಳಿಸಿ ಔಟ್ ಆದರೆ. ಈ ನಡುವೆ ಒಂದು ಸಿಕ್ಸರ್ ಬಾರಿಸಿದರು.
ಇದನ್ನೂ ಓದಿ:ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಇನ್ನೊಂದು ನ್ಯಾಯ.. ಬಿಸಿಸಿಐನ ಸುಣ್ಣ, ಬೆಣ್ಣೆ ಆಟಕ್ಕೆ ಆಕ್ರೋಶ..!
ಮೈಸೂರು ವಾರಿಯರ್ಸ್ಗೆ ಸೋಲು..!
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಎರಡನೇ ಪಂದ್ಯ ಇದಾಗಿದೆ. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಮೈಸೂರು ವಾರಿಯರ್ಸ್ ಮೊದಲು ಬ್ಯಾಟ್ ಮಾಡಿತ್ತು. ಮಳೆಯ ನಡುವೆಯೂ 18 ಓವರ್‌ಗಳಲ್ಲಿ 182 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ವಾರಿಯರ್ಸ್ ಪರ ಹರ್ಷಿಲ್ ಧರ್ಮಾನಿ ಹಾಗೂ ಮನೋಜ್ ಭಾಂಡ್ಗೆ ಅರ್ಧಶತಕ ಬಾರಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ ಬಿಡ್ಡಿಂಗ್! 5 ಆಟಗಾರರ ಮೇಲೆ ಕೋಟಿ ಕೋಟಿ ಹಣ.. ಸಚಿನ್ ಅತ್ಯಂತ ದುಬಾರಿ!
Rahul Dravid's son 🔥
pic.twitter.com/kivN6xoyF5— AO(inactive) (@dksunnyfan) August 16, 2024
ಈ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್, ಭುವನ್ ರಾಜು ಮತ್ತು ಸೂರಜ್ ಅಹುಜಾ ಅದ್ಭುತ ಆಟ ಆಡಿ 4 ವಿಕೆಟ್‌ಗಳು ಬಾಕಿ ಇರುವಾಗಲೇ ತಂಡವನ್ನು ಗೆಲ್ಲಿಸಿಕೊಟ್ಟರು. ಭುವನ್ 24 ಎಸೆತಗಳಲ್ಲಿ 51 ರನ್ ಗಳಿಸಿದರೆ, ಸೂರಜ್ 18 ಎಸೆತಗಳಲ್ಲಿ 39 ರನ್ ಗಳಿಸಿದರು. ಸಮಿತ್ ದ್ರಾವಿಡ್ ನೇತೃತ್ವದ ಮೈಸೂರು ವಾರಿಯರ್ಸ್ 2 ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಪಾಂಡ್ಯಗೆ ಇಲ್ಲ ಎಕ್ಸ್ಕ್ಯೂಸ್.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ