KSCA ಹರಾಜಿನಲ್ಲಿ ರಾಹುಲ್ ದ್ರಾವಿಡ್​ ಪುತ್ರ ಅನ್​ಸೋಲ್ಡ್..! ​

author-image
Ganesh
Updated On
ಟೀಂ ಇಂಡಿಯಾಗೆ ಸಮಿತ್ ಅಯ್ಕೆ; ಮಗನಿಗೆ ಅಪ್ಪ ದ್ರಾವಿಡ್​ ಕಳುಹಿಸಿದ್ರು ಸ್ಪೆಷಲ್ ಮೆಸೇಜ್..!
Advertisment
  • ದ್ರಾವಿಡ್​​ ಪುತ್ರ ಸಮಿತ್​​ ದ್ರಾವಿಡ್​ ಅನ್​ಸೋಲ್ಡ್
  • ಮಿಂಚಿದ್ರೆ ಅದೃಷ್ಟ ಬದಲಾಗೋದ್ರಲ್ಲಿ ಅನುಮಾನವಿಲ್ಲ
  • ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು

ಮಹಾರಾಜ ಟಿ20 ಟ್ರೋಫಿ ಟೂರ್ನಿಯ ಹರಾಜಿನಲ್ಲಿ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​​ ಪುತ್ರ ಸಮಿತ್​​ ದ್ರಾವಿಡ್​ ಅನ್​ಸೋಲ್ಡ್​ ಆಗಿದ್ದಾರೆ. ಕಳೆದ ಸೀಸನ್​​ನಲ್ಲಿ ಮೈಸೂರು ವಾರಿಯರ್ಸ್​ ಪರ ಸಮಿತ್​ ದ್ರಾವಿಡ್​ ಆಡಿದ್ರು. 7 ಪಂದ್ಯಗಳಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿದ್ದ ಸಮಿತ್​ ಕೇವಲ 82 ರನ್​ಗಳಿಸಿದ್ರು.

ಇನ್ನು, ಬಿಡ್ಡಿಂಗ್ ವಾರ್​​ನಲ್ಲಿ ದೇವದತ್ ಪಡಿಕ್ಕಲ್​​​​​ 13.20 ಲಕ್ಷ ರೂಪಾಯಿಗೆ ಹುಬ್ಬಳ್ಳಿ ಟೈಗರ್ಸ್​ ಪಾಲಾದರು. ಮನೀಶ್ ಪಾಂಡೆ 12.20 ಲಕ್ಷಕ್ಕೆ ಮೈಸೂರ್ ವಾರಿಯರ್ಸ್​ಗೆ ಸೇಲಾದ್ರೆ, ಅಭಿನವ್ ಮನೋಹರ್ ಸಹ 12.20 ಲಕ್ಷ ರೂಪಾಯಿಗೆ, ಹುಬ್ಬಳ್ಳಿ ಟೈಗರ್ಸ್​​ ತಂಡ ಸೇರಿಕೊಂಡ್ರು. ವೇಗಿ ವಿಧ್ವತ್ ಕಾವೇರಪ್ಪರನ್ನ ಶಿವಮೊಗ್ಗ ಲಯನ್ಸ್​ 10.80 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದ್ರೆ, ಲೆಗ್​ಸ್ಪಿನ್ನರ್ ಶ್ರೇಯಸ್ ಗೋಪಾಲ್, 8.60 ಲಕ್ಷಕ್ಕೆ ಮಂಗಳೂರು ಡ್ರ್ಯಾಗನ್ಸ್​​​ ಫ್ರಾಂಚೈಸಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: KSCA Auction: ಪಡಿಕ್ಕಲ್​​​, ಮನಿಶ್ ಪಾಂಡೆ ಭಾರೀ ಮೊತ್ತಕ್ಕೆ ಸೇಲ್.. ಯಾರು ಹೆಚ್ಚು ಮೊತ್ತಕ್ಕೆ ಬಿಕರಿ..?

publive-image

ಆಟಗಾರರನ್ನ ಫ್ರಾಂಚೈಸಿ ಮಾಲೀಕರು ಹರಾಜಿನಲ್ಲಿ ಖರೀದಿಸಿದ್ರೆ, ತಂಡಗಳು ಕೆಲ ಆಟಗಾರರನ್ನ ರೀಟೈನ್ ಮಾಡಿಕೊಂಡಿವೆ. ಮಂಗಳೂರು ಡ್ರ್ಯಾಗನ್ಸ್, ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೋರೋನ್ಹಾ, ಲೋಚನ್ ಗೌಡ, ಪರಾಸ್ ಆರ್ಯರನ್ನ ರೀಟೈನ್ ಮಾಡಿಕೊಂಡಿದ್ರೆ, ಬೆಂಗಳೂರು ಬ್ಲಾಸ್ಟರ್ಸ್​ ಮಯಾಂಕ್ ಅಗರ್​ವಾಲ್, ಶುಭಾಂಗ್ ಹೆಗ್ಡೆ, ನವೀನ್ ಎಂ.ಜಿ, ಸೂರಜ್ ಅಹುಜಾರನ್ನ ತಮ್ಮಲ್ಲೇ ಉಳಿಸಿಕೊಂಡಿತ್ತು. ಯುವ ಕ್ರಿಕೆಟಿಗರಿಗೆ ತಮ್ಮ ಟ್ಯಾಲೆಂಟ್ ತೋರಿಸಲು ಕೆಎಸ್​ಸಿಎ ಮಹಾರಾಜ T20 ಟ್ರೋಫಿ, ಉತ್ತಮ ವೇದಿಕೆಯಾಗಿದೆ. ಈ ಪ್ರತಿಷ್ಟಿತ ಟೂರ್ನಿಯಲ್ಲಿ ಆಟಗಾರರು ಮಿಂಚಿದ್ರೆ, ಅದೃಷ್ಟ ಬದಲಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: 114 ವರ್ಷದ ಮ್ಯಾರಥಾನ್ ಓಟಗಾರ​ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್‌; ಆರೋಪಿ ಬಂಧನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment