6,6,4,4,4,4,4,4,4,4,4,4; ದ್ರಾವಿಡ್​ ಪುತ್ರ ಅನ್ವಯ್​ ಸ್ಫೋಟಕ ಶತಕ; ಬೆಚ್ಚಿಬಿದ್ದ ಕ್ರೀಡಾಲೋಕ

author-image
Ganesh Nachikethu
Updated On
6,6,4,4,4,4,4,4,4,4,4,4; ದ್ರಾವಿಡ್​ ಪುತ್ರ ಅನ್ವಯ್​ ಸ್ಫೋಟಕ ಶತಕ; ಬೆಚ್ಚಿಬಿದ್ದ ಕ್ರೀಡಾಲೋಕ
Advertisment
  • ಟೀಮ್ ಇಂಡಿಯಾದ ಮಾಜಿ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ಮಗ
  • ರಾಹುಲ್​​ ದ್ರಾವಿಡ್​​​ ಕಿರಿಯ ಪುತ್ರ ಅನ್ವಯ್ ಅಬ್ಬರದ ಶತಕ ಸಿಡಿಸಿದ್ರು!
  • ವಿಜಯ್‌ ಮರ್ಚಂಟ್‌ ಕ್ರಿಕೆಟ್ ಟೂರ್ನಿಯಲ್ಲಿ ಗಮನ ಸೆಳೆದ ಅನ್ವಯ್

ಟೀಮ್ ಇಂಡಿಯಾದ ಮಾಜಿ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ಮಗ ಮಿಂಚಿದರು. ರಾಹುಲ್​​ ದ್ರಾವಿಡ್​​​ ಕಿರಿಯ ಪುತ್ರ ಅನ್ವಯ್ ವಿಜಯ್‌ ಮರ್ಚಂಟ್‌ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಶತಕ ಸಿಡಿಸಿದ್ರು.

ಮುಳಪಾಡುವಿನ ಡಿವಿಆರ್ ಸ್ಟೇಡಿಯಮ್​​ನಲ್ಲಿ ನಡೆದ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಪರ ಸ್ಥಿರ ಪ್ರದರ್ಶನ ನೀಡಿದ ಅನ್ವಯ್‌ ಶತಕ ಸಿಡಿಸಿದ್ರು. ಫಸ್ಟ್​ ಬ್ಯಾಟಿಂಗ್​ ಮಾಡಿದ ಜಾರ್ಖಂಡ್‌ ಮೊದಲ ಇನಿಂಗ್ಸ್‌ನಲ್ಲಿ 387 ರನ್‌ ಕಲೆ ಹಾಕಿತ್ತು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 441 ರನ್‌ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜೂನಿಯರ್ ದ್ರಾವಿಡ್‌ ಶತಕ ಬಾರಿಸಿದ್ದು ಎಲ್ಲರ ಗಮನ ಸೆಳೆಯಿತು.

ಉತ್ತಮ ಆರಂಭ

ಕರ್ನಾಟಕ ಪರ ಓಪನಿಂಗ್​ ಮಾಡಿದ ಆರ್ಯ ಗೌಡ, ಧ್ರುವ ಕೃಷ್ಣ ಅಮೋಘ ಜೋಡಿ ಅಮೋಘ ಬ್ಯಾಟಿಂಗ್​ ಮಾಡಿತು. ಜಾರ್ಖಂಡ್ ಬೌಲರ್‌ಗಳನ್ನು ಕಾಡಿದ ಈ ಜೋಡಿ 434 ಎಸೆತಗಳಲ್ಲಿ 229 ರನ್‌ ಸಿಡಿಸಿತು. ಆರ್ಯ ಗೌಡ 104 ರನ್‌ ಮತ್ತು ಧ್ರುವ್ ಕೃಷ್ಣ 122 ರನ್‌ ಬಾರಿಸಿದ್ರು.

ಅನ್ವಯ್ ಸಿಡಿಲಬ್ಬರದ ಶತಕ

3ನೇ ವಿಕೆಟ್‌ಗೆ ಅನಿರುದ್ಧ್ ಹಾಗೂ ಅನ್ವಯ್ ದ್ರಾವಿಡ್‌ ಉತ್ತಮ ಜೊತೆಯಾಟ ಆಡಿದ್ರು. ಶ್ಯಾಮಂತಕ್ ಅನಿರುದ್ಧ್ 13 ಬೌಂಡರಿ ನೆರವಿನಿಂದ 76 ರನ್‌ ಸಿಡಿಸಿ ಔಟ್ ಆದರು. ಬಿರುಸಿನ ಬ್ಯಾಟಿಂಗ್​ ಮಾಡಿದ ಅನ್ವಯ್‌ ದ್ರಾವಿಡ್‌ 153 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಮೇತ ಅಜೇಯ 100 ರನ್‌ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ:4,4,4,4,4,4,4,4,4,4,4,4,4,4,4,4,4,4; ಭಾರತ-ಆಸೀಸ್ ಟೆಸ್ಟ್​​ನಲ್ಲಿ ಸ್ಫೋಟಕ ಶತಕ ಸಿಡಿಸಿದ ಸ್ಟಾರ್ ಬ್ಯಾಟರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment