newsfirstkannada.com

ಅಂದು ಕೋಚ್​ ಹುದ್ದೆಗೆ ಅನ್​ಫಿಟ್ ಅಂದ್ರು​​​.. ಟೀಕೆ ಟಿಪ್ಪಣಿಗಳ ಮೆಟ್ಟಿ ನಿಂತ ‘ದ್ರೋಣಾಚಾರ್ಯ’ನ ರೋಚಕ ಕಥೆ..!

Share :

Published November 17, 2023 at 12:31pm

Update November 17, 2023 at 12:33pm

  ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ

  ವಿಶ್ವಕಪ್​​ ವರ್ಷದಲ್ಲಿ ಪ್ರಯೋಗ..ಫ್ಯಾನ್ಸ್​ ಸಿಡಿಮಿಡಿ

  ಕೋಚ್​​ ದ್ರಾವಿಡ್​​ ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?

ವಿಶ್ವಕಪ್​ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್​​​ಗೆ ಎಂಟ್ರಿಕೊಟ್ಟಿದೆ. ಹೆಡ್​​ಕೋಚ್​​ ರಾಹುಲ್​​​​ ದ್ರಾವಿಡ್​​ರನ್ನ​​​​​ ಹೊತ್ತು ಮೆರೆಸಲಾಗ್ತಿದೆ. ಕನ್ನಡದ ಕಣ್ಮಣಿಯೇ ಇದಕ್ಕೆಲ್ಲಾ ಕಾರಣ. ಅವರ ಕೋಚಿಂಗ್​​​​ ರೋಹಿತ್ ಬಳಗದ ಯಶಸ್ಸಿನ ಗುಟ್ಟು ಎಂದೆಲ್ಲಾ ಕೊಂಡಾಡ್ತಿದ್ದಾರೆ. ಎಲ್ಲವೂ ನಿಜ..ಆದರೆ ಇದೇ ದ್ರಾವಿಡ್​​​​ ಎರಡು ವರ್ಷಗಳ ಹಿಂದೆ ಎದುರಿಸಿದ್ದು ಸಾಲು ಸಾಲು ಟೀಕೆ. ದಿ ವಾಲ್​ ಟೀಕೆಗಳ ಚಕ್ರವ್ಯೂಹ ಬೇಧಿಸಿದ್ದೇ ರೋಚಕ.

ಪ್ರಸಕ್ತ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಔಟ್​ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್​​ ಜೊತೆ ಬಿಗ್ ಮಾರ್ಕ್​ ಸೆಟ್ ಮಾಡಿದೆ. ಹತ್ತಕ್ಕೆ ಹತ್ತು ಪಂದ್ಯಗಳನ್ನ ಗೆದ್ದು ಫೈನಲ್​​ಗೆ ರೇಸ್​​​ಗೆ ಎಂಟ್ರಿಕೊಟ್ಟಿದೆ. ಇಲ್ಲಿ ತನಕ ಭಾರತ ತಂಡದ ವಿಚಾರದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದೆ. ಫೈನಲ್​​​​​​​​​​​​​​​​ ಪಂದ್ಯವೊಂದನ್ನು ಗೆದ್ದು ಬಿಟ್ಟರೆ ಏಕದಿನ ಅಧಿಪತಿಯಾಗಿ ಮೆರೆದಾಡಲಿದೆ.

ಟೀಮ್ ಇಂಡಿಯಾವನ್ನ ಹೊಗಳಲು ಪದಗಳೇ ಇಲ್ಲ. ಯಾರ ಬಾಯಲ್ಲಿ ಕೇಳಿದ್ರೂ ಶಬ್ಬಾಸ್​ಗಿರಿ. ಎಲ್ಲೇ ನೋಡಿದ್ರೂ ಟೀಮ್ ಇಂಡಿಯಾದ್ದೇ ಜಪ. ಇಡೀ ತಂಡವನ್ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಭಾರತದ ಈ ಅಜೇಯ ಓಟದ ಹಿಂದೆ ದೊಡ್ಡ ಫೇಲ್ಯೂರ್​ ಕಥೆ ಇದೆ. ಆ ವೈಫಲ್ಯ ಕಂಡಾಗಲೆಲ್ಲಾ ದ್ರೋಣಾಚಾರ್ಯ ದ್ರಾವಿಡ್​ ಅನುಭವಿಸಿದ್ದು ಒಂದೆರಡು ನೋವಲ್ಲ.

ವಿಶ್ವಕಪ್ ರಣರಂಗದಲ್ಲಿ ಟೀಮ್ ಇಂಡಿಯಾವನ್ನ ಟಚ್​ ಮಾಡೋರೆ ಇಲ್ಲ. ಅಷ್ಟೊಂದು ಭಯಾನಕವಾಗಿ ಆಟವಾಡ್ತಿದೆ. ಆದರೆ ಈಗ ನೋಡ್ತಿರುವ ಇದೇ ತಂಡ ಎರಡು ವರ್ಷಗಳ ಹಿಂದೆ ಇದ್ದಿದ್ದೇ ಬೇರೆ ಥರ. ಅವತ್ತಿನಿಂದ ಟೀಕೆಗಳ ಸುರಿಮಳೆಯನ್ನ ಎದುರಿಸಿದ್ರು. ಅದ್ಯಾವ ಮಟ್ಟಿಗೆ ಅಂದ್ರೆ ರೋಹಿತ್​​​​ ಶರ್ಮಾ ಆ್ಯಂಡ್ ಗ್ಯಾಂಗ್​​ ಅನ್ನ ದೇಶ-ವಿದೇಶಗಳಲ್ಲಿ ಫ್ಯಾನ್ಸ್​ ಹಾಗೂ ಕ್ರಿಕೆಟ್ ಎಕ್ಸ್​ಪರ್ಟ್ ಹುರಿದು ಮುಕ್ಕಿದ್ರು. ಆ ಮಟ್ಟಿಗೆ ಭಾರತ ತಂಡ ಪ್ರಮುಖ ಸರಣಿಗಳನ್ನ ಸೋತು ಜರ್ಝರಿತವಾಗಿತ್ತು.

ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ

ರಾಹುಲ್​ ದ್ರಾವಿಡ್​​​​​ ಟೀಮ್ ಇಂಡಿಯಾದ ಹೆಡ್​​ಮಾಸ್ಟರ್ ಆಗಿದ್ದೇ ಬಂತು. ಭಾರತಕ್ಕೆ ಬ್ಯಾಡ್​ಲಕ್ ವಕ್ಕರಿಸಿತ್ತು. ಆರಂಭಿಕ ಎರಡು ವರ್ಷ ಇದೆ ಕಥೆ. ಆ ಕಥೆ ಕೆಲವರಿಗೆ ಬೇಸರ ತರಿಸಿದ್ರೆ ಹಲವರಿಗೆ ಟೀಕೆಗಳ ಅಸ್ತ್ರವಾಯ್ತು. ಆಳಿಗೊಂದು ಕಲ್ಲು ಎನ್ನುವಂತೆ ಸಿಕ್ಕ ಸಿಕ್ಕವರೆಲ್ಲಾ ಕೋಚ್​ ದ್ರಾವಿಡ್ ವಿರುದ್ಧ ಟೀಕೆಗಳ ಬಾಣಸ್ತ್ರ ಪ್ರಯೋಗಿಸಿದ್ರು. ಅದಕ್ಕೆ ಕಾರಣ ಈ ಫೇಲ್ಯೂರ್​.

ಸೋಲಿನ ಪಾಠ

 • ಟಿ20 ವಿಶ್ವಕಪ್​​ ಅಭಿಯಾನ ಸೆಮಿಫೈನಲ್​​ನಲ್ಲಿ ಅಂತ್ಯ
 • ವಿಶ್ವಟೆಸ್ಟ್​ ಚಾಂಪಿಯನ್​​ ಫೈನಲ್​ ಕೈಚೆಲ್ಲಿದ ಭಾರತ
 • ಏಷ್ಯಾಕಪ್ ಟೂರ್ನಿ ಕ್ವಾರ್ಟರ್​ಫೈನಲ್​​ನಲ್ಲಿ ಸೋಲು
 • ದಕ್ಷಿಣ ಆಫ್ರಿಕಾ ವಿರುದ್ಧ ವೈಟ್​ವಾಶ್​​​ ಮುಖಭಂಗ
 • ದುರ್ಬಲ ಬಾಂಗ್ಲಾಗೆ ಶರಣಾದ ಟೀಮ್ ಇಂಡಿಯಾ
 • ಲಂಕಾ ಎದುರು ಟಿ20 ಸರಣಿ ಸೋತು ಮುಖಭಂಗ
 • ವೆಸ್ಟ್​ ಇಂಡೀಸ್​ ವಿರುದ್ಧ ಟಿ20 ಸರಣಿಯಲ್ಲಿ ಸೋಲು

ಕೋಚ್​ ಹುದ್ದೆಗೆ ದ್ರಾವಿಡ್​​​​ ಅನ್​ಫಿಟ್​​​.. ಬದಲಾವಣೆಗೆ ಆಗ್ರಹ..!

ಒಂದೆಡೆ ಸಾಲು ಸಾಲು ಸರಣಿಗಳನ್ನ ಸೋಲುತ್ತಿದ್ದಂತೆ ಆಕ್ರೋಶದ ಕಿಚ್ಚು ಹತ್ತಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ದ್ರಾವಿಡ್ ಕಾರ್ಯವೈಖರಿಯನ್ನೇ ಪ್ರಶ್ನಿಸೋಕೆ ಶುರುಮಾಡಿದ್ರು. ಹೆಡ್​ಕೋಚ್​ ಹುದ್ದೆಗೆ ದಿ ವಾಲ್ ಅನ್​ಫಿಟ್​​​​.. ಹುದ್ದೆಯಿಂದ ಅವರನ್ನ ಕೆಳಗಿಳಿಸಬೇಕು ಎಂದು ಖಾರವಾಗಿ ಟೀಕಿಸಿದ್ರು. ದ್ರಾವಿಡ್ ಜೊತೆ ಉಳಿದ ಸಪೋರ್ಟಿಂಗ್ ಸ್ಟಾಪ್ಸ್​​​​ ಕಾರ್ಯವೈಖರಿ ಅಭಿಮಾನಿಗಳನ್ನ ಕೆರಳಿ ಕೆಂಡವಾಗಿಸಿತ್ತು.

ವಿಶ್ವಕಪ್​​ ವರ್ಷದಲ್ಲಿ ಪ್ರಯೋಗ.. ಫ್ಯಾನ್ಸ್​ ಸಿಡಿಮಿಡಿ..!

ಒನ್ಡೆ ವಿಶ್ವಕಪ್​ ಸಮೀಪಿಸ್ತಿದ್ದಂತೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿದ್ವು. ಆದರೆ ದ್ರಾವಿಡ್​ ಸೈನ್ಯ ಎಕ್ಸ್​​ಪೆರಿಮೆಂಟ್​ನಲ್ಲೇ ಮುಳುಗಿ ಹೋಗಿತ್ತು. ಸೋಲಿನ ಕೋಪ ಒಂದೆಡೆ ಆದ್ರೆ ಬ್ಯಾಕ್ ಟು ಬ್ಯಾಕ್​​ ಪ್ಲೇಯರ್ಸ್​ ಪ್ರಯೋಗ ಕ್ರಿಕೆಟ್​ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿತ್ತು. ತಂಡದ ಮೇಲೆ ನಂಬಿಕೆ ಕಳೆದುಕೊಂಡ್ರು. ಇದೇನ್ ಟೀಮ್ ಇಂಡಿಯಾನಾ? ದುರ್ಬಲ ತಂಡದಂತೆ ಆಡ್ತಿದೆ ಎಂದೆಲ್ಲಾ ಜರಿಯಲು ಶುರುಮಾಡಿದ್ರು. ಇವರಿಗೆಲ್ಲಾ ಕೋಟಿ ಕೋಟಿ ನೀಡೋದು ದಂಡ ಅಂತೆಲ್ಲಾ ಮಾತನಾಡಿದ್ರು.

ಟೀಕೆಗಳ ಟಿಪ್ಪಣಿಗೆ ಕುಗ್ಗದ ‘ದ್ರೋಣಾಚಾರ್ಯ’

ಎಲ್ಲದಕ್ಕೂ ಟೈಮ್​​​​ ಅನ್ನೊದು ಬರ್ಬೇಕು.ಆ ಟೈಮ್​​ಗಾಗಿ ಕೋಚ್​ ರಾಹುಲ್​ ದ್ರಾವಿಡ್​​​​ ಕಾಯ್ತಿದ್ರು. ಅದುವೇ ಗ್ಲೋಬಲ್​ ಇವೆಂಟ್​ ಒನ್ಡೇ ವಿಶ್ವಕಪ್​​​. ಈ ಮಹಾಸಮರದಲ್ಲಿ ದಿ ವಾಲ್​ ತಾನೇನು, ತನ್ನ ತಾಕತ್ತೇನೂ ಅನ್ನೋದನ್ನ ಕ್ರಿಕೆಟ್​ ಜಗತ್ತಿಗೆ ತೋರಿಸಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಇಂಡಿಯನ್ ಕಲಿಗಳು ಜಬರ್ದಸ್ತ್​​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಬ್ಯಾಟಿಂಗ್​​​, ಬೌಲಿಂಗ್​​​ ಆ್ಯಂಡ್​ ಫೀಲ್ಡಿಂಗ್​​..ಮೂರರಲ್ಲೂ ಧೂಳೆಬ್ಬಿಸಿದ್ದಾರೆ. ಒಂದೂ ಸೋಲನ್ನೂ ಕಾಣದೇ ಫೈನಲ್​ ಪ್ರವೇಶಿಸಿದ್ದಾರೆ. ಇದರ ಹಿಂದಿನ ರಿಯಲ್​ ಸೂತ್ರದಾರಿ. ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್​ ದ್ರಾವಿಡ್​.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಂದು ಕೋಚ್​ ಹುದ್ದೆಗೆ ಅನ್​ಫಿಟ್ ಅಂದ್ರು​​​.. ಟೀಕೆ ಟಿಪ್ಪಣಿಗಳ ಮೆಟ್ಟಿ ನಿಂತ ‘ದ್ರೋಣಾಚಾರ್ಯ’ನ ರೋಚಕ ಕಥೆ..!

https://newsfirstlive.com/wp-content/uploads/2023/11/RAHUL_DRAVID-1.jpg

Load More