ಟೀಂ ಇಂಡಿಯಾ ಹೊಸ ಕೋಚ್‌ಗೆ ಬಿಗ್‌ ಸರ್​ಪ್ರೈಸ್​ ಕೊಟ್ಟ ರಾಹುಲ್‌ ದ್ರಾವಿಡ್​.. ಗಂಭೀರ್‌ ಹೇಳಿದ್ದೇನು?

author-image
Bheemappa
Updated On
ಟೀಂ ಇಂಡಿಯಾ ಹೊಸ ಕೋಚ್‌ಗೆ ಬಿಗ್‌ ಸರ್​ಪ್ರೈಸ್​ ಕೊಟ್ಟ ರಾಹುಲ್‌ ದ್ರಾವಿಡ್​.. ಗಂಭೀರ್‌ ಹೇಳಿದ್ದೇನು?
Advertisment
  • ರಾಹುಲ್ ದ್ರಾವಿಡ್ ಮಾತಾಡಿರೋ ವಿಡಿಯೋದಲ್ಲಿ ಅಂತದ್ದೇನಿದೆ?
  • ‘ಕಷ್ಟದ ಸಮಯ ಬಂದಾಗ ಗೌತಮ್ ಗಂಭೀರ್​ ಏಕಾಂಗಿ ಆಗಬಾರ್ದು’
  • ಹೊಸ ಕೋಚ್​ಗೆ ವಿಶೇಷ ಸಂದೇಶ ನೀಡಿದ ಮಾಜಿ ಮುಖ್ಯ ಕೋಚ್

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಗೌತಮ್ ಗಂಭೀರ್​​ ಅವರು ಭಾರತ ತಂಡದ ಮುಖ್ಯ ಕೋಚ್​ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಇದೇ ಮೊದಲ ಬಾರಿಗೆ ಕೋಚ್ ಹುದ್ದೆ ನಿರ್ವಹಿಸುತ್ತಿರುವ ಗೌತಮ್​ ಗಂಭೀರ್​ಗೆ ಮಾಜಿ ಕೋಚ್​, ಕನ್ನಡಿಗ ರಾಹುಲ್ ದ್ರಾವಿಡ್ ಅವರು ವಿಡಿಯೋ ಸಂದೇಶ ಕಳುಹಿಸಿ ಸರ್​ಪ್ರೈಸ್​ ನೀಡಿದ್ದಾರೆ.

ಇದನ್ನೂ ಓದಿ:ಮಾಜಿ MLA ಒತ್ತಡಕ್ಕೆ ಮಣಿದು ಟ್ರಾನ್ಸ್​ಫರ್? ಕುಂದಾಪುರ ದಕ್ಷ ಅಧಿಕಾರಿ ಎಸಿ ರಶ್ಮಿ ದಿಢೀರ್ ವರ್ಗಾವಣೆ; ಆಕ್ರೋಶ

publive-image

ಸದ್ಯ ಶ್ರೀಲಂಕಾದ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮೊದಲು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದೆ. ವಿಡಿಯೋದಲ್ಲಿ ರಾಹುಲ್​ ದ್ರಾವಿಡ್ ಅವರು ಗೌತಮ್​ ಅವರಿಗೆ ಪ್ರೋತ್ಸಾಹದ ಮಾತುಗಳು ಹಾಗೂ ಮುಂದಿನ ದಾರಿ ಹೇಗೆಲ್ಲ ಇರುತ್ತದೆ ಎಂಬುದರ ಕುರಿತು ಮನನ ಮಾಡಿದ್ದಾರೆ. ಟಿ20 ವರ್ಲ್ಡ್​​ಕಪ್ ಗೆದ್ದಾಗ ಬಾರ್ಬಡೋಸ್​ನಿಂದ ಪ್ರಾರಂಭವಾದ ಸಂಭ್ರಮ ಮುಂಬೈವರೆಗೆ ಹೇಗೆಲ್ಲ ಇತ್ತು ಎಂಬುದರ ಬಗ್ಗೆ ದ್ರಾವಿಡ್​ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ ರಾಡ್​ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!

ವಿಡಿಯೋದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅವರು, ಹಲೋ ಗೌತಮ್​, ವಿಶ್ವದ ಅತ್ಯಾಕರ್ಷಕ ಹುದ್ದೆಯಾದ ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಕೆಲಸಕ್ಕೆ ನಿಮಗೆ ಸ್ವಾಗತ. ಕಳೆದ 3 ವಾರಗಳ ಹಿಂದೆ ನನ್ನ ಕನಸನ್ನು ಮೀರಿದ ಜೀವನವನ್ನು ಭಾರತ ತಂಡದೊಂದಿಗೆ ಕಳೆದಿದ್ದೇನೆ. ಬಾರ್ಬಡೋಸ್ ಹಾಗೂ ಮುಂಬೈನಲ್ಲಿ ಮರೆಯಲಾರದ ಕ್ಷಣಗಳನ್ನು ಕಳೆದಿದ್ದೇನೆ. ತಂಡದ ಆಟಗಾರರೊಂದಿಗೆ ನನ್ನ ಸಮಯದಲ್ಲಿ ಮಾಡಿದ ನೆನಪು, ಸ್ನೇಹವನ್ನು ನಿಧಿಯಾಗಿ ಇಡುತ್ತೇನೆ. ಭಾರತ ತಂಡದ ಮುಖ್ಯ ಕೋಚ್ ಆದ ನಿಮಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.

ಇದನ್ನೂ ಓದಿ: KRSನಿಂದ ಭಾರೀ ಮಟ್ಟದ ನೀರು ಬಿಡುಗಡೆ, ಕಾವೇರಿಯಿಂದ ಅಪಾಯ.. ವಿವೇಕಾನಂದ ಆಶ್ರಮ ಜಲಾವೃತ


">July 27, 2024

ಟೀಮ್​ನ ಕೋಚ್ ಆದ ಮೇಲೆ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಕಷ್ಟದ ಸಮಯಗಳು ಬಂದಾಗ ನೀವು ಏಕಾಂಗಿಯಾಗಲ್ಲ. ಏಕೆಂದರೆ ಪ್ಲೇಯರ್ಸ್​, ಹಿಂದಿನ ನಾಯಕರು ಹಾಗೂ ಸಿಬ್ಬಂದಿಯಿಂದ ಬೆಂಬಲ ಸಿಗುತ್ತದೆ. ನೀವು ಯಾರಿಗಾಗಿ ಆ ಹುದ್ದೆ ನಿರ್ವಹಿಸುತ್ತೀರಿ ಎಂಬುದನ್ನು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ನಿಮ್ಮ ಮೇಲೆ ಅಭಿಮಾನಿಳು ಕೂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಕಠಿಣ ಸಂದರ್ಭಗಳು ಬಂದಾಗ ಎಲ್ಲವನ್ನು ಎದುರಿಸಿ ಹಿಂದೆಜ್ಜೆ ಇಡಬೇಕಾಗುತ್ತೆ. ಆಗ ಕಷ್ಟವಾಗುತ್ತದೆ. ಆದರೂ ಇದು ತಪ್ಪಿದ್ದಲ್ಲ. ಜನರಿಗೆ ಶಾಕ್ ಆಗುವಂಥ ಸಣ್ಣದಾದ ಸ್ಮೈಲ್​ ನೀವು ನೀಡಬೇಕು. ನಿಮಗೆ ಶುಭಾಶಯಗಳನ್ನು ತಿಳಿಸುತ್ತ, ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಇನ್ನಷ್ಟು ಶ್ರೇಷ್ಠ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತೀರಿ ಎಂದು ಭಾವಿಸುತ್ತೇನೆ ಎಂದು ರಾಹುಲ್ ದ್ರಾವಿಡ್ ಅವರು ಗೌತಮ್ ಗಂಭೀರ್ ಕುರಿತು ಹೇಳಿದ್ದಾರೆ. ಸದ್ಯ ಇದೆಲ್ಲವನ್ನೂ ಕೇಳಿದ ಗೌತಮ್ ಗಂಭೀರ್ ಅವರು ಭಾವುಕದಿಂದ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment