ಮುಖ್ಯ ಕೋಚ್ ಸ್ಥಾನಕ್ಕಾಗಿ ದಿಗ್ಗಜರ ನಡುವೆ ದೊಡ್ಡ ಪೈಪೋಟಿ
ಮ್ಯಾಥ್ಯೂವ್ ಮೋಟ್ ಕೊಕ್ ಕೊಟ್ಟು ರಾಹುಲ್ ದ್ರಾವಿಡ್ಗೆ ಗಾಳ
ಚಾಂಪಿಯನ್ ಕೋಚ್ ದ್ರಾವಿಡ್ಗೆ ಆಫರ್ಗಳ ಮೇಲೆ ಆಫರ್!
ಚಾಂಪಿಯನ್ ಕೋಚ್ ರಾಹುಲ್ ದ್ರಾವಿಡ್ಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಒಂದರ ಹಿಂದೆ ಮತ್ತೊಂದು ಆಫರ್, ದಿ ವಾಲ್ರನ್ನ ಹುಡುಕಿ ಬರ್ತಿವೆ. ಇದ್ರಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಅಂತ ಭಾರತ ತಂಡದ ಮಾಜಿ ಕೋಚ್ಗೆ ಗೊಂದಲ ಶುರುವಾಗಿದೆ. ಅಷ್ಟಕ್ಕೂ ದ್ರಾವಿಡ್ಗೆ ಬಂದಿರೋ ಹೊಸ ಆಫರ್ ಯಾವುದು?.
‘ನಿರುದ್ಯೋಗಿ’ ವಾಲ್ಗೆ 2 ಆಫರ್..! ದ್ರಾವಿಡ್ ಆಯ್ಕೆ ಯಾವುದು..?
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದೇ ಬಂತು. ದಿ ವಾಲ್ ಅದೃಷ್ಟವೇ ಬದಲಾಗಿದೆ. ಒಂದರ ಹಿಂದೆ ಒಂದು ಆಫರ್ ಅವರನ್ನ ಹುಡುಕಿಕೊಂಡು ಬರ್ತಿವೆ. ಮುಂದಿನ ಐಪಿಎಲ್ ಸೀಸನ್ನಲ್ಲಿ ಪ್ರಮುಖ ತಂಡವೊಂದರ ಹೆಡ್ಕೋಚ್ ಆಗ್ತಾರೆ ಅನ್ನು ಸುದ್ದಿ ಹರಿದಾಡ್ತಿರೋವಾಗಲೇ ಚಾಂಪಿಯನ್ ಕೋಚ್ಗೆ ಇದೀಗ ಮತ್ತೊಂದು ದೊಡ್ಡ ಆಫರ್ ಬಂದಿದೆ.
ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್ ಸಿಟಿ ಎಷ್ಟು ಸೇಫ್?
ಇಂಗ್ಲೆಂಡ್ ಕೋಚ್ ಆಗುವಂತೆ ದ್ರಾವಿಡ್ಗೆ ಆಹ್ವಾನ..!
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ತಾನು ಇನ್ಮುಂದೆ ನಿರುದ್ಯೋಗಿ ಅಂದಿದ್ದ ಲೆಜೆಂಡ್ರಿ ರಾಹುಲ್ಗೆ ಇಂಗ್ಲೆಂಡ್ ತಂಡದ ಹೆಡ್ಕೋಚ್ ಆಫರ್ ಅರಸಿ ಬಂದಿದೆ. ಟಿ20 ವಿಶ್ವಕಪ್ ಹಾಗೂ ಒನ್ಡೆ ವಿಶ್ವಕಪ್ ಫೇಲ್ಯೂರ್ ಬೆನ್ನಲ್ಲೆ ECB ವೈಟ್ ಬಾಲ್ ಹೆಡ್ಕೋಚ್ ಮ್ಯಾಥ್ಯೂವ್ ಮೋಟ್ರನ್ನ ಕೆಳಗಿಳಿಸಿದೆ. ಇವರ ಬದಲಿಗೆ ಚಾಂಪಿಯನ್ ಕೋಚ್ ದ್ರಾವಿಡ್ರನ್ನ ನೇಮಿಸಿಕೊಳ್ಳಲು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಪ್ಲಾನ್ ಮಾಡಿದೆ.
ಈ ನಡುವಲ್ಲೆ ಮಾಜಿ ಚಾಂಪಿಯನ್ ಕ್ಯಾಪ್ಟನ್ ಇಯಾನ್ ಮಾರ್ಗನ್, ಕೂಡ ರಾಹುಲ್ ದ್ರಾವಿಡ್ ಇಂಗ್ಲೆಂಡ್ ತಂಡದ ವೈಲ್ಬಾಲ್ ಕೋಚ್ ಆದ್ರೆ, ಬೆಸ್ಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದ್ರಾವಿಡ್ ತಂಡಕ್ಕೆ ಸೂಕ್ತ ಎಂದು ಮಾರ್ಗನ್ ಹೇಳಿದ್ದಾರೆ.
ಇಂಗ್ಲೆಂಡ್ ಕೋಚ್ ಆಗಲು ದಿಗ್ಗಜರಿಂದ ಪೈಪೋಟಿ..!
ಸದ್ಯ ಇಯಾನ್ ಮಾರ್ಗನ್ ಏನೋ ಇಂಗ್ಲೆಂಡ್ ತಂಡದ ಕೋಚ್ ಆಗಲು ರಾಹುಲ್ ದ್ರಾವಿಡ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಇಂಗ್ಲೆಂಡ್ ತಂಡದ ಹೆಡ್ಕೋಚ್ ಹುದ್ದೆಗೇರುವುದು ಸುಲಭವಿಲ್ಲ. ಯಾಕಂದ್ರೆ ಈ ಸಿಂಹಾಸನದ ಪಟ್ಟಕ್ಕೆ ದಿಗ್ಗಜರ ನಡುವೆ ಪೈಪೋಟಿ ಏರ್ಪಟ್ಟಿದೆ. ದ್ರಾವಿಡ್ ಸೇರಿದಂತೆ ಸ್ಟೀಫನ್ ಪ್ಲೇಮಿಂಗ್, ರಿಕಿ ಪಾಂಟಿಂಗ್ ಹಾಗೂ ಕುಮಾರ್ ಸಂಗಕ್ಕಾರ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ದ್ರಾವಿಡ್ ಮುಂದಿದೆ ರಾಜಸ್ಥಾನದ ಹೆಡ್ ಕೋಚ್ ಆಫರ್..!
ದ್ರಾವಿಡ್ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಗಾಳ ಹಾಕಿದೆ. 18ನೇ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ ತಂಡದ ಹೆಡ್ಕೋಚ್ ಆಗುವಂತೆ ಆಫರ್ ಕೊಟ್ಟಿದೆ. ಈ ಬಗ್ಗೆ ದ್ರಾವಿಡ್ ಜೊತೆ ಮಾತುಕತೆ ನಡೆದಿದೆ. ಆದ್ರೆ, ನಿರ್ಧಾರ ಮಾತ್ರ ಸಸ್ಪೆನ್ಸ್ ಆಗುಳಿದಿದೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ಕುತೂಹಲ ಹುಟ್ಟಿಸಿದ ರಾಹುಲ್ ದ್ರಾವಿಡ್ ಆಯ್ಕೆ.!
ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ಕೋಚ್ ಆಗ್ತಾರೆ ಅನ್ನುವ ಹೊತ್ತಲ್ಲೆ, ದ್ರಾವಿಡ್ಗೆ ಇಂಗ್ಲೆಂಡ್ ತಂಡದ ಕೋಚ್ ಆಫರ್ ಬೇರೆ ಬಂದಿದೆ. ಅಲ್ಲಿಗೆ ದ್ರಾವಿಡ್ರನ್ನ ಹುಡುಕಿ ಬಂದ ಕೋಚ್ ಆಫರ್ಗಳ ಸಂಖ್ಯೆ ಎರಡಕ್ಕೇರಿದೆ. ಆದರೆ ಇದ್ರಲ್ಲಿ ದಿ ವಾಲ್ರ ಮೊದಲ ಆಯ್ಕೆ ಯಾವುದಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಫ್ಯಾಮಿಲಿಗೆ ಹೆಚ್ಚು ಸಮಯ ಕೊಡಬೇಕು ಅನ್ನೋ ಕಾರಣಕ್ಕೆ ಟೀಮ್ ಇಂಡಿಯಾ ಕೋಚ್ ಹುದ್ದೆಯಲ್ಲಿ ದ್ರಾವಿಡ್ ಮುಂದುವರಿದಿಲ್ಲ. ಐಪಿಎಲ್ ಕೋಚ್ ಆದ್ರೆ 2 ತಿಂಗಳು ಮಾತ್ರ ಕೆಲಸ ಇರುತ್ತೆ. ಬಳಿಕ ಫ್ಯಾಮಿಲಿ ಜೊತೆ ಸಮಯ ಕಳೆಯಬಹುದು. ಹೀಗಾಗಿ ಇಂಗ್ಲೆಂಡ್ ಕೋಚ್ ಆಗುವ ಸಾಧ್ಯತೆ ಕಮ್ಮಿ. ಆದ್ರೂ, ಅಚ್ಚರಿಯ ನಿರ್ಧಾರ ತೆಗದುಕೊಳ್ಳುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ