newsfirstkannada.com

‘ನನ್ನ ಆಟ ದ್ರಾವಿಡ್ ಮುಂದೆ ನಡೆಯುತ್ತಿರಲಿಲ್ಲ’- ಕನ್ನಡಿಗನ ಬಗ್ಗೆ ಶೋಯೆಬ್ ಅಖ್ತರ್‌ ಶಾಕಿಂಗ್ ಹೇಳಿಕೆ

Share :

Published January 12, 2024 at 12:09pm

    ಗಂಟೆಗೆ ಸರಿ ಸುಮಾರು​ 160 ಕಿ.ಮೀ ​ವೇಗದಲ್ಲಿ ಅಖ್ತರ್ ಬೌಲಿಂಗ್

    ನನ್ನಾಟ ದ್ರಾವಿಡ್ ಮುಂದೆ ನಡೆಯುತ್ತಿರಲಿಲ್ಲ- ಪಾಕ್ ಮಾಜಿ ಪ್ಲೇಯರ್

    ವಿಶ್ವದ ಹಲವು ಬ್ಯಾಟ್ಸ್​ಮನ್​ಗಳಿಗೆ ಸಿಂಹಸ್ವಪ್ನವಾಗಿದ್ದ ಶೋಯೆಬ್

ವಿಶ್ವದ ಅತಿ ವೇಗದ ಬೌಲರ್​ ಆಗಿ ಮೆರೆದಾಡಿದ್ದ ಶೋಯೆಬ್​ ಅಖ್ತರ್,​ ತನ್ನ ಬೆಂಕಿಯುಂಡ ಎಸೆತಗಳಿಂದ ಬ್ಯಾಟ್ಸ್​ಮನ್​​ಗಳನ್ನ ಕಂಗೆಡಿಸಿದ್ರು. ಆದ್ರೆ ನಮ್ಮ ಹೆಮ್ಮೆಯ ಕನ್ನಡಿಗನ ಎದುರು ಮಾತ್ರ ಮಂಡಿಯೂರಿದ್ರು. ಅಖ್ತರ್​ಗೇ ದುಸ್ವಪ್ನವಾಗಿ ಕಾಡಿದ ಕನ್ನಡಿಗ ಯಾರು?

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಹೆಸರನ್ನ ಕೇಳಿದ್ರೆ ಈಗಲೂ ಹಲವು ಬ್ಯಾಟ್ಸ್​ಮನ್​ಗಳು ಬೆಚ್ಚಿ ಬೀಳ್ತಾರೆ. ಘಂಟೆಗೆ ಸರಿ ಸುಮಾರು​ 160 ಕಿಲೋ ಮೀಟರ್​ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ದ ಶೋಯೆಬ್​ ಅಖ್ತರ್​ ಬೆಂಕಿ, ಬಿರುಗಾಳಿ ಎಸೆತಗಳನ್ನ ಎದುರಿಸಲಾಗದೇ ಅದೆಷ್ಟೋ ಬ್ಯಾಟ್ಸ್​ಮನ್​ಗಳು ಪರದಾಡಿದ್ದಾರೆ. ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್​ ದ್ರಾವಿಡ್​​ ಒಬ್ಬರನ್ನ ಬಿಟ್ಟು.

ಶೋಯೆಬ್​ ಅಖ್ತರ್​ ವಿಶ್ವದ ಹಲವು ಬ್ಯಾಟ್ಸ್​ಮನ್​ಗಳನ್ನ ಸಿಂಹಸ್ವಪ್ನದಂತೆ ಕಾಡಿದ್ರು. ಆದ್ರೆ, ದಿ ವಾಲ್​ ದ್ರಾವಿಡ್​​, ಟೆಸ್ಟ್​ ಕ್ರಿಕೆಟ್​ನಲ್ಲಿ ಅಖ್ತರ್​​ರನ್ನೇ ದುಸ್ವಪ್ನವಾಗಿ ಕಾಡಿದ್ರಂತೆ. ಪೇಸ್​​ VS ಪೇಶನ್ಸ್​ ನಡುವಿನ ಕಾಳಗದಲ್ಲಿ ದ್ರಾವಿಡ್​​ರದ್ದೇ ಮೇಲುಗೈ. ಸರಿ ಸುಮಾರು ಬೌಂಡರಿ ಲೈನ್​ ಬಳಿಯಿಂದಲೇ ಓಡಿ ಬಂದು, ಅತೀ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ದ ಅಖ್ತರ್​ ಎಸೆತಗಳನ್ನ ದ್ರಾವಿಡ್​, ಸಿಂಪಲ್​ ಆಗಿ ಡಿಫೆಂಡ್​ ಮಾಡ್ತಿದ್ರು.

ಈ ಬಗ್ಗೆ ಮಾತನಾಡಿರೋ ಅಖ್ತರ್​ ದ್ರಾವಿಡ್​​ ಮಾನಸಿಕವಾಗಿ ಕೊಲ್ಲುತ್ತಿದ್ರು ಎಂದಿದ್ದಾರೆ. ದ್ರಾವಿಡ್​ಗೆ ಬೌಲಿಂಗ್​ ಮಾಡಿದಾಗಲೆಲ್ಲ ಬೋರ್​ ಆಗ್ತಿತ್ತು. ನನ್ನ ಕಾಡಿದ ಮೊದಲ ಬ್ಯಾಟ್ಸ್​ಮನ್​ ಅವರು. ದ್ರಾವಿಡ್​ ಬ್ಯಾಟಿಂಗ್​ ಬಂದಾಗಲೆಲ್ಲ ಇನ್ನೆರೆಡು ಸೆಷನ್​ ಫೀಲ್ಡ್​ ಮಾಡಲು ರೆಡಿಯಾಗ್ತಿದ್ದೆ ಎಂದು ಅಖ್ತರ್​ ಹೇಳಿ ಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನನ್ನ ಆಟ ದ್ರಾವಿಡ್ ಮುಂದೆ ನಡೆಯುತ್ತಿರಲಿಲ್ಲ’- ಕನ್ನಡಿಗನ ಬಗ್ಗೆ ಶೋಯೆಬ್ ಅಖ್ತರ್‌ ಶಾಕಿಂಗ್ ಹೇಳಿಕೆ

https://newsfirstlive.com/wp-content/uploads/2024/01/RAHUL_DRAVID-2.jpg

Load More