IPLನಲ್ಲಿ ರಾಹುಲ್ ದ್ರಾವಿಡ್ ದರ್ಬಾರ್ ಶುರು..!
ದಿ ವಾಲ್ ಜೊತೆ ಫ್ರಾಂಚೈಸಿ ಮಾತುಕತೆ ಅಂತಿಮ
ಶೀಘ್ರದಲ್ಲೆ ಹೆಡ್ಕೋಚ್ ಆಗಿ ಅಧಿಕೃತ ಘೋಷಣೆ
ಟೀಮ್ ಇಂಡಿಯಾ ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ ರಾಹುಲ್ ದ್ರಾವಿಡ್ ಮತ್ತೆ ಕೋಚ್ ಹುದ್ದೆಗೇರಲು ಸಜ್ಜಾಗಿದ್ದಾರೆ. ಐಪಿಎಲ್ನಲ್ಲಿ ದಿ ವಾಲ್ರನ್ನ ಮತ್ತೆ ನೀವು ಕಣ್ತುಂಬಿಕೊಳ್ಳಬಹುದು. ದ್ರಾವಿಡ್ ಫ್ರಾಂಚೈಸಿಯೊಂದರ ಹೆಡ್ಕೋಚ್ ಆಗೋದು ಬಹುತೇಕ ಫೈನಲ್ ಆಗಿದೆ.
2025 ರ ಐಪಿಎಲ್ ಟೂರ್ನಿಗೆ ಇನ್ನು ಸಾಕಷ್ಟು ಸಮಯವಿದೆ. ಈಗಿನಿಂದಲೇ ಮಿಲಿಯನ್ ಡಾಲರ್ ಟೂರ್ನಿಗೆ ಸಂಬಂಧಿಸಿದ ಸುದ್ದಿಗಳು ಸಖತ್ ಸದ್ದು ಮಾಡ್ತಿವೆ. ಮೆಗಾ ಆಕ್ಷನ್ಗೂ ಮೊದಲೇ ಆಟಗಾರರ ರಿಟೇನ್-ರಿಲೀಸ್ ಲೆಕ್ಕಾಚಾರಗಳು ಆರಂಭವಾಗಿವೆ. ಇದ್ರ ನಡುವೆ ಟೀಮ್ ಇಂಡಿಯಾದ ಮಾಜಿ ಹೆಡ್ಕೋಚ್ ರಾಹುಲ್ ಕುರಿತ ಬಿಗ್ ಅಪ್ಡೇಟ್ ನ್ಯೂಸ್ ಹೊರ ಬಿದ್ದಿದೆ.
ಇದನ್ನೂ ಓದಿ:ಮದುವೆಯಾದ ಮೇಲೂ ಮಾಜಿ ಪ್ರೇಯಸಿ ಜೊತೆ ಸಂಬಂಧ.. ಪತ್ನಿ ವಿರೋಧಿಸಿದಾಗ ಈ ಹೆಜ್ಜೆ ಇಟ್ಟ..!
ಕೆಕೆಆರ್ಗೆ ಶಾಕ್..!
ಟಿ20 ವಿಶ್ವಕಪ್ ಗೆಲುವಿನೊಂದಿಗೆ ಲೆಜೆಂಡ್ರಿ ರಾಹುಲ್ ದ್ರಾವಿಡ್ ಅವರ ಟೀಮ್ ಇಂಡಿಯಾ ಜೊತೆಗಿನ ಕೋಚ್ ಅವಧಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ದ್ರಾವಿಡ್ ಐಪಿಎಲ್ ಕೋಚ್ ಆಗ್ತಾರೆ ಅನ್ನೋ ರೂಮರ್ಸ್ ಹಬ್ಬಿತ್ತು. ಇದೀಗ ಆ ರೂಮರ್ಸ್ ನಿಜವಾಗಿದೆ. ವಿಶ್ವಕ್ರಿಕೆಟ್ನ ಸಾರ್ವಕಾಲಿಕ ಬ್ಯಾಟ್ಸ್ಮನ್ ಮತ್ತೆ ಐಪಿಎಲ್ನತ್ತ ಮುಖ ಮಾಡಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಹೆಡ್ಕೋಚ್ ಆಗಿ ದರ್ಬಾರ್ ನಡೆಸೋದು ಬಹುತೇಕ ಫೈನಲ್ ಆಗಿದೆ.
ಕಲರ್ಫುಲ್ ಟೂರ್ನಿಯಲ್ಲಿ ದ್ರಾವಿಡ್ ಕೋಚಿಂಗ್ ಮ್ಯಾಜಿಕ್ ಮತ್ತೆ ಶುರುವಾಗಲಿದೆ. ದಿ ವಾಲ್ರನ್ನ ಕೋಚ್ ಆಗಿ ನೇಮಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಬೆನ್ನು ಬಿದ್ದಿದ್ವು. ಆ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ಮುಂಚೂಣಿಯಲ್ಲಿತ್ತು. ಆದ್ರೀಗ ಕೆಕೆಆರ್ಗೆ ಶಾಕ್ ಕೊಟ್ಟಿರೋ ರಾಹುಲ್ ದ್ರಾವಿಡ್ ಮರಳಿ ರಾಜಸ್ಥಾನ ರಾಯಲ್ಸ್ ಸೇರಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್.. ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ
ಮಾತುಕತೆ ಫೈನಲ್..
ಟೀಮ್ ಇಂಡಿಯಾ ಮಾಜಿ ಕೋಚ್ ದ್ರಾವಿಡ್ ರಾಜಸ್ಥಾನ ತಂಡ ಸೇರ್ಪಡೆಗೊಳ್ಳುವ ವಿಚಾರವಾಗಿ ಮಾತುಕತೆ ಫೈನಲ್ ಆಗಿದೆ. ದಿ ವಾಲ್ ಕೂಡ ರಾಜಸ್ಥಾನ ಪರ ಹೆಡ್ಕೋಚ್ ಆಗಿ ಕಾರ್ಯ ನಿರ್ವಹಿಸಲು ಒಪ್ಪಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದ್ದು, ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ ಎಂದು ವರದಿಯಾಗಿದೆ.
ರಾಜಸ್ಥಾನದ ಜೊತೆ ದ್ರಾವಿಡ್ ಸುದೀರ್ಘ ಸಂಬಂಧ..!
ರಾಹುಲ್ ದ್ರಾವಿಡ್ ರಾಜಸ್ಥಾನದ ಕೋಚ್ ಆಗೋದು ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಅದು ನಿಜವಾಗಿದ್ದೆ ಆದ್ರೆ ದಿ ವಾಲ್ ಒಂಬತ್ತು ವರ್ಷಗಳ ನಂತರ ಗೂಡಿಗೆ ಮರಳಿದಂತಾಗಲಿದೆ. ದ್ರಾವಿಡ್ ರಾಜಸ್ಥಾನ ಫ್ರಾಂಚೈಸಿ ಜೊತೆ ಸುದೀರ್ಘ ಸಂಬಂಧ ಹೊಂದಿದ್ದಾರೆ. 2011ರಲ್ಲಿ ಆರ್ಸಿಬಿ ತಂಡ ತೊರೆದು ರಾಜಸ್ಥಾನ ಸೇರಿಕೊಂಡಿದ್ರು. ನಾಯಕನಾಗಿ 2013 ರಲ್ಲಿ ತಂಡವನ್ನ ಪ್ಲೇ ಆಫ್ ಗೇರಿಸಿದ್ರು. ಬಳಿಕ 2014 ಹಾಗೂ 2015 ರಲ್ಲಿ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಸಂಗಾಕ್ಕರ ಕಥೆ ಏನು..?
ದ್ರಾವಿಡ್ ರಾಜಸ್ಥಾನ ಹೆಡ್ಕೋಚ್ ಆದ್ರೆ ಫ್ರಾಂಚೈಸಿಗೆ ದೊಡ್ಡ ಬಲ ಬರುವುದು ನಿಜ. ಆದ್ರೆ ಕುಮಾರ್ ಸಂಗಾಕ್ಕರ ಕತೆ ಏನು ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ 2021 ರಿಂದ ಸಂಗಾಕ್ಕರ ರಾಜಸ್ಥಾನ ತಂಡದ ಹೆಡ್ಕೋಚ್ ಹಾಗೂ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿದ್ದಾರೆ. ದ್ರಾವಿಡ್ ಆಗಮಿಸಿದ್ರೆ ಸಂಗಾಕ್ಕರ ಹೆಡ್ ಕೋಚ್ ಹುದ್ದೆಯನ್ನ ತ್ಯಜಿಸೋ ಸಾಧ್ಯತೆ ಇದೆ. ಫ್ರಾಂಚೈಸಿಯ ವಿಶ್ವದ ಹಲವು ಲೀಗ್ಗಳಲ್ಲಿ ತಂಡವನ್ನ ಹೊಂದಿರೋದ್ರಿಂದ, ಸಂಗಾಕ್ಕರ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ:ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ
ಒಟ್ಟಿನಲ್ಲಿ ಚಾಂಪಿಯನ್ ಕೋಚ್ ದ್ರಾವಿಡ್ ಟೀಮ್ ಇಂಡಿಯಾ ಬಳಿಕ ಐಪಿಎಲ್ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳೋ ಸಾಧ್ಯತೆಯಿದ್ದು ಕನ್ನಡದ ಕಲಿಗೆ ಆಲ್ ದಿ ಬೆಸ್ಟ್.!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್