Advertisment

ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ.. 10 ವರ್ಷದ ಬಳಿಕ ಲೋಕಸಭೆಗೆ ಅಧಿಕೃತ ವಿಪಕ್ಷ ನಾಯಕ!

author-image
Bheemappa
Updated On
ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ.. 10 ವರ್ಷದ ಬಳಿಕ ಲೋಕಸಭೆಗೆ ಅಧಿಕೃತ ವಿಪಕ್ಷ ನಾಯಕ!
Advertisment
  • ಎನ್‌ಡಿಎ ವಿರುದ್ಧದ ಹೋರಾಟಕ್ಕೆ ಇಳಿದ ಸಂಸದ ರಾಹುಲ್ ಗಾಂಧಿ
  • ಈ ಹುದ್ದೆ ಕಾಂಗ್ರೆಸ್​ ನಾಯಕನಿಗೆ ಹೂವಿನ ಹಾಸಿಗೆ ಅಲ್ಲ..!
  • ಈ ಅವಕಾಶವನ್ನು ರಾಹುಲ್ ಗಾಂಧಿ ಯಾವ ರೀತಿ ಬಳಸಿಕೊಳ್ತಾರೆ?

ಈ ಬಾರಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವರ್ಸಸ್​ ರಾಹುಲ್ ಗಾಂಧಿ ಕಾಳಗ ಫಿಕ್ಸ್​ ಆಗಿದೆ. ನಾ ಒಲ್ಲೆ ನಾ ಒಲ್ಲೆ ಅಂತಾನೇ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಈಗ ವಿಪಕ್ಷಗಳ ಸಾರಥಿಯಾಗೋಕೆ ಒಪ್ಪಿದ್ದಾರೆ. ಅಧಿಕೃತ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆಯಾಗಿದ್ದಾರೆ. ಆದ್ರೆ ಈ ಹುದ್ದೆ ರಾಗಾಗೆ ಹೂವಿನ ಹಾಸಿಗೆ ಆಗಿಲ್ಲ.

Advertisment

2014 ಹಾಗೂ 2019ರಲ್ಲಿ ಹೀನಾಯ ಪ್ರದರ್ಶನ ಕಂಡಿದ್ದ ಹಸ್ತ ಪಡೆ 2024ರ ಲೋಕಸಭೆ ಚುನಾವಣೆಯಲ್ಲಿ ಪುಟಿದೆದ್ದಿದೆ. ಶತಾಯಗತಾಯ ಪ್ರಧಾನಿ ಮೋದಿಯನ್ನು ಸೋಲಿಸಲೇಬೇಕೆಂದು ಮಿತ್ರರನ್ನೆಲ್ಲ ಒಗ್ಗೂಡಿಸಿ ಇಂಡಿಯಾ ಮೈತ್ರಿಕೂಟವೆಂದು ಲೋಕಸಮರದ ರಣಭೂಮಿಗೆ ಇಳಿದಿದ್ದ ಹಸ್ತ ಪಡೆ ಬಹುಮತ ಪಡೆಯದಿದ್ರೂ ಕಳೆದೆರಡು ಬಾರಿಗಿಂತ ಉತ್ತಮ ಸಾಧನೆ ಮಾಡಿದೆ. ಇದೇ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕರು ಈಗ ಎನ್‌ಡಿಎ ವಿರುದ್ಧದ ಹೋರಾಟ ತೀವ್ರಗೊಳಿಸುವ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

publive-image

ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್​ ಗಾಂಧಿ ಆಯ್ಕೆ

ಹೊಸ ಸಂಸತ್‌ ಭವನದಲ್ಲಿ ಪ್ರಧಾನಿ ಮೋದಿ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯ ಅಧಿಕೃತ ವಿಪಕ್ಷ ನಾಯಕರಾಗಿ ಆಯ್ಕೆ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆ ಹಾಗೂ ನ್ಯಾಯ್ ಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸಿ ಕಾಂಗ್ರೆಸ್​ ಪಕ್ಷಕ್ಕೆ ಬಲ ತುಂಬಿದ್ದರು. ಈ ಹಿನ್ನೆಲೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅತ್ಯುತ್ತಮ ಸಾಧನೆ ಮಾಡಿದೆ. ಕಾಂಗ್ರೆಸ್​ 99 ಸೀಟು ಗೆದ್ದು ಹೆಚ್ಚಿನ ಸ್ಥಾನ ಗಳಿಸಿದೆ. ಹೀಗಾಗಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿಯೇ ಆಗಬೇಕೆಂದು ಕಾಂಗ್ರೆಸ್‌ ನಾಯಕರು ಆಗ್ರಹ ಮಾಡಿದ್ದರು. ಆದರೆ ರಾಹುಲ್‌ ಗಾಂಧಿ ಕಡೆಯಿಂದ ಯಾವುದೇ ಅಂತಿಮ ತೀರ್ಮಾನ ಬಂದಿರಲಿಲ್ಲ. ಈಗ ರಾಹುಲ್‌ ಗಾಂಧಿ ವಿಪಕ್ಷ ನಾಯಕನ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ.

ಇಂಡಿಯಾ ಒಕ್ಕೂಟ ನಾಯಕರ ಸಭೆಯಲ್ಲಿ ನಿರ್ಧಾರ

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದು, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಇಂಡಿಯಾ ಒಕ್ಕೂಟ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿಯನ್ನು ಲೋಕಸಭೆಯಲ್ಲಿ ವಿಪಕ್ಷ ನಾಯಕರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್​ಗೆ ಪತ್ರ ಬರೆದಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯನ್ನು ನೇಮಕ ಮಾಡುವ ನಿರ್ಧಾರ ತಿಳಿಸಿದ್ದಾರೆ.

Advertisment

ಲೋಕಸಭೆಯಲ್ಲಿ ಮೋದಿ vs ರಾಹುಲ್ ಫೈಟ್‌ ಫಿಕ್ಸ್

ಇನ್ನು ಲೋಕಸಭೆಯಲ್ಲಿ ಇನ್ಮುಂದೆ ಮೋದಿ ವರ್ಸಸ್ ರಾಹುಲ್ ಗಾಂಧಿ ಫೈಟ್‌ ಫಿಕ್ಸ್ ಆಗಿದೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗಲು ರಾಹುಲ್ ಗಾಂಧಿ ಸಂವಿಧಾನ ಪ್ರತಿಯನ್ನು ಪ್ರದರ್ಶನ ಮಾಡಿದ್ದರು.

publive-image

10 ವರ್ಷದ ಬಳಿಕ ಅಧಿಕೃತ ವಿಪಕ್ಷ ನಾಯಕ!

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 99 ಸ್ಥಾನ ಗೆದ್ದಿದ್ದು ಒಂದು ದಾಖಲೆಯಾದ್ರೆ, ರಾಹುಲ್ ಗಾಂಧಿ ವಿರೋಧ ಪಕ್ಷ ನಾಯಕನಾಗಿರೋದು ಮತ್ತೊಂದು ದಾಖಲೆಯಾಗಿದೆ. ಈ ಹಿಂದಿನ 2014 ಹಾಗೂ 2019ರ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಅಧಿಕೃತ ವಿರೋಧ ಪಕ್ಷವಾಗುವ ಸಂಖ್ಯಾಬಲ ಪಡೆದಿರಲಿಲ್ಲ. ಇದೀಗ ಕಾಂಗ್ರೆಸ್ ಏಕಾಂಗಿಯಾಗಿ 99 ಸ್ಥಾನ ಗೆದ್ದಿದ್ದರಿಂದ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ‌ ಸಿಕ್ಕಿದೆ. ಲೋಕಸಭಾ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆ ರಾಹುಲ್ ಗಾಂಧಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕಣ್ಣೀರಿಟ್ಟ ಹೆತ್ತವರಿಗೆ ಸಿಎಂ ನ್ಯಾಯದ ಭರವಸೆ; ಏನಂದ್ರು?

Advertisment

ಇನ್ನು ಕಾಂಗ್ರೆಸ್‌ಗೆ ಅಧಿಕೃತ ವಿಪಕ್ಷ ಸ್ಥಾನವಿದ್ದರೂ ವಿಪಕ್ಷ ನಾಯಕನ ಆಯ್ಕೆ ಸಂದರ್ಭದಲ್ಲೂ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇಂಡಿಯಾ ಮೈತ್ರಿಕೂಟದ ನಾಯಕರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ವಿಪಕ್ಷ ನಾಯಕರು ಒಗ್ಗಟ್ಟಾಗಿದ್ದೆವೆ ಎಂಬ ಸಂದೇಶವನ್ನು ಕಾಂಗ್ರೆಸ್ ರವಾನಿಸಿದೆ. ಈ ಬಾರಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವರ್ಸಸ್​ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾಳಗ ಪಕ್ಕಾ ಆಗಿದೆ. ಇದನ್ನು ರಾಗಾ ಯಾವ ರೀತಿ ಬಳಸಿಕೊಳ್ತಾರೆ ಅಂತ ಕಾದುನೋಡಬೆಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment