newsfirstkannada.com

ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಇಂದು ಚಾಲನೆ.. ಸಿದ್ದರಾಮಯ್ಯ ಭಾಗವಹಿಸ್ತಾರಾ?

Share :

Published January 14, 2024 at 6:36am

Update January 14, 2024 at 6:44am

  ಈ ಬಾರಿ ರಾಹುಲ್​ ಗಾಂಧಿ ಎಲ್ಲಿಂದ ಜೋಡೋ ಯಾತ್ರೆ ಆರಂಭಿಸ್ತಾರೆ?

  ಈಗಾಗಲೇ ಯಶಸ್ವಿಯಾಗಿದ್ದ ಭಾರತ್ ಜೋಡೋ ಯಾತ್ರೆಯ ಭಾಗ- 1

  ಪ್ರಧಾನಿ ಮೋದಿಯನ್ನ ಕಟ್ಟಿ ಹಾಕಲು ಕಾಂಗ್ರೆಸ್​​ನಿಂದ ಬಲಿಷ್ಠ ಯಾಗ

ಪ್ರಧಾನಿ ಮೋದಿ ಎಂಬ ಅಶ್ವಮೇಧ ಕುದುರೆಗೆ ಲಗಾಮು ಹಾಕಲು ವಿಪಕ್ಷಗಳು ಕಾರ್ಯತಂತ್ರ ಹೆಣೆಯುತ್ತಿವೆ. ಇದಕ್ಕಾಗಿ ಈಗಾಗಲೇ ಒಂದು ಬಾರಿ ಭಾರತದ ಬೀದಿ ಬೀದಿಗಳಲ್ಲಿ ಸಂಚರಿಸಿ ಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೊಂದು ಯಾತ್ರೆ ಕೈಗೊಳ್ಳಲಿದ್ದಾರೆ. ಇಂದಿನಿಂದ ನ್ಯಾಯ ಯಾತ್ರೆ ಆರಂಭಿಸಲಿದ್ದಾರೆ.

ಭಾರತ್ ಜೋಡೋ ಯಾತ್ರೆ ಪ್ರಧಾನಿ ಮೋದಿ ನೇತೃತ್ವದ ಬಲಿಷ್ಠ ಕೇಂದ್ರ ಸರ್ಕಾರದ ವಿರುದ್ಧ ಹಸ್ತ ಪಡೆ ಕೈಗೊಂಡ ಯಾತ್ರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಸದ್ಯ ಇದರ ಯಶಸ್ಸಿನ ಅಲೆಯಲ್ಲಿರುವ ಕೈ ಪಡೆ ಮತ್ತೊಂದು ಸುತ್ತಿನ 2.0 ಯಾತ್ರೆ ಕೈಗೊಂಡಿದೆ.

ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆಯಿಂದ ಯಾತ್ರೆಗೆ ಚಾಲನೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ನ್ಯಾಯ ಯಾತ್ರೆಯು ಇಂದು ಮಣಿಪುರದ ಥೌಬಾಲ್‌ ಜಿಲ್ಲೆಯ ಖಾಸಗಿ ಮೈದಾನದಿಂದ ಆರಂಭವಾಗಲಿದೆ. ಭದ್ರತೆ ಕಾರಣಕ್ಕೆ ಮಣಿಪುರ ರಾಜಧಾನಿ ಇಂಫಾಲದ ಅರಮನೆ ಮೈದಾನದಿಂದ ಯಾತ್ರೆ ಆರಂಭಿಸಲು ಅನುಮತಿ ನೀಡಲು ಮಣಿಪುರ ಸರ್ಕಾರ ನಿರಾಕರಿಸಿತ್ತು. ಆದ್ರೆ ಥೌಬಾಲ್‌ ಜಿಲ್ಲೆಯ ಖಾಸಗಿ ಮೈದಾನದಲ್ಲಿ ಯಾತ್ರೆ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಬಾರದೆಂದು ಷರತ್ತುಬದ್ಧ ಅನುಮತಿ ನೀಡಿದ್ರಿಂದ ಅಲ್ಲಿಂದ ಯಾತ್ರೆ ಆರಂಭವಾಗಲಿದೆ. ಯಾತ್ರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ.

ರಾಹುಲ್ ಗಾಂಧಿ ಯಾತ್ರೆ 2.0

 • ಮಣಿಪುರದಿಂದ ಮುಂಬೈವರೆಗೆ 67 ದಿನಗಳ ಕಾಲ ಸಾಗಲಿರುವ ಯಾತ್ರೆ
 • ದೇಶದ ಆರ್ಥಿಕ, ಸಾಮಾಜಿಕ ವಿಚಾರ, ಬಡತನ, ನಿರುದ್ಯೋಗ, ಬೆಲೆ ಏರಿಕೆ
 • ಪ್ರಸಕ್ತ ರಾಜಕೀಯ ವಿಚಾರ, ಮಹಿಳೆಯರ ರಕ್ಷಣೆ ಮತ್ತಿತರ ವಿಚಾರ ಪ್ರಸ್ತಾಪ
 • ಕಳೆದ ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ್‌ ಜೋಡೊ ಯಾತ್ರೆ
 • ನ್ಯಾಯ ಯಾತ್ರೆ 15 ರಾಜ್ಯಗಳ 110 ಜಿಲ್ಲೆಗಳಲ್ಲಿ 6,713 ಕಿ.ಮೀ. ಸಂಚಾರ
 • ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ
 • ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ
 • ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರದಲ್ಲಿ ಯಾತ್ರೆ

ನ್ಯಾಯ್ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಮಣಿಪುರದಲ್ಲಿ ರಾಹುಲ್ ಗಾಂಧಿ ನಡೆಸಲಿರುವಂತ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ 9.30ಕ್ಕೆ ಹೆಚ್‌ಎಎಲ್ ಏರ್ ಪೋರ್ಟ್​ನಿಂದ ವಿಶೇಷ ವಿಮಾನದಲ್ಲಿ ಮಣಿಪುರಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಭಾಗಿಯಾದ ಬಳಿಕ ಸಂಜೆ ವೇಳೆಗೆ ವಾಪಸ್ ಆಗಲಿದ್ದಾರೆ.

ಕೇಂದ್ರದ ವಿರುದ್ಧ ಅದರಲ್ಲೂ ಮೋದಿ ಎಂಬ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ವಿಪಕ್ಷಗಳು ತಂತ್ರ ಹೆಣೆದಿವೆ. ಈಗಾಗಲೇ ಒಂದು ಭಾರತ ಜೋಡೋ ಯಾತ್ರೆ ಮಾಡಿ ಸೈ ಎನಿಸಿಕೊಂಡಿರುವ ರಾಹುಲ್ ಗಾಂಧಿ ಇಂದಿನಿಂದ ತಮ್ಮ ಯಾತ್ರೆ 2.0 ಆರಂಭಿಸಲಿದ್ದಾರೆ. ಮಣಿಪುರ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದರಿಂದ ಎಷ್ಟು ಜನ ಭಾಗಿಯಾಗ್ತಾರೆ ಅಂತ ಕಾದುನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಇಂದು ಚಾಲನೆ.. ಸಿದ್ದರಾಮಯ್ಯ ಭಾಗವಹಿಸ್ತಾರಾ?

https://newsfirstlive.com/wp-content/uploads/2023/07/Rahul-Gandhi-1.jpg

Load More