newsfirstkannada.com

ಪ್ರಧಾನಿ ಮೋದಿಗೆ ಸವಾಲ್; ಅಧಿಕಾರಕ್ಕೆ ಸಂಪತ್ತು ಮರು ಹಂಚಿಕೆ ಮಾಡ್ತೇವೆ ಎಂದ ರಾಹುಲ್

Share :

Published April 24, 2024 at 6:10am

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಂಪತ್ತಿನ ಮರುಹಂಚಿಕೆ ಪ್ರತಿಜ್ಞೆ

    ಸಂಪತ್ತು ಕುರಿತು ಸರ್ವೇ ನಡೆಸಲು ಧ್ವನಿ ಎತ್ತಿದ ಕಾಂಗ್ರೆಸ್

    ರಣಕಣದಲ್ಲಿ ಸಂಪತ್ತಿನ ಮರುಹಂಚಿಕೆ ವಿಚಾರ ಪ್ರತಿಧ್ವನಿ

ಲೋಕಸಭಾ ಚುನಾವಣೆ ಹೊತ್ತಲ್ಲೇ ದೇಶದ ಸಂಪತ್ತಿನ ಸೀಕ್ರೆಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಕಾಂಗ್ರೆಸ್​-ಬಿಜೆಪಿ ನಡುವೆ ಸಂಪತ್ತಿನ ಸಮರವೇ ಶುರುವಾಗಿದೆ. ದೇಶದ ಸಂಪತ್ತು ಸರ್ವೇ ಕುರಿತು ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಕೈ ನಾಯಕ ರಾಹುಲ್ ಗಾಂಧಿ ಕೂಡ ಸಂಪತ್ತು ಸರ್ವೇ ಬಗ್ಗೆ ಧ್ವನಿ ಎತ್ತಿದ್ದಾರೆ. ಪ್ರಧಾನಿ ಮೋದಿಯ ಸಂಪತ್ತಿನ ಸರ್ವೇ ಸವಾಲ್​​ ಸ್ವೀಕರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ಸಂಪತ್ತು ಯಾರ ಬಳಿ ಅಡಗಿದೆ ಎಂಬ ಬಗ್ಗೆಯೂ ಲೆಕ್ಕ ಮಂಡಿಸಿದೆ.

ಪ್ರಧಾನಿ ಮೋದಿ ಸವಾಲ್​ಗೆ ಕಾಂಗ್ರೆಸ್ ಪ್ರತಿಸವಾಲ್!

ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಮರಿಗಿದೆ ಅಂತ ಕಾಂಗ್ರೆಸ್ ಹೇಳಿಕೆ ಉಲ್ಲಂಘಿಸಿ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ ಸಂಪತ್ತಿಗೆ ಸವಾಲ್ ಹಾಕಿದ್ದರು. ಈ ಮಾತು ರಣಕಣದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ಕೂಡ ಕಂಪಿಸಿತ್ತು. ಇದೇ ವಿಚಾರ ಈಗ ರಾಜಕೀಯ ವಾಕ್ಸಮರಕ್ಕೆ ಕಾರಣ ಆಗಿದೆ. ಹೈದ್ರಾಬಾದ್​​​ನಲ್ಲಿ ಚುನಾವಣಾ ಪ್ರಚಾರದಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೌದು ದೇಶದ ಸಂಪತ್ತು ಕುರಿತು ಸರ್ವೇ ನಡೆಸಬೇಕು ಅಂತ ಮೋದಿ ಮಾತಿಗೆ ಧ್ವನಿಗೂಡಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ದೇಶವನ್ನು ಎಕ್ಸ್-ರೇ ಮಾಡುತ್ತೇವೆ, ಹಾಲು ಹಾಲು ಹಾಗೂ ನೀರು ನೀರಾಗುತ್ತದೆ. ಯಾರ ಬಳಿ ಸಂಪತ್ತು ಅಡಗಿದೆ ಅನ್ನೋದು ತಿಳಿಯಬೇಕಿದೆ ಅಂತ ಗುಡುಗಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದ್ರೆ ದೇಶವನ್ನು ಎಕ್ಸ್​-ರೇ ಮಾಡುತ್ತೇವೆ. ಆಗ ಹಾಲು ಹಾಲಾಗುತ್ತೆ, ನೀರು ನೀರಾಗಲಿದೆ. ದೇಶದ ಸಂಪತ್ತು ಯಾರ ಬಳಿ ಅಡಗಿದೆ ಅನ್ನೋದು ಗೊತ್ತಾಗಲಿದೆ. ಈ ಐತಿಹಾಸಿಕ ಗೆಲುವಿನ ಬಳಿಕ ಕ್ರಾಂತಿಕಾರಕ ಕೆಲಸಕ್ಕೆ ಕೈ ಹಾಕಲಿದ್ದೇವೆ.

ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಇದನ್ನೂ ಓದಿ: ಅಬ್ಬಾ! ಬೆಂಗಳೂರಲ್ಲಿ ಸಾವಿನ ದವಡೆಯಿಂದ ಜಸ್ಟ್ ಮಿಸ್‌ ಆದ ವೈದ್ಯ ದಂಪತಿ; ಈ ಬಗ್ಗೆ ಹೇಳಿದ್ದೇನು?

ದೇಶದ ಸಂಪತ್ತಿನ ಲೆಕ್ಕ ಕೊಟ್ಟ ಕೈ ವಕ್ತಾರ ಜೈರಾಮ್ ರಮೇಶ್

ಇನ್ನು, ರಾಹುಲ್ ಗಾಂಧಿ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ ಕೂಡ ದೇಶದ ಸಂಪತ್ತಿನ ಲೆಕ್ಕ ನೀಡಿದ್ದಾರೆ. 2012ರಿಂದ 2021ರ ಅವಧಿಯಲ್ಲಿ ಸೃಷ್ಟಿಸಿದ ಶೇ.40 ರಷ್ಟು ಸಂಪತ್ತು ದೇಶದ ಶೇ.1 ರಷ್ಟು ಜನರ ಬಳಿ ಇದೆ. ಅಂದಾಜು ಶೇ.64 ರಷ್ಟು ಜಿಎಸ್‌ಟಿ ದೇಶದ ಬಡವರು, ಮಧ್ಯಮ ವರ್ಗದಿಂದ ಬಂದಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಮಾರಾಟ ಮಾಡಿದ ಸಾರ್ವಜನಿಕ ಆಸ್ತಿ, ಸಂಪನ್ಮೂಲ ಒಂದು ಅಥವಾ 2 ಕಂಪನಿಗೆ ಹೋಗಿದೆ. 21 ಬಿಲಿಯನೇರ್​ಗಳ ಬಳಿ 70 ಕೋಟಿ ಭಾರತೀಯರಿಗಿಂತ ಹೆಚ್ಚಿನ ಸಂಪತ್ತು ಇದೆ ಅಂತ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಒಟ್ಟಾರೆ, ಸಂಪತ್ತಿನ ಮರುಹಂಚಿಕೆ ವಿಚಾರ ರಣಕಣದಲ್ಲಿ ಪ್ರತಿಧ್ವನಿಸಿದೆ. ಸಂಪತ್ತಿನ ಸಮರ ಚುನಾವಣೆಯಲ್ಲಿ ಯಾರಿಗೆ ವರವಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗೆ ಸವಾಲ್; ಅಧಿಕಾರಕ್ಕೆ ಸಂಪತ್ತು ಮರು ಹಂಚಿಕೆ ಮಾಡ್ತೇವೆ ಎಂದ ರಾಹುಲ್

https://newsfirstlive.com/wp-content/uploads/2024/04/modi-and-rahulk.jpg

Load More